Author: Satyakam NewsDesk

  • ಯಾರೋದೋ ಮಾತು ಕೇಳಿ ಕಾಲಹರಣ ಮಾಡಿದರೇ ತಕ್ಕ ಪಾಠ: ನಾದ್ ಇಟಗಿ ಎಚ್ಚರಿಕೆ.

    ಯಾರೋದೋ ಮಾತು ಕೇಳಿ ಕಾಲಹರಣ ಮಾಡಿದರೇ ತಕ್ಕ ಪಾಠ: ನಾದ್ ಇಟಗಿ ಎಚ್ಚರಿಕೆ.

    ಸತ್ಯಕಾಮ ವಾರ್ತೆ ಯಾದಗಿರಿ: 

    ಒಳಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಮತ್ತು ಕೂಡಲೇ ಜಾರಿಗೊಳಿಸುವಂತೆಯೇ ಆಗ್ರಹಿಸಿ ಮಾದಿಗ ಸಮಾಜದ ಜಿಲ್ಲೆಯ ಸಾವಿರಾರು ಜನರು ಶುಕ್ರವಾರ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಅಲೆಮಾರಿ,ಅರೆಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ದೇವೇಂದ್ರನಾಥ ನಾದ್ ಮತ್ತು ನಗರಸಭೆ ಸದಸ್ಯ ಹಣಮಂತ ಇಟಗಿ ನೇತೃತ್ವದಲ್ಲಿ ಬೆಳಗ್ಗೆ ತಹಸಿಲ್ ಕಚೇರಿ ಬಳಿ ಜಮಾಯಿಸಿದ ಮಾದಿಗ ಸಮಾಜದ ಸಾವಿರಾರು ಜನರು ಜೈ ಮಾದಿಗ, ಜೈ ಜೈ ಮಾದಿಗ ಎಂಬ ಘೋಷಣೆಗಳನ್ನು ಕೂಗಿ ಒಳಮೀಸಲಾತಿಗಾಗಿ ಆಗ್ರಹಿಸಿದರು. ಅಲ್ಲಿಂದ ಹೊರಟ ಪ್ರತಿಭಟನಾ ಪಾದಯಾತ್ರೆ ಶಾಸ್ತ್ರಿ ಚೌಕ ಮೂಲಕ ನೇತಾಜಿ ಸರ್ಕಲ್ ಬಳಿ ಬಂದು ಜಮಾಗೊಂಡಿತು.

    ಅಲ್ಲಿ‌ ಸೇರಿದ್ದ ಅಪಾರ ಜನಸ್ತೊಮವನ್ನು ಉದ್ದೇಶಿಸಿ ಮಾತನಾಡಿದ ನಾದ್, ಇಟಗಿ ಅವರು, ಕಳೆದ ಮೂವತ್ತು ವರ್ಷಗಳಿಂದ ನಡೆಸಿದ ವಿವಿಧ ಹಂತದ ಹೋರಾಟಗಳ ಫಲವಾಗಿ ಸುಪ್ರೀಂಕೋರ್ಟ್ ಕಳೆದ ಹಲವಾರು ತಿಂಗಳ ಹಿಂದೆಯೇ ಒಳಮೀಸಲಾತಿ ಜಾರಿ ಮಾಡುವಂತೆಯೇ ಆದೇಶ ನೀಡಿದೆ. ಆದರೇ ಸಿಎಂ ಸಿದ್ದರಾಮಯ್ಯ ಅವರು ಕೆಲವರ ಒತ್ತಡಕ್ಕೆ ಮಣಿದು ಇಲ್ಲದೊಂದು ನೆಪ ಹೇಳಿ ಮುಂದಕ್ಕೆ ಹಾಕುವ ಮೂಲಕ ಮಾದಿಗ ಸಮಾಜಕ್ಕೆ ಘೋರ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿದರು.

    ದೇಶದ ಬೇರೆ,ಬೇರೆ ರಾಜ್ಯಗಳಲ್ಲಿ ಈಗಾಗಲೇ ಒಳಮೀಸಲಾತಿ ಜಾರಿ ಮಾಡಲಾಗಿದೆ. ಅಲ್ಲಿ ಇರದ ತೊಂದರೆ ನಮ್ಮ ರಾಜ್ಯದಲ್ಲಿ ಅಂತಾದ್ದೇನು ತೊಂದರೆ ಇದೆ ಎಂದು ಅವರು ಪ್ರಶ್ನಿಸಿದರು.

    ಸಂವಿಧಾನಬದ್ದ ಹಕ್ಕು ಪಡೆಯಲು ಮೂರು ದಶಕಗಳ ಕಾಲ ಹೋರಾಟವೇ ಆಗಿದೆ. ಎಷ್ಟೋ ಜನರು ಇದಕ್ಕಾಗಿಯೇ ಜೀವನ‌ ಮುಡುಪಿಟ್ಟು ಇಹಲೋಕ ತ್ಯಜಿಸಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಅರ್ಥ ಆಗಬೇಕು. ದೂರದಲ್ಲಿ ಕುಳಿತಿರುವ ಯಾರೋದೋ ಮಾತು ಕೇಳಿ ಕಾಲಹರಣ ಮಾಡುವ ಮೂಲಕ ಈ ದೊಡ್ಡ ಸಮಾಜಕ್ಕೆ ಮಾಡುತ್ತಿರುವ ಅನ್ಯಾಯಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ದೇವೇಂದ್ರನಾಥ ಮತ್ತು ಹಣಮಂತ ಅವರು ಎಚ್ಚರಿಸಿದರು.

    ಕಾರಣ, ಇನ್ನೂ ನಮ್ಮ ಸಹನೆಕಟ್ಟೆ ಒಡೆಯುವ ಮುಂಚೆಯೇ ಕೂಡಲೇ ಒಳಮೀಸಲಾತಿ ಜಾರಿ ಮಾಡಿ ನಮ್ಮ ಹಕ್ಕು ನಮಗೆ ಕೊಡಬೇಕೆಂದು ಒತ್ತಾಯಿಸಿದರು.

    ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ, ವಡಗೇರಾ, ಕೊಡೆಕಲ್, ಕೆಂಭಾವಿ, ಗುರುಮಠಕಲ್, ಹುಣಸಗಿ ತಾಲೂಕುಗಳಿಂದ ಅಪಾರ ಸಂಖ್ಯೆಯಲ್ಲಿ ಸಮಾಜದ ಜ‌ನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸ್ಥಳಕ್ಕೆ ಆಗಮಿಸಿದ ಡಿಸಿ ಹರ್ಷಲ್ ಭೋಯರ್ ಅವರಿಗೆ ಮುಖಂಡರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಡಿಸಿ ಕೂಡಲೇ ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದರು.

    ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖರು

    ದೇವಿಂದ್ರನಾಥ ನಾದ, ಚೆನ್ನಯ್ಯ ಮಾಳಿಕೇರಿ ಹಣಮಂತ ಇಟಗಿ, ಮಲ್ಲಣ್ಣ ದಾಸನ್ನಕೇರಿ, ಭೀಮಾಶಂಕರ್ ಬಿಲ್ಲವ. ವಾಸುದೇವ ಕಟ್ಟಿಮನಿ, ಚಂದ್ರಶೇಖರ ಕಡೆಸೂರು, ಬಸವರಾಜ್ ಹಗರಟಗಿ, ದಾನಪ್ಪ ಕಟ್ಟಿಮನಿ, ತಾಯಪ್ಪ ಬಡ್ಡೇಪಲ್ಲಿ, ಸಿದ್ದಣ್ಣ ಮೇಲಿನಮನಿ, ಮಲ್ಲಿಕಾರ್ಜುನ ಜಲ್ಲಪ್ಪನೋರ್, ನಿಂಗಪ್ಪ ವಡ್ಡನಲ್ಲಿ, ಆಂಜೆನೇಯ ಬಬಲಾದ, ಭೀಮಾಶಂಪ್ಪ ಗುಡಸೇ,, ಬಸವರಾಜ್ ಮೇತ್ರಿ, ಭೀಮರಾಯ ಬಂದಲ್ಲಿ, ಯಲ್ಲಪ್ಪ ಮಾಳಕೇರಿ, ಮಂಜುನಾಥ್ ದಾಸನ ಕೇರಿ ಸೇರಿದಂತೆಯೇ ಇತರರು ಭಾಗವಹಿಸಿದ್ದರು.

     

  • ಇದು ಕಾಲೇಜಾ? ಅಥವಾ ಕಾಡುಗಳ ತಾಣಾನಾ?

    ಇದು ಕಾಲೇಜಾ? ಅಥವಾ ಕಾಡುಗಳ ತಾಣಾನಾ?

    ವರದಿ; ಕುದಾನ್ ಸಾಬ್

    ಸತ್ಯಕಾಮ ವಾರ್ತೆ ಯಾದಗಿರಿ

    ನಗರದ ಹೊಸ ಪದವಿ ಕಾಲೇಜಿನ ವಾಸ್ತವ ಪರಿಸ್ಥಿತಿಯನ್ನು ನೋಡಿದರೆ, ಶಿಕ್ಷಣ ಸಂಸ್ಥೆ ಎಂದು ಕರೆಯುವುದು ಲಜ್ಜೆಯ ವಿಷಯವಾಯ್ತು. ಈ ಕಾಲೇಜು ನಿಜಕ್ಕೂ ಓದುವ ಸ್ಥಳವೇ? ಅಥವಾ ಕಾಡುಮೂಲಗಳ ತಾಣವೋ? ಅನ್ನಿಸುತ್ತದೆ.

    ಹೌದು ಏಕೆಂದರೆ ಹೊಸ ಪದವಿ ಕಾಲೇಜಿನ  ಕೌಂಪೌAಡ್ ಸುತ್ತ ಬೆಳೆದಿರುವ ಜಾಲಿಗಿಡ, ತರಗತಿಯೊಳಗೆ ನುಗ್ಗುವ ಹಾವು-ಚೇಳುಗಳು, ಓಡುವ ಬದಲು ಓಡಾಟ ನಡೆಯುವ ತರಗತಿಗಳು — ಇದು ಪ್ರತಿದಿನದ ದೃಶ್ಯ. ವಿದ್ಯಾರ್ಥಿಗಳು ಪುಸ್ತಕದ ಕಡೆಗಿಂತ ಜಿಗಿತದ ಕಡೆ ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

    ಅದರಲ್ಲೂ ಕಾಲೇಜಿನ ಕಟ್ಟಡದ ಗೋಡೆಗಳ ಮೇಲೆ ಬೆಳೆದಿರುವ ಬಳ್ಳಿಗಳು ಆವರಿಸಿರುವುದರಿಂದ ಕೆಲವು ಕಿಟಕಿಗಳು ಮುಚ್ಚಲಾಗದ ಸ್ಥಿತಿಯಲ್ಲಿವೆ, ಇಂತಹ ಸ್ಥಿತಿ ಒಂದೆರಡು ದಿನಗಳಲ್ಲಿ ಉಂಟಾಗಿಲ್ಲ. ವರ್ಷಗಳಿಂದ ನಿರ್ವಹಣೆಗೆ ಸಂಬAಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಈ ಪರಿಸ್ಥಿತಿಗೆ ಕಾರಣವಾಗಿದೆ.

    ಅಲ್ಲದೇ ವಿದ್ಯಾರ್ಥಿಗಳು ಈ ಬಗ್ಗೆ ಪ್ರಾಂಶುಪಾಲರ ಗಮನಕ್ಕೆ ತಂದರೇ ನೀವೇ ಜಾಲಿಗಿಡ ತೆಗೆದುಹಾಕಿ! ಸ್ವಚತೆ ಮಾಡಿ ಎಂದು ಹೇಳುತ್ತಾರಂತೆ, ಇದು ಪ್ರಾಶುಂಪಾಲರಿAದ ಬರಬಹುದಾದ ಮಾತುಗಳಾ? ಇದರಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣದಿಂದ ನಂಬಿಕೆ ಹೋಗುವುದಕ್ಕಿಂತ ದುರಂತ ಇನ್ನೊಂದು ಇಲ್ಲ.

    ವಿದ್ಯಾರ್ಥಿಗಳ ಓದು ಕೇವಲ ಪಾಠಪುಸ್ತಕಗಳ ಸಾಲುಗಳಲ್ಲಿ ಸೀಮಿತವಲ್ಲ. ಅವರಿಗೆ ಬೇಕಾಗಿರುವ ಭದ್ರತೆ, ಸ್ವಚ್ಛತೆ ಮತ್ತು ಮಾನವೀಯ ಮೌಲ್ಯಗಳಿಂದ ತುಂಬಿದ  ವಾತಾವರಣ. ಆದರೆ ಇದನ್ನೆಲ್ಲಾ ಮರೆತು ಬಿಟ್ಟು ಶಿಕ್ಷಣ ಸಂಸ್ಥೆಗಳ ನಿರ್ವಹಣೆಯನ್ನು ನಿರ್ಲಕ್ಷಿಸಿದಾಗ, ವಿದ್ಯಾರ್ಥಿಯ ಭವಿಷ್ಯವೇ ಹದಗೆಡುವ ಸ್ಥಿತಿಗೆ ತಲುಪುತ್ತದೆ. ಶಾಲೆ ಅಥವಾ ಕಾಲೇಜು ಕೇವಲ ಕಟ್ಟಡವಲ್ಲ – ಅದು ನೂರು ಕನಸುಗಳ ನೆಲೆ. ಈ ನೆಲೆ ಶುದ್ಧವಾಗಿರಬೇಕು, ಸುರಕ್ಷಿತವಾಗಿರಬೇಕು. ಏಕೆಂದರೆ ನಿರ್ವಹಣೆ ನಿಲ್ಲಿಸಿದಾಗ, ಶಿಕ್ಷಣದ ಭವಿಷ್ಯವೂ ನಿಲ್ಲುತ್ತದೆ! ಎಂಬುದನ್ನು ಅರಿತು ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ವಾತಾವಾರಣ ಕಲ್ಪಿಸಲು ಆಡಳಿತ ವರ್ಗ ಅಥವಾ ಪ್ರಾಂಶುಪಾಲರು ಮುಂದಾಗತ್ತಾರೋ ಎಂಬುದನ್ನು ಕಾದು ನೋಡೋಣ.

     

    ಕಾಲೇಜಿನ  ಸುತ್ತಮುತ್ತ  ಜಂಗಲದAತಾಗಿ ಬೆಳೆದಿರುವ  ಜಾಲಿಗಿಡಗಳು ವಿದ್ಯಾರ್ಥಿಗಳ ಸುರಕ್ಷತೆಗೆ ಮಾತ್ರವಲ್ಲದೆ  ವಿದ್ಯಾಭ್ಯಾಸಕ್ಕೂ  ತೀವ್ರ  ಅಡ್ಡಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಲೇಜು ಆವರಣದ ಸುತ್ತಮುತ್ತಲನ್ನು ತಕ್ಷಣ ಸ್ವಚ್ಛಗೊಳಿಸಿ, ವಿದ್ಯಾಭ್ಯಾಸಕ್ಕೆ ಯೋಗ್ಯವಾದ ಶಾಂತ, ಸ್ವಚ್ಛ ಮತ್ತು ಭದ್ರ ವಾತಾವರಣವನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ.

    – ಹೆಸರೇಳಲಿಚ್ಛಿಸದ ವಿದ್ಯಾರ್ಥಿ

  • ಕುರಕುಂದಾ ಗ್ರಾಮಕ್ಕೆ ಶಾಸಕರ ಭೇಟಿ: ಮೃತ ಮಕ್ಕಳಿಗೆ ಅಂತಿಮ ನಮನ, ಕುಟುಂಬಕ್ಕೆ ಸಾಂತ್ವನ

    ಕುರಕುಂದಾ ಗ್ರಾಮಕ್ಕೆ ಶಾಸಕರ ಭೇಟಿ: ಮೃತ ಮಕ್ಕಳಿಗೆ ಅಂತಿಮ ನಮನ, ಕುಟುಂಬಕ್ಕೆ ಸಾಂತ್ವನ

    [web_stories title=”true” excerpt=”false” author=”false” date=”false” archive_link=”true” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”5″ order=”DESC” orderby=”post_title” view=”circles” /] ಸತ್ಯಕಾಮ ವಾರ್ತೆ ಯಾದಗಿರಿ:

    ಬೆಂಗಳೂರಿನಲ್ಲಿ ಮೃತ ಪಟ್ಟ ಯಾದಗಿರಿ ಮತಕ್ಷೇತ್ರ ಕುರಕುಂದಾ ಗ್ರಾಮದ ಚಾಂದಪಾಶಾ ಎಂಬುವವರ ಮಕ್ಕಳ ಕಳಬರಹಕ್ಕೇ ಅಂತಿಮ‌ ನಮನ ಸಲ್ಲಿಸಿದ ಶಾಸಕ ಚನ್ನಾರಡ್ಡಿ ಪಾಟೀಲ್ ಅವರು, ಚಿಕ್ಕ ಮಕ್ಕಳ ಸಾವು ದುಖಃ ತಂದಿದೆ. ಹೆತ್ತವರ ಮುಂದೆ ಮಕ್ಕಳು ಸಾಯಿಬಾರದು, ಆ ದುಖಃಕ್ಕೆ ಕೊನೆಯೇ ಇಲ್ಲ, ಆದರೂ ಧೈರ್ಯದಿಂದ ಇದ್ದು ಜೀವನ ನಡೆಸಿರಿ ಎಂದು ಸಾಂತ್ವನ ಹೇಳಿದರು.

    ಗ್ರಾಮದ ಅವರ ಮನೆಗೆ ತೆರಳಿದ್ದ ಶಾಸಕರು ಮಕ್ಕಳನ್ನು ಕಳೆದಕೊಂಡ ಹೆತ್ತವರ ದುಖಃ ಕಂಡು ಮರುಗಿದರು. ನಾನು ಮಾಡುವ ಈ ವೈಯಕ್ತಿಕ ಸಹಾಯ ದೊಡ್ಡದಲ್ಲ, ಈ ಬಗ್ಗೆ ಸಿಎಂ ಗಮನಕ್ಕೆ ತಂದು ಹೆಚ್ಚಿನ‌ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದರು. 
     
    ಈ ವೇಳೆ ಕಾಸೀಮ ಮುತ್ತ್ಯಾ, ಡಾ. ರಾಜು ಬೆಳಗೇರಿ,ಕಾಶೀಮ್ ಗುಲಾಮಿ, ಮಕಧುಮ್, ಶರಣಬಸವ ಕುರಕುಂದಿ, ಮೆಹಬೂಬ್, ಶರಣ ಗೌಡ, ಬಸನಗೌಡ, ಅಂಬ್ರೆಷ್, ರಫಿ ಬೆಳಗೇರ, ಮೋಸಪ್ಪಾ, ಹಾಗೂ ಕುರಕುಂದಿ ಗ್ರಾಮಸ್ಥರು ಇದ್ದರು.
  • ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

    ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

    ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

    ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಸುಕ್ಷೇತ್ರ ಗಬ್ಬೂರಿನ ಮಹಾಶೈವ ಧರ್ಮಪೀಠದ 2025ನೇ ಸಾಲಿನಲ್ಲಿ ಕೊಡ ಮಾಡುವ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆಯಾದ,ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಹಾಸನದ ಅವರ ನಿವಾಸದಲ್ಲಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

    ಅಹ್ವಾನ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾನು ಮುಸ್ತಾಕ್ ಅವರು ಗಬ್ಬೂರಿನ ಮಹಾಶೈವ ಧರ್ಮಪೀಠದ ಅಧ್ಯಕ್ಷರಿಗೂ ಸಮಿತಿಯ ಸರ್ವ ಸದಸ್ಯರಿಗೂ ಅಭಿಮಾನಿಗಳ ವಿಶ್ವಾಸಕ್ಕೆ ಕೃತಜ್ಞತೆ ತಿಳಿಸಿ,ಕಲ್ಯಾಣ ಕರ್ನಾಟಕದ ಅನೇಕ ಶರಣರ ವಿಚಾರಧಾರೆಗಳನ್ನು ಅರಿತು,ನಿಮ್ಮೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ಅಭಿನಂದನೆಗಳು ಸಲ್ಲಿಸಿ ಮಾತನಾಡಿದರು.

    ಬಾನು ಮುಸ್ತಾಕ್ ಅವರು ಹೋರಾಟ,ಸಾಹಿತ್ಯ,ಸಾಂಸ್ಕೃತಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ, ಅವರು ರಚಿಸಿರುವ *ಎದೆಯ ಹಣತೆ ಕೃತಿಗೆ 2025ನೇ ಸಾಲಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದ್ದು ಇಡೀ ಕನ್ನಡಿಗರು ಹೆಮ್ಮೆಪಡುವಂಥ ವಿಷಯ ಎಂದು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಡಾ: ಎನ್.ಹೆಚ್. ಪೂಜಾರ ಸಂತೋಷ ವ್ಯಕ್ತಪಡಿಸಿ ಮಾತನಾಡಿದರು.

    ಗಬ್ಬೂರಿನ ಮಹಾಶೈವ ಧರ್ಮ ಪೀಠದಲ್ಲಿ ಆಗಸ್ಟ್ 9ರಂದು ನೂಲು ಹುಣ್ಣಿಮೆಯ ದಿವಸ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿರುವ ಕುಮಾರಸ್ವಾಮಿಗಳ ಹುಟ್ಟು ಹಬ್ಬದ ಪ್ರಯುಕ್ತ ಭಾನು ಮುಸ್ತಾಕ್ ಅವರಿಗೆ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮಿತಿಯ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ ಹೇಳಿದರು.

  • ಎಎಪಿಎಫ್ ಸಂಯೋಜಕ ಅನ್ವರ್ ಜಮಾದಾರ್ ಬೀಳ್ಕೊಡುಗೆ 

    ಎಎಪಿಎಫ್ ಸಂಯೋಜಕ ಅನ್ವರ್ ಜಮಾದಾರ್ ಬೀಳ್ಕೊಡುಗೆ 

    ಸುರಪುರ:ಕಳೆದ ಅನೇಕ ವರ್ಷಗಳಿಂದ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ತಾಲ್ಲೂಕ ಸಂಯೋಜಕರಾಗಿ ಶಿಕ್ಷಣ ರಂಗದ ಬೆಳವಣಿಗೆಗೆ ಸೇವೆ ಸಲ್ಲಿಸಿ ಕಲಬುರ್ಗಿಗೆ ವರ್ಗಾವಣೆಗೊಂಡ ಅನ್ವರ್ ಜಮಾದಾರ್ ಅವರಿಗೆ ನಗರದ ಎಪಿಡಿ ಸಂಸ್ಥೆ ವತಿಯಿಂದ ವರ್ಗಾವಣೆಗೊಂಡ ಪ್ರಯುಕ್ತ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅನ್ವರ್ ಜಮಾದಾರ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸುರಪುರ ಮತ್ತು ಹುಣಸಿಗಿ ತಾಲೂಕಿನಲ್ಲಿ ಎಪಿಡಿ ಸಂಸ್ಥೆ ವತಿಯಿಂದ ವಿಶೇಷ ಚೇತನರ ಮಕ್ಕಳ ಬಗ್ಗೆ ಇರುವ ಕಾಳಜಿ ಅವರಿಗೆ ಅವಶ್ಯಕತೆ ಸಾಮಗ್ರಿಗಳನ್ನು ತುಂಬಾ ಕಾಳಜಿಯಿಂದ ಕೊಡುತ್ತಿರುವುದು ಅತ್ಯಂತ ಶ್ಲಾಘನೀಯವಾದದ್ದು. ಅವರ ತಂಡದೊಂದಿಗಿನ ನನ್ನ ಪಯಣ ಸದಾ ನೆನಪಿನ ಬುತ್ತಿಯಲ್ಲಿರುತ್ತದೆ ಎಂದು ಅಭಿಪ್ರಾಯಪಟ್ಟರು.
    ಸಮಾರಂಭದಲ್ಲಿ ಎಪಿಡಿ ಸಂಸ್ಥೆಯ ಜಿಲ್ಲಾ ಸಂಯೋಜಕ ಸಂಪ್ರೀತಾ ಮಾತನಾಡುತ್ತಾ, ಎಪಿಡಿ ಸಂಸ್ಥೆಯ ಸುರಪುರದಲ್ಲಿ ಆರಂಭದಿಂದಲೂ ಇಲ್ಲಿವರೆಗೆ ನಮಗೆ ಅನ್ವರ್ ಜಮಾದಾರ್ ಅವರು ಪ್ರತಿಯೊಂದು ಕಾರ್ಯಗಳಿಗೆ ಬೆನ್ನೆಲುಬಾಗಿದ್ದರು, ನಮ್ಮ ಸಂಸ್ಥೆ ವತಿಯಿಂದ ಯಾವುದೇ ಜವಾಬ್ದಾರಿ ನೀಡಿದರು ಪ್ರೀತಿಯಿಂದ ಅದನ್ನು ತುಂಬಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು, ಅದರಲ್ಲೂ ವಿಶೇಷ ಚೇತನ ಮಕ್ಕಳಿಗೆ ಅವರಿಲ್ಲಿರುವ ಕಾಳಜಿ ಅಪಾರವಾದದ್ದು ಎಂದರು.
    ತಾಲೂಕ್ ಸಂಯೋಜಕ ಗಿರೀಶ್ ಕುಲಕರ್ಣಿ ಮಾತನಾಡಿ, ಅನ್ವರ್ ಜಮಾದಾರ ಅವರೊಂದಿಗೆ ಕಾರ್ಯ ಮಾಡುವಾಗ ನಾನು ಗಮನಿಸಿದ ಪ್ರಮುಖ ಅಂಶಗಳೆಂದರೆ ಅತ್ಯಂತ ಸರಳ ವ್ಯಕ್ತಿ ,ಸ್ನೇಹಪರತೆ,ಸಾಮಾಜಿಕ ಕಾಳಜಿ ನಮ್ಮೆಲ್ಲರಿಗೂ ದಾರಿ ದೀಪವಾಗಲಿ ಎಂದರು.
    ಕಾರ್ಯಕ್ರಮದಲ್ಲಿ ಮಹಾಂತೇಶ್ ಲಕ್ಷ್ಮಿ ಹಾಗೂ ಎಪಿಡಿ ಸಂಸ್ಥೆಯ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
  • ಅಗ್ನಿವೀರ್ ನೇಮಕಾತಿ ರ‍್ಯಾಲಿ: ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ಬಿಡುಗಡೆ

    ಅಗ್ನಿವೀರ್ ನೇಮಕಾತಿ ರ‍್ಯಾಲಿ: ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ಬಿಡುಗಡೆ

    ಯಾದಗಿರಿ: ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ಅಗ್ನಿವೀರ್ ನೇಮಕಾತಿ ರ‍್ಯಾಲಿಯು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08 ರಿಂದ ಆಗಸ್ಟ್ 25ರವರೆಗೆ ನಡೆಯಲಿದ್ದು, ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ಬಿಡುಗಡೆ ಮಾಡಲಾಗಿದೆ.

    ಆಸಕ್ತರು ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು jomdianarmy.nic.in. ನಲ್ಲಿ ಪ್ರಕಟಿಸಲಾಗಿದ್ದು, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರವೇಶ ಕಾರ್ಡ್ಗಳನ್ನು ಈಗಾಗಲೇ ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ನೀಡಲಾಗಿದೆ.

    ಸೇನೆಯಲ್ಲಿ ಎಲ್ಲಾ ವರ್ಗಗಳ ದಾಖಲಾತಿಗಾಗಿ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಸೇನೆಯಲ್ಲಿ ನಿರ್ದಿಷ್ಟಪಡಿಸಿದ ವರ್ಗಗಳಲ್ಲಿ ದಾಖಲಾತಿಗಾಗಿ ವಯಸ್ಸು, ಶಿಕ್ಷಣ ಅರ್ಹತೆ ಮತ್ತು ಇತರ ಮಾನದಂಡಗಳ ವಿವರಗಳು 12 ಮಾರ್ಚ್ 2025 ರಂದು ಆರ್ಮಿ ರಿಕ್ರೂಟಿಂಗ್ ಸಿಲಿಸ್ ಬೆಳಗಾವಿ ಪ್ರಕಟಿಸಿದ ರ‍್ಯಾಲಿ ಅಧಿಸೂಚನೆಯ ಪ್ರಕಾರ. ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಪ್ರವೇಶ ಕಾರ್ಡ್ಗಳನ್ನು ಈಗಾಗಲೇ ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ನೀಡಲಾಗಿದೆ. ಅಲ್ಲದೆ Join Indian Army Website ನಲ್ಲಿಯೂ ಲಭ್ಯವಿದೆ. ಮತ್ತು ವೈಯಕ್ತಿಕ ಕ್ರಿಯೆಯ ಲಾಗಿನ್ ಮತ್ತು ನೋಂದಾಯಿತ ಇ-ಮೇಲ್ ಐಡಿ ಮೂಲಕ ಸ್ವೀಕರಿಸಲಾಗುತ್ತದೆ.

    ಸಿಇಇ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಆಯ್ಕೆ ಮತ್ತು ಅಂತಿಮ ತೀರ್ಮಾನ ಯಾವುದೇ ದಲ್ಲಾಳಿಗಳಿಗೆ ಅಥವಾ ಮಧ್ಯವರ್ತಿಗಳಿಗೆ ಬಲಿಯಾಗದಂತೆ ಅಭ್ಯರ್ಥಿಗಳ ಎಚ್ಚರ ವಹಿಸಬೇಕೆಂದು ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

  • ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

    ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

    ಬೆಂಗಳೂರು ನಗರ ಜಿಲ್ಲೆ, ಜುಲೈ 30 (ಕರ್ನಾಟಕ ವಾರ್ತೆ) ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ / ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟ ಸೇವೆ ಸಲ್ಲಿಸಿರುವ / ಸಲ್ಲಿಸುತ್ತಿರುವ ವಿಶೇಷ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಆಸಕ್ತರು ವೆಬ್‍ ಸೈಟ್ http://www.dwdsc.karnataka.gov.in  ಗೆ ಭೇಟಿ ನೀಡಿ ಅರ್ಜಿಗಳನ್ನು ಪಡೆದು ಕನ್ನಡ ಭಾಷೆಯಲ್ಲಿ ದ್ವಿಪ್ರತಿಗಳಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಅಕ್ಟೋಬರ್‍ 15,2025ರೊಳಗಾಗಿ ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಸುಧಾರಣಾ ಸಂಸ್ಥೆಗಳ ಸಂಕೀರ್ಣ ಹೊಸೂರು ರಸ್ತೆ, ಬೆಂಗಳೂರು ನಗರ ಜಿಲ್ಲೆ-560 029 ಅಥವಾ ದೂರವಾಣಿ ಸಂಖ್ಯೆ : 080-29752324 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

  • ಮಾನವ ಕಳ್ಳ ಸಾಗಣೆ ಎನ್ನುವುದು ಸಮಾಜಕ್ಕೆ ಅಂಟಿದ ಪಿಡುಗು- ಜಿ.ಆರ್.ಬನ್ನಾಳ

    ಮಾನವ ಕಳ್ಳ ಸಾಗಣೆ ಎನ್ನುವುದು ಸಮಾಜಕ್ಕೆ ಅಂಟಿದ ಪಿಡುಗು- ಜಿ.ಆರ್.ಬನ್ನಾಳ

    ಸತ್ಯಕಾಮ ವಾರ್ತೆ ಸುರಪುರ: 

    ಮಾನವ ಕಳ್ಳ ಸಾಗಣೆ ಎನ್ನುವುದು ಇದೊಂದು ಸಮಾಜಕ್ಕೆ ಅಂಟಿದ ಪಿಡುಗಾಗಿದೆ ಎಂದು ಹಿರಿಯ ನ್ಯಾಯವಾದಿ ಗುರುಪಾದಪ್ಪ ಬನ್ನಾಳ ತಿಳಿಸಿದರು.

    ತಾಲೂಕಿನ ಲಕ್ಷಿö್ಮÃಪುರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ತಾಲ್ಲೂಕ ಕಾನೂನು ಸೇವಾ ಸಮಿತಿ,ತಾಲ್ಲೂಕ ನ್ಯಾಯವಾದಿಗಳ ಸಂಘ ಮತ್ತು ಸರಕಾರಿ ಪ್ರೌಢ ಶಾಲೆ ಲಕ್ಷಿö್ಮÃಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಮಾನವ ಕಳ್ಳ ಸಾಗಣೆಗೆ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಬಲಿಯಾಗುತ್ತಿದ್ದಾರೆ.ಕಾರಣ ಶಕ್ತಿಶಾಲಿಗಳಲ್ಲದವರು ಎನ್ನುವ ಕಾರಣಕ್ಕೆ ಮಕ್ಕಳನ್ನು ಕಳ್ಳ ಸಾಗಣೆ ಮಾಡುತ್ತಾರೆ,ಇಂತಹ ಸಮಾಜ ವಿರೋಧಿ ಚಟುವಟಿಕೆಯನ್ನು ಯಾರೂ ಬೆಂಬಲಿಸದೆ ಇದನ್ನು ತಡೆಗಟ್ಟಲು ಎಲ್ಲರು ಧ್ವನಿ ಎತ್ತಬೇಕು ಎಂದರು.

    ಇಂತಹ ಪ್ರಕರಣದಲ್ಲಿ ತೊಡಗಿದವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ ಎನ್ನುವುದನ್ನು ಎಲ್ಲರು ತಿಳಿದುಕೊಳ್ಳಬೇಕು ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಸರಕಾರಿ ಅಭಿಯೋಜಕ ಸುರೇಶ ಪಾಟೀಲ್ ಮಾತನಾಡಿ,ಮಾನವ ಕಳ್ಳ ಸಾಗಣೆ ಎನ್ನುವುದು ಅತ್ಯಂತ ಘೋರ ಅಪರಾಧವಾಗಿದೆ,ಇಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಇದೆ.ಅಲ್ಲದೆ ಮಾನವ ಕಳ್ಳ ಸಾಗಾಣಿಕೆ ಯಾಕೆ ಮಾಡುತ್ತಾರೆ ಎಂದರೆ ಕಳ್ಳ ಸಾಗಾಣಿಕೆಯಿಂದ ಅವರನ್ನು ಅತ್ಯಂತ ಕೆಟ್ಟ ಕಾರ್ಯಗಳಿಗೆ ಉಪಯೋಗಿಸಲು ಕಳ್ಳ ಸಾಗಣೆ ಮಾಡುತ್ತಾರೆ.ಯಾರೂ ಇದಕ್ಕೆ ಸಹಕರಿಸಬಾರದು ಇಂತಹ ಘಟನೆ ತಮಗೆ ಎಲ್ಲಿಯಾದರು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಅಥವಾ ಸಂಭಂದಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು ಎಂದರು.

    ಮನುಷ್ಯನನ್ನು ಮನುಷ್ಯನೆ ಕಳ್ಳತನ ಮಾಡುವುದು ಮಾನವ ಸಮಾಜ ತಲೆ ತಗ್ಗಿಸುವ ಕಾರ್ಯ ಇದಾಗಿದೆ ಎಂದರು.ಅಲ್ಲದೆ ಮಹಿಳೆಯರು ಮತ್ತು ಮಕ್ಕಳು ಸದಾಕಾಲ ಜಾಗೃತಿ ವಹಿಸುವಂತೆ ಸಲಹೆ ನೀಡಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಹಸೀನಾಬಾನು ಪಟೇಲ್ ವಹಿಸಿ ಮಾತನಾಡಿದರು.ಪ್ರಾಥಮಿಕ ಶಾಲೆಯ ಮುಖ್ಯಗುರು ರಾಯಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಶಿವರಾಜ ನೆರವೇರಿಸಿದರು,ಶಿಕ್ಷಕ ಮಲ್ಲಿಕಾರ್ಜುನತ್ತ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕರು,ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಭೀಮು ಬನಸೋಡೆ ಸೇರಿದಂತೆ ಎಲ್ಲಾ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.

  • ಕರವೇ ನಡೆ ಹಳ್ಳಿ ಕಡೆ ವಿನೂತನ ಕಾರ್ಯಕ್ರಮ

    ಕರವೇ ನಡೆ ಹಳ್ಳಿ ಕಡೆ ವಿನೂತನ ಕಾರ್ಯಕ್ರಮ

    ಪಲ್ಲಿಗಳು ಹಳ್ಳಿಗಳಾಗಿಸಿ, ಮೊರಾರ್ಜಿ, ಏಕಲವ್ಯ ಶಾಲೆ ಸಮಸ್ಯೆ ಪರಿಹರಿಸಿ

    ಸಮಸ್ಯೆ ಪರಿಹರಿಸಲು ಹೋರಾಟ ರೂಪಿಸಿ; ಭೀಮುನಾಯಕ ಕರೆ

    ಸುರಪುರ: ಕರವೇ ನಡೆ ಹಳ್ಳಿ ಕಡೆ ವಿಶೇಷ ಕಾರ್ಯಕ್ರಮ ನಡೆಸಲು, ಆ ಮೂಲಕ ಗ್ರಾಮೀಣ ಭಾಗದ ಸಮಸ್ಯೆಗಳು ವಿಶೇಷವಾಗಿ ಶಿಕ್ಷಣ, ಮೂಲಸೌಕರ್ಯ ಸಮಸ್ಯೆ ಪರಿಹರಿಸಲು ತಾಲ್ಲೂಕು ಹಾಗೂ ಗ್ರಾಮೀಣ ಕರವೇ ಕಾರ್ಯಕರ್ತರು ಶ್ರಮಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ ಸಲಹೆ ನೀಡಿದರು.

    ಕಸಾಪ ಭವನದಲ್ಲಿ ಬುಧವಾರ ಜರುಗಿದ ಕರವೇ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳು ಬಹಳಷ್ಟಿವೆ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳು ಇನ್ನು ಹೆಚ್ಚಾಗಿದ್ದು, ಇವುಗಳ ಪರಿಹಾರಕ್ಕೆ ಕರವೇ ಕಾರ್ಯಕರ್ತರು ಹೋರಾಟ ರೂಪಿಸಬೇಕು ಎಂದು ತಿಳಿಸಿದರು.

    ವಿಶೇಷವಾಗಿ ಗುರುಮಠಕಲ್ ತಾಲ್ಲೂಕಿನಾದ್ಯಂತ ಅನೇಕ ಸಮಸ್ಯೆಗಳಿವೆ ಅನೇಕ ಹಳ್ಳಿಗಳು ಇನ್ನು ಪಲ್ಲಿ ಎಂದು ತೆಲುಗಿನಲ್ಲಿಯೇ ಇದ್ದು ಇವುಗಳ ಬದಲಿಸಲು ಜಿಲ್ಲಾಡಳಿತ, ಸಚಿವ, ಶಾಸಕರು ಶ್ರಮಿಸಬೇಕು ಈಗಾಗಲೇ ಕೊಲಾರದ ಬಾಗೇಪಲ್ಲಿಯನ್ನು ಸರ್ಕಾರ ಭಾಗ್ಯನಗರ ಎಂದು ಬದಲಿಸಿದೆ ಇದೇಮಾದರಿಯಲ್ಲಿ ಗುರುಮಠಕಲ್ ತಾಲ್ಲೂಕಿನಲ್ಲಿ ಹತ್ತಾರು ಹಳ್ಳಿಗಳು ಪಲ್ಲಿಗಳಾಗಿಯೇ ಉಳಿದಿವೆ. ಇವನ್ನು ಬದಲಿಸಲು ಹೋರಾಟ ಮಾಡಬೇಕೆಂದು ತಿಳಿಸಿದರು.

    ಮೋಟ್ನಳ್ಳಿ ಮೊರಾರ್ಜಿ ವಸತಿ ಶಾಲೆ ಶಿಥಿಲಗೊಂಡಿದ್ದು, ಅದನ್ನು ಬಂದಳ್ಳಿ ಗೆ ಸ್ಥಳಾಂತರಿಸಿದ್ದು, ೫ ವರ್ಷಗಳಾದರೂ ಕಟ್ಟಡ ದುರಸ್ತಿ ಮಾಡಿಸಲು ಆಗುವುದಿಲ್ಲ ಎಂದರೆ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಶಾಸಕರು ಇದ್ದು ಏನು ಪ್ರಯೋಜನ, ಆ ಶಾಲೆಯ ಮಕ್ಕಳ ಸಮಸ್ಯೆ ಕಾಣುವುದಿಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸೌಲಭ್ಯ ಇರುವ ಶಾಲೆಗಳಿಗೆ ಭೇಟಿ ನೀಡುವ ಶಾಸಕ, ಸಚಿವ ಹಾಗೂ ಇನ್ನಿತರ ಜನಪ್ರತಿನಿಧಿಗಳಿಗೆ ಮೋಟ್ನಳ್ಳಿ ಶಾಲೆ ಸಮಸ್ಯೆ ಕಾಣುತ್ತಿಲ್ಲವೇ? ಎಂದು ಅವರು ಕೆಂಡ ಕಾರಿದರು.

    ಬಂದಳ್ಳಿ ಏಕಲವ್ಯ ವಸತಿ ಶಾಲೆಗೂ ಮೂಲಭೂತ ಸೌಕರ್ಯಗಳಿಲ್ಲ, ಆರಂಭವಾದಾಗಿನಿAದ ಸಮಸ್ಯೆಯ ಗೂಡಾಗಿದೆ ತಕ್ಷಣ ಜಿಲ್ಲಾಧಿಕಾರಿಗಳು ಈ ಎರಡು ಶಾಲೆಗಳ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆAದು ಆಗ್ರಹಿಸಿದರು.

    ಇನ್ನು ಕರವೇ ಪದಾಧಿಕಾರಿಗಳು ಸಂಘಟನೆ ಹಾಗೂಹೋರಾಟದ ವಿಷಯದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಮತ್ತು ಕರವೇ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ರಾಜಿಯ ಮಾತೇ ಇಲ್ಲ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಅದ್ಯಕ್ಷ ಮಲ್ಲು ಮಾಳಿಕೇರಿ, ಸಂತೋಷ ನಿರ್ಮಲಕರ್, ಚೌಡಯ್ಯ ಬಾವೂರ, ಹಣಮಂತ ಖಾನಳ್ಳಿ, ಶರಣಪ್ಪ ದಳಪತಿ, ಪಪ್ಪುಗೌಡ ಚಿನ್ನಾಕಾರ, ಪ್ರಕಾಶ ಪಾಟೀಲ್ ಜೈಗ್ರಾಮ್, ಸಾಹೇಬಗೌಡ ನಾಯಕ, ಅರ್ಜುನ ಪವಾರ್, ಯಮುನಯ್ಯ ಗುತ್ತೇದಾರ, ವಿಶ್ವರಾಜ ಪಾಟೀಲ್, ವೆಂಕಟೇಶ ಬೈರಿಮಡ್ಡಿ, ಶರಣಬಸಪ್ಪ ಯಲ್ಹೇರಿ, ಅಬ್ದುಲ್ ಚಿಗಾನೂರ, ಬಸವರಾಜ ಚೆನ್ನೂರ, ಭೀಮು ಮಲ್ಲಿಭಾವಿ, ಸಿದ್ದಪ್ಪ ಕೂಯಿಲೂರ, ಸಿದ್ದಪ್ಪ ಕ್ಯಾಸಪನಳ್ಳಿ, ಭೀಮರಾಯ ರಾಮಸಮುದ್ರ, ಹಣಮಂತ್ರಾಯ ತೇಕರಾಳ, ಸುರೇಶ ಬೆಳಗುಂದಿ, ಜನಾರ್ಧನ್ ಚಾಮನಳ್ಳಿ, ಹುಲುಗಪ್ಪ ಚಟ್ನಳ್ಳಿ, ಸಲಿಮ್ ಯರಗೋಳ, ಯಲ್ಲಾಲಿಂಗ ಚಾಮನಳ್ಳಿ, ಸೈದಪ್ಪ ಗೌಡಗೇರಾ, ನಾಗಪ್ಪ ಗೋಪಾಳಪುರ,ಮಲ್ಲಿಕಾರ್ಜುನ ಕನ್ನಡಿ, ವೆಂಕಟರಾಮು ಸೈದಾಪೂರ, ಅಬ್ದುಲ್ ರಿಯಾಜ್ ಸೇರಿದಂತೆ ಅನೇಕರು ಪಾಲ್ಗೊಂಡರು.

  • ಮಹಾತ್ವಾಕಾಂಕ್ಷಿ ಜಿಲ್ಲೆಯ ಕನಸು ನನಸು ಮಾಡಲು ಎಲ್ಲರೂ ಶ್ರಮಿಸೋಣ: ಡಿಸಿ ಹರ್ಷಲ್ ಭೋಯರ್

    ಮಹಾತ್ವಾಕಾಂಕ್ಷಿ ಜಿಲ್ಲೆಯ ಕನಸು ನನಸು ಮಾಡಲು ಎಲ್ಲರೂ ಶ್ರಮಿಸೋಣ: ಡಿಸಿ ಹರ್ಷಲ್ ಭೋಯರ್

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲಾಡಳಿತ, ಜಿಪಂ ಸೇರಿದಂತೆ ಎಲ್ಲ ಇಲಾಖೆಗಳ ಹಿರಿಯ,ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಜಿಲ್ಲೆಯ ಕನಸು ನನಸು ಮಾಡಲು ಸಂಪೂರ್ಣವಾಗಿ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ
    ಹರ್ಷಲ್ ಭೋಯರ್ ಹೇಳಿದರು.

    ಕೇಂದ್ರ ಸರ್ಕಾರದ ನೀತಿ ಆಯೋಗದ ಮಹಾತ್ವಾಕಾಂಕ್ಷಿ ಜಿಲ್ಲೆ ಯಾದಗಿರಿ ಮತ್ತು ಮಹಾತ್ವಾಕಾಂಕ್ಷಿ ಬ್ಲಾಕ್ ವಡಗೇರಾ ಯೋಜನೆಯಡಿ ಸಂಪೂರ್ಣ ಅಭಿಯಾನ ಸಮ್ಮಾನ ಸಮಾರೋಹ ಮತ್ತು ಆಕಾಂಕ್ಷಾ ಹಾಟ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಧಕ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರಮಾಣಪತ್ರ ವಿತರಿಸಿ ಗೌರವಿಸಿ ಅವರು ಮಾತನಾಡಿದರು.

    ಅಭಿವೃದ್ಧಿಗಾಗಿ ಸರ್ಕಾರ ನೀಡಿದ ಸೂಚಾಂಕ್ಯಗಳಲ್ಲಿ ಮಹಾತ್ವಾಕಾಂಕ್ಷಿ ಜಿಲ್ಲೆ ಯಾದಗಿರಿ ತನ್ನ ನಿಗದಿತ ಗುರಿ ಆರಕ್ಕೆ ಮಾಡುವ ಮೂಲಕ ಗುರಿ ತಲುಪಿದರೆ, ವಡಗೇರಾ ಬ್ಲಾಕ್ ಆರಲ್ಲಿ ಐದು ಕೆಲಸಗಳನ್ನು ಮಾಡುವ ಮೂಲಕ ಹೆಚ್ಚಿನ‌ ಸಾಧನೆ ಮಾಡಿದೆ ಎಂದರು.  ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದಿಸಿದ ಡಿಸಿ ಅವರು, ಮುಂದೇ ಕೂಡಾ ಇದೆ ರೀತಿ ಕೆಲಸ ಮಾಡುವಂತೆ ಸಲಹೆ ನೀಡಿದರು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಸಿಇಒ ಲವೀಶ್ ಒರಡಿಯಾ, ಈ ಸಾಧನೆಗೆ ಆಶಾ, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಹಾಕಿದ ಶ್ರಮಕ್ಕೆ ಫಲ ಸಿಕ್ಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಆದೇಶದಂತೆ ಈ ಕಾರ್ಯಕ್ರಮ ಆಯೋಜಿಸಿ, ಗುರಿ ತಲುಪಲು ಶ್ರಮಿಸಿದ ತಳಮಟ್ಟದಿಂದ ಹಿರಿಯ ಅಧಿಕಾರಿಗಳನ್ನು ಗುರುತಿಸಿ ಇಂದು ಪ್ರಮಾಣ ಪತ್ರ ನೀಡುವ ಮೂಲಕ ಗೌರವಿಸಲಾಗಿದೆ ಎಂದರು.

    ಇನ್ನೂ ಹೆಚ್ಚಿನ ರೀತಿಯಲ್ಲಿ ನಾವೆಲ್ಲರೂ ಕೆಲಸ ಮಾಡುವ‌ ಮೂಲಕ ಕೇಂದ್ರ ಸರ್ಕಾರದ ಈ ಯೋಜನೆಯನ್ನು ಯಶಸ್ಸಿಯಾಗಿ ಮಾಡೋಣ ಎಂದರು.
    ಹೆಚ್ಚುವರಿ ಡಿಸಿ ರಮೇಶ ಕೋಲಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್, ಸಿಪಿಒ ಕುಮಲಯ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಜಿಲ್ಲಾ,ತಾಲೂಕು ಮಟ್ಟದ ಅಧಿಕಾರಿಗಳು, ಆಶಾ,ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರಿದ್ದರು. ಅಧಿಕಾರಿ ರಿಯಾಜ್ ಪಟೇಲ್ ನಿರೂಪಿಸಿದರು.

    ಬೆಳ್ಳಿ ಪದಕ ನೀಡಿ ಗೌರವ

    ವಡಗೇರಾ ತಾಲೂಕಿನ ತಾಪಂ ಇಒ ಮಲ್ಲಿಕಾರ್ಜನ ಸಂಗ್ವಾರ್ ಅವರಿಗೆ ನೀತಿ ಆಯೋಗದ ಆದೇಶದಂತೆ ಡಿಸಿ ಹರ್ಷಲ್ ಭೋಯರ್ ಅವರು ಬೆಳ್ಳಿಪದಕ ನೀಡಿ ವಿಶೇಷವಾಗಿ ಸನ್ಮಾನಿಸಿದರು. ವಿವಿಧ ಇಲಾಖೆಗಳ ಸುಮಾರು 90 ಜನರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

    ಸೀರೆ ಖರೀದಿಸಿದ ಡಿಸಿ !

    ಇಂದಿನಿಂದ ಮೂರು ದಿನಗಳವರೆಗೂ ಇರುವ ಆಕಾಂಕ್ಷಾ ಹಾಟ್ ನ ವಿವಿಧ ಮಳಿಗೆಗಳಿಗೆ ಚಾಲನೆ ನೀಡಿದ ಡಿಸಿ ಹರ್ಷಲ್ ಭೋಯರ್ ಅವರು ಸಿರಿ ಮಳಿಗೆ ಕಾಣುತ್ತಲೇ ಅಲ್ಲಿಗೆ ತೆರಳಿ ಸೀರೆಯೊಂದು ಖರೀದಿಸಿರು. ಅದೇ ರೀತಿ ಪೆನ್ಸಿಲ್ ಇತರೆ ವಸ್ತುಗಳನ್ನು ಸಹ ಹಣ ನೀಡಿ ಖರೀದಿಸಿದ್ದು ಗಮನ ಸೆಳೆಯಿತು.ಈ ವೇಳೆ ಅಲ್ಲಿ ಹಾಕಲಾಗಿರುವ ವಿವಿಧ ವಸ್ತುಗಳ ಮಾರಾಟದ ಸುಮಾರು 15ಕ್ಕೂ ಹೆಚ್ಚು ಮಳಿಗೆಗಿಗೆ ಎಸ್ಪಿ ಪ್ರಥ್ವಿಕ್ ಶಂಕರ್, ಜಿಪಂ ಸಿಇಒ ಲವೀಶ್ ಓರ್ಡಿಯಾ ಅವರ ಜೊತೆ ಭೇಟಿ ನೀಡಿದ ಡಿಸಿ ಅಲ್ಲಿನ ವಿವಿಧ ವಸ್ತುಗಳ ಬಗ್ಗೆ ತಿಳಿದುಕೊಂಡರು. ಮೂರು ದಿನಗಳ ಈ ಆಕಾಂಕ್ಷಾ ಹಾಟ್ ಸ್ಥಳಕ್ಕೆ ಜನರು ಹೆಚ್ಚಿಗೆ ಬಂದು ವಸ್ತುಗಳನ್ನು ಖರೀದಿಸಿ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಬೇಕೆಂದರು.