Author: Satyakam NewsDesk

  • ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕಕ್ಕೆ ಲವೀಶ್ ಒರ್ಡಿಯಾ ಭೇಟಿ

    ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕಕ್ಕೆ ಲವೀಶ್ ಒರ್ಡಿಯಾ ಭೇಟಿ

    ಯಾದಗಿರಿ (ಗುರುಮಠಕಲ್) : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಕ್ಕಳು ಹಾಗೂ ತಾಯಂದಿರಿಗೆ ನೀಡಲಾಗುತ್ತಿರುವ ಆಹಾರ ಪದಾರ್ಥಗಳ ತಯಾರಿಕಾ ಘಟಕದಲ್ಲಿ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಲವೀಶ್ ಒರ್ಡಿಯಾ ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಮಕ್ಕಳ ಹಾಗೂ ಮಹಿಳೆಯರ ಆರೋಗ್ಯ ರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಯಾದಗಿರಿಯಲ್ಲಿರುವ ಗುರುಮಠಕಲ್ ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಅವರು ಯಂತ್ರಗಳ ಸಹಾಯದಿಂದ ಮಕ್ಕಳಿಗೆ ನೀಡಲಾಗುವ ಪೌಷ್ಟಿಕಾಂಶ ಆಹಾರಗಳ ತಯಾರಿಕೆಯನ್ನು ವೀಕ್ಷಿಸಿದರು.

    ಮಹಿಳೆಯರ ತಂಡ ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ಪೌಷ್ಟಿಕಾಂಶಗಳನ್ನು ಉತ್ಪಾದಿಸುವ ರೀತಿಯನ್ನು ಪರಿಶೀಲಿಸಿದರು. ಅಕ್ಕಿ, ಗೋದಿ, ಹೆಸರು ಬೇಳೆ, ಹೆಸರು ಕಾಳು, ಕಡಲೇ ಬೇಳೆ, ಬೆಲ್ಲ, ಎಣ್ಣೆ ಮುಂತಾದ ವಸ್ತುಗಳ ವರ್ಗೀಕರಣ ಮಾಡುವ ವಿಧಾನವನ್ನೂ ಪರಿಶೀಲಿಸಿದರು. ಆಹಾರ ಧಾನ್ಯಗಳ ಗುಣಮಟ್ಟವನ್ನು ಪರೀಕ್ಷಿಸಿ, ಕಚ್ಚಾವಸ್ತುಗಳ ದಾಸ್ತಾನು ಕ್ರಮವನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ಮಾಡಿದರು.

    ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕದಲ್ಲಿ ಶುಚಿತ್ವ ಹಾಗೂ ಗುಣಮಟ್ಟವನ್ನು ಕಾಪಾಡಿಕೊಂಡಿರುವ ಕುರಿತು ಸಮಾಧಾನ ವ್ಯಕ್ತಪಡಿಸಿದರು.

    ಈ ಸಂಧರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖಾ ಉಪ ನಿರ್ದೇಶಕ ತಿಪ್ಪಣ್ಣ ಶಿರಸಿಗಿ ಹಾಗೂ ಅಧಿಕಾರಿ ಭೀಮರಾಯ, ಗುರುಮಠಕಲ್ ಸಿ. ಡಿ. ಪಿ. ಓ ಶರಣಬಸವ, ಶಿಶು ಅಭಿವೃದಿ ಯೋಜನಾ ಅಧಿಕಾರಿಗಳು ಸೇರಿದಂತೆ ಮಹಿಳಾ ಪೂರಕ ಉತ್ಪಾದನಾ ಘಟಕದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

  • ಚೆನ್ನಾರೆಡ್ಡಿಗೌಡ ಬಿಳಾರ್ ಅಭಿಮಾನಿಗಳಿಂದ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಕಿಟ್ ವಿತರಣೆ

    ಚೆನ್ನಾರೆಡ್ಡಿಗೌಡ ಬಿಳಾರ್ ಅಭಿಮಾನಿಗಳಿಂದ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಕಿಟ್ ವಿತರಣೆ

    ಯಾದಗಿರಿ: ಬಿಜೆಪಿ ಮುಖಂಡ ಚೆನ್ನಾರೆಡ್ಡಿಗೌಡ ಬಿಳಾರ್ ಅವರ ಹುಟ್ಟುಹಬ್ಬದ ಅಂಗವಾಗಿ, ಅವರ ಅಭಿಮಾನಿ ಬಳಗದ ವತಿಯಿಂದ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಲಾಯಿತು. ಸಮಾಜ ಸೇವೆಯೊಂದಿಗೆ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಲಾಯಿತು.

    ನಗರದಲ್ಲಿನ ವೃದ್ದಾಶ್ರಮ ಮತ್ತು ಅನಾಥಾಶ್ರಮಗಳಿಗೆ ಭೇಟಿ ನೀಡಿ, ಅಲ್ಲಿನ ನಿರ್ಗತಿಕರಿಗೆ ಮತ್ತು ವೃದ್ಧರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿದರು. ಈ ಕಿಟ್‌ಗಳಲ್ಲಿ ಅಕ್ಕಿ, ದಾಲ್, ಎಣ್ಣೆ, ಸಕ್ಕರೆ, ಬಿಸ್ಕತ್, ತಿಂಡಿಪದಾರ್ಥಗಳು ಸೇರಿದಂತೆ ದಿನಬಳಕೆಯ ಪದಾರ್ಥಗಳಿದ್ದವು.

    ಚೆನ್ನಾರೆಡ್ಡಿಗೌಡ ಬಿಳಾರ್ ಅವರು ಸದಾ ಜನಸೇವೆಗಾಗಿ ಶ್ರಮಿಸುತ್ತಾರೆ. ಅವರ ಸೇವಾ ಮನೋಭಾವದಿಂದ ಪ್ರೇರಿತರಾಗಿ ನಾವು ಸಹ ಸಮಾಜ ಸೇವೆಗೆ ಕೈಜೋಡಿಸಿದ್ದೇವೆ. ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಲ್ಲಿ ವಾಸಿಸುವವರಿಗೆ ಸಹಾಯ ಮಾಡಿದ ಸಂತೋಷವೇ ನಮ್ಮಿಗೆ ನಿಜವಾದ ಹುಟ್ಟುಹಬ್ಬದ ಸಂಭ್ರಮ ಎಂದು ಅಭಿಮಾನಿಗಳು ತಿಳಿಸಿದರು.

    ಈ ಸಂದರ್ಭದಲ್ಲಿ ಬಸವರಾಜ್ ಸಾವೂರ್, ಬಾಬಾ ಖಾನ್, ಮರಿಗೌಡ, ರೆಡ್ಡಿ ತಂಗಡಗಿ, ಚೇತನ್ ಟಿಂಗ್ರೆ, ವಿಶ್ವ ಮುರಗನೂರ್, ಮಾರ್ಥಂಡಪ್ಪ ಸೇರಿದಂತೆ ಇನ್ನಿತರರು ಇದ್ದರು.

  • ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾ ವಕ್ತಾರನಾಗಿ ಮೋಹನ್ ಚೌಹಾಣ್ ನೇಮಕ

    ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾ ವಕ್ತಾರನಾಗಿ ಮೋಹನ್ ಚೌಹಾಣ್ ನೇಮಕ

    ಯಾದಗಿರಿ: ಲಿಂಗೇರಿ ತಾಂಡದ ಮೋಹನ್ ಚೌಹಾಣ್ ಅವರನ್ನು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ (ರಿ) ಯಾದಗಿರಿ ಜಿಲ್ಲಾ ವಕ್ತಾರನಾಗಿ ನೇಮಕ ಮಾಡಲಾಗಿದೆ.

    ನಗರದ ಹಳೆ ಐಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಂಗಾರು ಜೆ.ಬಿ. ರಾಠೋಡ ಅವರ ನೇತೃತ್ವದಲ್ಲಿ ನೇಮಕಾತಿ ಆದೇಶ ಪತ್ರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು, ಸಂಘದ ಪರವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿ, ಬಂಜಾರ ಸಮುದಾಯದ ಅಭಿವೃದ್ಧಿಗೆ ಬದ್ಧತೆಯಿಂದ ಸಹಕರಿಸಬೇಕು ಎಂದು ಹೇಳಿದರು.

    ಹೊಸ ವಕ್ತಾರನ ನೇಮಕಾತಿ ಸಂಘದ ಚಟುವಟಿಕೆಗಳು, ಸಮುದಾಯದ ಹಕ್ಕು-ಹೆಮ್ಮೆಗಳು ಹಾಗೂ ಸಮಸ್ಯೆಗಳ ಕುರಿತು ಜಿಲ್ಲಾ ಮಟ್ಟದಲ್ಲಿ ಪ್ರಾಬಲ್ಯದಿಂದ ಧ್ವನಿ ಎತ್ತಲು ನೆರವಾಗಲಿದೆ ಎಂದು ಸಂಘದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

    ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರ. ಕಾರ್ಯದರ್ಶಿ ವಿಜಯ್‌ ಜಾದವ್‌, ಜಿಲ್ಲಾ ಉಪಾಧ್ಯಕ್ಷ ಅಂಬರೇಶ್ ಅರಕೇರಾ, ಯಾದಗಿರಿ, ತಾ. ಅಧ್ಯಕ್ಷ ವಿಕ್ರಮ್ ಚೌಹಾಣ್, ಖಜಾಂಜಿ ಗೋಪಾಲ ಚೌಹಾಣ್, ವಡಗೇರಾ ತಾ. ಅಧ್ಯಕ್ಷ ಗೋವಿಂದ ರಾಠೋಡ, ಯುವ ಘಟಕ ಜಿಲ್ಲಾಧ್ಯಕ್ಷ ರಾಜು ರಾಠೋಡ, ಉಪಾಧ್ಯಕ್ಷ ಕುಮಾರ್, ಮೋಹನ್ ಜಾದವ್, ಪರಮೇಶ್ ಸೌದಾಗರ್ ತಾಂಡ ಸೇರಿದಂತೆ ಹಲವರು ಭಾಗವಹಿಸಿದರು.

  • ವಾಲಿಬಾಲ್: ಕ್ಯಾತನಾಳ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

    ವಾಲಿಬಾಲ್: ಕ್ಯಾತನಾಳ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

    ಸತ್ಯಕಾಮ ವಾರ್ತೆ ವಡಗೇರಾ:
    ಆಗಸ್ಟ್ 5 ರಂದು ಶಹಾಪುರ ನಗರದಲ್ಲಿ ನಡೆದ ಹೋಬಳಿ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ವಡಗೇರಾ ತಾಲೂಕಿನ ಕ್ಯಾತನಾಳ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

     
    ಮಕ್ಕಳ ಸಾಧನೆ ಕುರಿತು ಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ ಬಾಗ್ಲಿ ಮಾತನಾಡಿದರು.ಗ್ರಾಮೀಣ  ಪ್ರತಿಭೆಗಳಿಗೆ ಕ್ರೀಡೆಯಲ್ಲಿ ಅತಿ ಹೆಚ್ಚು ಸಾಧನೆ ಮಾಡುತ್ತಿದ್ದು ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಇಲಾಖೆಯ ಅಧಿಕಾರಿಗಳು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಮುಂದೆ ನಡೆಯುವ  ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯಶಾಲಿಯಾಗಿ ಎಂದು ಹಾರೈಸಿದರು.
     
    ಈ ಮಕ್ಕಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರಾದ ಶರಣಪ್ಪ ಬಾಗ್ಲಿ ,ಶಿಕ್ಷಕ ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಗ್ರಾ ಪಂ ಸದಸ್ಯರಾದ ಮಂಜುಳಾ ಎಚ್. ಬಿ ಪಾಟೀಲ, ಮಲ್ಲಿಕಾರ್ಜುನ್ ಠಾಣಗುಂದಿ , ವಿದ್ಯಾಧರ್ ಜಾಕಾ, ದೇವೇಂದ್ರಪ್ಪ ಗುಡ್ಡೆನೂರು, ಸಿದ್ದಮ್ಮ, ದೇವೇಂದ್ರಪ್ಪ ಮಲ್ಲಳ್ಳಿ, ಸೋಫಿಯಾ ಬೇಗಂ, ಹಾಗೂ ಇನ್ನಿತರರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
  • ಜಿಲ್ಲಾ ಆಸ್ಪತ್ರೆಗೆ ಶಾಸಕ ಪಾಟೀಲ್ ಭೇಟಿ

    ಜಿಲ್ಲಾ ಆಸ್ಪತ್ರೆಗೆ ಶಾಸಕ ಪಾಟೀಲ್ ಭೇಟಿ

    ಯಾದಗಿರಿ: ಇಲ್ಲಿನ‌ ಜಿಲ್ಲಾ ಆಸ್ಪತ್ರೆಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಗುರುವಾರ ಭೇಟಿ ನೀಡಿ ಅಲ್ಲಿ ನಡೆದಿರುವ ವಿವಿಧ ಕಾಮಗಾರಿಗಳನ್ನು ಮತ್ತು ಆಸ್ಪತ್ರೆ ಕೋಣೆಗಳನ್ನು ಪರಿಶೀಲಿಸಿದರು.

    ಈ ವೇಳೆ ಹಾಜರಿದ್ದ ಮೆಡಿಕಲ್ ಕಾಲೇಜಿನ ಡಿನ್ ಡಾ.ಸಂದೀಪ್ ಅವರು, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಒಳಚರಂಡಿ ಕೆಲಸ, ಕೋಣೆಗಳ ದುರಸ್ತಿ ಸೇರಿದಂತೆಯೇ ವಿವಿಧ ಕೆಲಸಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು.

    ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವ ಮೂಲಕ, ಅವಶ್ಯವಾಗಿ ಬೇಕಾದ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎಂದು ಡಿನ್ ಸಂದೀಪ್ ಶಾಸಕರಿಗೆ ಹೇಳಿದರು.

    ರೋಗಿಗಳಿಗೆ ತೊಂದರೆಯಾಗದಂತೆಯೇ ಚಿಕಿತ್ಸೆ ನೀಡಬೇಕು. ಇನ್ನೂ ಏನಾದರೂ ಅವಶ್ಯ ಕೆಲಸಗಳು ಆಗಬೇಕಾದರೇ ತಿಳಿಸಿದರೇ ಸೂಕ್ತಕ್ರಮ ತೆಗೆದುಕೊಳ್ಳಲಾಗುವುದೆಂದು ಶಾಸಕರು ಹೇಳಿದರು.

    ಕ್ಯಾಂಟಿನ್ ಉದ್ಘಾಟನೆ: ಇದೇ ವೇಳೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಕ್ಯಾಂಟಿನ್ ಉದ್ಘಾಟಿಸಿದರು.
    ರುಚಿಯಾದ ಮತ್ತು ಗುಣಮಟ್ಟದ ಉಪಹಾರ ನೀಡಬೇಕೆಂದರು.


    ಡಿಎಸ್ ಡಾ. ರೀಜ್ವಾನ್ ಆಫ್ರಿನ್, ವಿವಿಧ ವಿಭಾಗಳ ವೈದ್ಯರು ಮತ್ತು ಸಿಬ್ಬಂದಿ ಇದ್ದರು.

  • ಎರಡು ಗುಂಪುಗಳ ನಡುವೆ ಹೊಡೆದಾಟ: 25 ಮಂದಿ ವಿರುದ್ಧ ಪ್ರಕರಣ

    ಎರಡು ಗುಂಪುಗಳ ನಡುವೆ ಹೊಡೆದಾಟ: 25 ಮಂದಿ ವಿರುದ್ಧ ಪ್ರಕರಣ

    ಯಾದಗಿರಿ: ಗಾಂಧಿ ನಗರ ತಾಂಡಾದಲ್ಲಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳು ಹಿಡಿದು ಹೊಡೆದಾಟ ನಡಿಸಿದ ಸಂಬಂಧ ಇಬ್ಬರನ್ನು ಬಂಧಿಸಿ, 25 ಆರೋಪಿಗಳ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೈಯಲ್ಲಿ ತಲ್ವಾರ್, ಚಾಕು, ಕಲ್ಲು, ಇಟ್ಟಿಗೆ, ಕಟ್ಟಿಗೆಗಳನ್ನು ಹಿಡಿದು ಎರಡೂ ಗುಂಪಿನವರು ಪರಸ್ಪರ ಹೊಡೆದಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಎರಡೂ ಕಡೆಯವರು ದೂರು– ಪ್ರತಿದೂರು ದಾಖಲಿಸಿದ್ದಾರೆ. ತೇಜರಾಜ್ ರಾಠೋಡ (46) ಹಾಗೂ ರಮೇಶ ದೇವುಜಿ ರಾಠೋಡನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ರಮೇಶ ದೇವುಜಿ ನೀಡಿದ ದೂರಿನ ಅನ್ವಯ ತೇಜರಾಜ್, ಶಶಿ, ಮೋನು, ಮಿಥುನ್, ಬಾಬು ಸೇರಿ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಶಿಕುಮಾರ ತೇಜರಾಜ್ ನೀಡಿದ ಪ್ರತಿ ದೂರಿನ ಪ್ರಕಾರ ರಮೇಶ, ಕಲಾವತಿ, ಲಕ್ಷ್ಮಿಬಾಯಿ, ಅಂಬರೇಶ, ಅರ್ಜುನ್ ಸೇರಿ 14 ಮಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

  • ಹೈಯ್ಯಾಳಲಿಂಗೇಶ್ವರ ಜಾತ್ರೆಯಲ್ಲಿ ಪ್ರಾಣಿ ಬಲಿ, ಮದ್ಯಪಾನ, ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೆ ಸೂಚನೆ

    ಹೈಯ್ಯಾಳಲಿಂಗೇಶ್ವರ ಜಾತ್ರೆಯಲ್ಲಿ ಪ್ರಾಣಿ ಬಲಿ, ಮದ್ಯಪಾನ, ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೆ ಸೂಚನೆ

    ಯಾದಗಿರಿ : ಜಿಲ್ಲೆಯ ವಡಗೇರಾ ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ ಶ್ರೀ ಹೈಯ್ಯಾಳಲಿಂಗೇಶ್ವರ ಜಾತ್ರೆಯಲ್ಲಿ ಪ್ರಾಣಿ ಬಲಿ ಹಾಗೂ ಮದ್ಯಪಾನ ಮತ್ತು ಮದ್ಯ ಮಾರಾಟ 2025ರ ಆಗಸ್ಟ್ 9 ರಿಂದ 13ರ ಮಧ್ಯರಾತ್ರಿ ವರೆಗೆ ನಿಷೇಧ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಹೊರಡಿಸಿದ್ದಾರೆ.

    ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ವಡಗೇರಾ ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ 2025ರ ಆಗಸ್ಟ್ 9 ರಿಂದ 13ರ ವರೆಗೆ ನಡೆಯಲಿರುವ ಶ್ರೀ ಹೈಯ್ಯಾಳಲಿಂಗೇಶ್ವರ ಜಾತ್ರೆಯಲ್ಲಿ ದೇವರ ಹೆಸರಲ್ಲಿ ಪ್ರಾಣಿ ಬಲಿ ಅಂದರೆ ಕುರಿ ಮತ್ತು ಕೋಣ ಬಲಿ ಕೊಡುವುದನ್ನು 2025ರ ಆಗಸ್ಟ್ 9 ರಿಂದ 13ರ ವರೆಗೆ ಶ್ರೀ ಹೈಯ್ಯಾಳಲಿಂಗೇಶ್ವರ ದೇವಸ್ಥಾನದ 5 ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಿ ಹಾಗೂ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಈ ಕೆಳಗಿನ ಅಂಶಗಳನ್ನು ಅನುಸರಿಸಲು ಆದೇಶಿಸಿದೆ.

    ಯಾವುದೇ ಕಾರಣಕ್ಕೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ, 2020ರ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ 2025ರ ಆಗಸ್ಟ್ 9 ರಿಂದ 13ರ ವರೆಗೆ ಶ್ರೀ ಹ್ಯೆಯ್ಯಾಳಲಿಂಗೇಶ್ವರ ದೇವಸ್ಥಾನದ 5 ಕಿ.ಮೀ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಶ್ರೀ ಹೈಯ್ಯಾಳಲಿಂಗೇಶ್ವರರ ಜಾತ್ರೆಯಲ್ಲಿ ದೇವರ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದನ್ನು ನಿಷೇಧಿಸುವ ಸಂಬAಧವಾಗಿ ಈ ಗ್ರಾಮದ ಸುತ್ತಲೂ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ಯಾರೂ ಪ್ರಾಣಿಗಳನ್ನು ಗ್ರಾಮದ ಒಳಗಡೆ ತೆಗೆದುಕೊಂಡು ಬರದಂತೆ ತಡೆಹಿಡಿಯಲು ಹಾಗೂ ಬಲಿ ಕೊಡುವುದನ್ನು ಕಡ್ಡಾಯವಾಗಿ ತಡೆಹಿಡಿಯುವಂತೆ ಕ್ರಮ ವಹಿಸಬೇಕು. ಈ ಗ್ರಾಮದಲ್ಲಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಸಂಬAಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹೈಯ್ಯಾಳ (ಬಿ) ಇವರಿಗೆ ವಹಿಸಿಕೊಡಲಾಗಿದೆ. ಗ್ರಾಮದಲ್ಲಿ ಸೂಕ್ತ ಪೊಲೀಸ್ ಬಂದೊಬಸ್ತ್ ಒದಗಿಸಲು ಹಾಗೂ ಮುಂಜಾಗೃತ ಕ್ರಮಕೈಗೊಳ್ಳಬೇಕು, ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಯಾದಗಿರಿ ಸಹಾಯಕ ಆಯಕ್ತರು, ಯಾದಗಿರಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಉಪ ನಿರ್ದೇಶಕರು, ವಡಗೇರಾ ತಹಸೀಲ್ದಾರರು, ವಡಗೇರಾ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಇವರಿಗೆ ನಿರ್ದೇಶಿಸಿ ಆದೇಶಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮಾಧ್ವಾರದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟಿಸಿದ ಶಾಸಕ ಕಂದಕೂರ

    ಮಾಧ್ವಾರದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟಿಸಿದ ಶಾಸಕ ಕಂದಕೂರ

    ಗುರುಮಠಕಲ್ : ಮತಕ್ಷೇತ್ರದ ಮಾಧ್ವಾರದಂತಹ ಗ್ರಾಮೀಣ ಭಾಗದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಶಾಖೆಯನ್ನು ಆರಂಭಿಸಿದ್ದು, ಸ್ವಾಗತಾರ್ಹ ಈ ಭಾಗದ ಜನರು ಬ್ಯಾಂಕ್ ನ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ತಿಳಿಸಿದರು.

    ಸಮೀಪದ ಮಾಧ್ವಾರ ಗ್ರಾಮದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನವಾಗಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

    ಗುರುಮಠಕಲ್ ತಾಲೂಕು ಕೇಂದ್ರದಲ್ಲೇ ಹೆಚ್ ಡಿಎಫ್ ಸಿ ಬ್ಯಾಂಕ್ ಬ್ಯಾಂಕ್ ಶಾಖೆ ಇಲ್ಲ ಅದರಲ್ಲಿ ಮಾಧವಾರ ಗ್ರಾಮದಲ್ಲಿ ಸ್ಥಾಪನೆ ಮಾಡಿದ್ದು ಸಂತಸದ ಸುದ್ದಿ. ಬ್ಯಾಂಕ್ ನ ಸ್ಥಾಪನೆಗೆ ಕಾರಣೀಭೂತರಾದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ನಮ್ಮ ಭಾಗದ ಜನರು ಮುಗ್ಧರು, ಅದರಲ್ಲಿ ಅನಕ್ಷರಸ್ಥರು ಇದ್ದಾರೆ ಅವರಿಗೆ ಬ್ಯಾಂಕ್ ನ ವ್ಯವಹಾರಗಳ ಬಗ್ಗೆ ಮಾಹಿತಿ ಕಡಿಮೆ. ಬ್ಯಾಂಕ್ ಸಿಬ್ಬಂದಿಯವರು ತಮ್ಮ ಯೋಜನೆಗಳ ಬಗ್ಗೆ ಜನರಿಗೆ ವಿವರವಾಗಿ ಮಾಹಿತಿ ನೀಡುವ ಮೂಲಕ ಅವರನ್ನು ತಮ್ಮ ಗ್ರಾಹಕರನ್ನಾಗಿ ಮಾಡಿಕೊಳ್ಳಬೇಕು ಇದರಿಂದ ಇಬ್ಬರಿಗೂ ಲಾಭವಾಗುತ್ತದೆ. ಬ್ಯಾಂಕ್ ನ ಸಿಬ್ಬಂದಿ ಗ್ರಾಮೀಣ ಜನರೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡು ಜನರಿಗೆ ಸಹಕಾರ ಕೊಡಿ ಎಂದು ಸೂಚಿಸಿದರು. ಎಚ್ ಡಿ ಎಫ್ ಸಿ ಬ್ಯಾಂಕ್ ನ ಅಧಿಕಾರಿಗಳು ಪ್ರತಿ ತಾಲೂಕು ಕೇಂದ್ರಗಳಲ್ಲಿ ತಮ್ಮ ಬ್ಯಾಂಕ್ ಶಾಖೆ ಪ್ರಾರಂಭಿಸುವಂತೆ ಕ್ಲಸ್ಟರ್ ಮುಖ್ಯಸ್ಥರಾದ ರವಿ ಸುರಪುರ ಅವರಿಗೆ ಹೇಳಿದರು.

    ಇದಕ್ಕೂ ಮುನ್ನ ಯಾದಗಿರಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಂಚಾಳ ಅವರು ಮಾತನಾಡಿ ಮಾಧವಾರ ಗ್ರಾಮದಲ್ಲಿ ಶಾಖೆ ಸ್ಥಾಪನೆ ಮಾಡುವ ಬಗ್ಗೆ ಆರ್ಥಿಕ ವಿಭಾಗದಿಂದಲೇ ಸೂಚನೆ ಬಂದಿತ್ತು. ಹೀಗಾಗಿ ಹೆಚ್ ಡಿಎಫ್ ಸಿ ಅವರು ಕೇವಲ ಒಂದು ತಿಂಗಳ ಕಾಲಾವಧಿಯಲ್ಲೇ ಶಾಖೆ ಸ್ಥಾಪನೆ ಮಾಡಿದ್ದಾರೆ. ಈ ಭಾಗದ ಪ್ರತಿಯೊಬ್ಬರೂ ಖಾತೆ ತೆಗೆದು ಬ್ಯಾಂಕ್ ನ ಲಾಭ ಪಡೆಕೊಳ್ಳುವಂತೆ ಸಲಹೆ ನೀಡಿದರು.

    ಹೆಚ್ ಡಿಎಫ್ ಸಿ ಬ್ಯಾಂಕ್ ನ ಕ್ಲಸ್ಟರ್ ಹೆಡ್ ರವಿ ಸುರಪುರ ಅವರು ಮಾತನಾಡಿ ನಮ್ಮ ಬ್ಯಾಂಕ್ ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಅಂತರ ರಾಷ್ಟ್ರೀಯ ಬ್ಯಾಂಕ್ ಆಗಿದೆ. ಇತರ ಸೇವೆಗಳಿಗಿಂತ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದೇವೆ. ರಾಷ್ಟ್ರ, ರಾಜಧಾನಿ, ಜಿಲ್ಲಾ, ತಾಲೂಕು ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಶಾಖೆಯನ್ನು ಪ್ರಾರಂಭಿಸಿ ಜನರಿಗೆ ಸೇವೆ ನೀಡುತ್ತಿದ್ದೇವೆ. ಇಲ್ಲಿ ಮನೆ, ಆಸ್ತಿ, ಬೆಳೆ, ವ್ಯಾಪಾರ, ಸೇರಿದಂತೆ ಇತ್ಯಾದಿ ಸೇವೆಗಳನ್ನು ಗ್ರಾಹಕರು ಪಡೆಕೊಳ್ಳಬಹುದು. ಯಾದಗಿರಿ ಜಿಲ್ಲೆಯಲ್ಲಿ ನಮ್ಮ ಬ್ಯಾಂಕ್ ವ್ಯವಹಾರ ಉತ್ತಮವಾಗಿದೆ ಎಂದು ಹೇಳಿದರು.

    ಈ ವೇಳೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಷ್ ಕಟಕಟಿ, ಗ್ರಾಪಂ ಅಧ್ಯಕ್ಷ ಶಂಕ್ರಪ್ಪ, ಪಿಡಿಓ ಗಿರಿಮಲ್ಲಣ್ಣ, ವಲಯ ಮುಖ್ಯಸ್ಥರಾದ ರಾಮನಾರಾಯಣ, ಪ್ರಾದೇಶಿಕ ಮುಖ್ಯಸ್ಥರದ ಜಾರ್ಜ ಡಾ.ಕೋಸ್ಟಾ, ಶಾಖಾ ಮುಖ್ಯಸ್ಥರಾದ ಸಂತೋಷ ಕುಮಾರ ಸೇರಿದಂತೆ ಮುಂತಾದವರಿದ್ದರು.

    • ಶಾಸಕ ಕಂದಕೂರ ಜನಪರ ಕಾಳಜಿ ಶ್ಲಾಘನೀಯ

    ಸರಕಾರದ ವಿವಿಧ ಯೋಜನಗಳ ಅಡಿಯಲ್ಲಿ ಜನರಿಗೆ ಮಂಜೂರಾದ ಸಾಲ, ಮತ್ತಿತರ ಸೌಲಭ್ಯಗಳನ್ನು ನೀಡುವಲ್ಲಿ ವಿಳಂಬವಾದರೆ ಕೂಡಲೇ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ಕರೆ ಬರುತ್ತೆ, ಕೆಲಸ ಆಗುವವರೆಗೂ ಅವರು ನಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ, ಇಡೀ ಜಿಲ್ಲೆಯ ಎಲ್ಲಾ ಶಾಸಕರಿಗಿಂತಲೂ ಗುರುಮಠಕಲ್ ಶಾಸಕರ ಕರೆಗಳು ಹೆಚ್ಚಿರುತ್ತವೆ. ಇಲ್ಲಿನ ಜನರ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಂಚಾಳ ಅವರು ತಿಳಿಸಿದರು.

  • ದೂರುದಾರರಿಂದ ಪೊನ್ ಪೇ ಮೂಲಕ ಹಣ ಸ್ವೀಕರಿಸಿದ್ದ ಇಬ್ಬರು ಪೊಲೀಸರು ಅಮಾನತು.

    ದೂರುದಾರರಿಂದ ಪೊನ್ ಪೇ ಮೂಲಕ ಹಣ ಸ್ವೀಕರಿಸಿದ್ದ ಇಬ್ಬರು ಪೊಲೀಸರು ಅಮಾನತು.

    ಯಾದಗಿರಿ : ದೂರುದಾರರಿಂದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆಯೇ ಇಬ್ಬರು ಪೊಲೀಸ್ ರನ್ನು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಸೇವೆಯಿಂದ ಅಮಾನತುಗೊಳಿಸಿದ ಪ್ರಕರಣ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ‌ ನಡೆದಿದೆ.

    ಪೊಲೀಸ್ ಪೇದೆಗಳಾದ ವಿಶ್ವನಾಥರಡ್ಡಿ ಮತ್ತು ಗೋಪಾಲರೆಡ್ಡಿ (ಯಾದಗಿರಿ ವಲಯ) ಎಂಬುವವರೇ ಅಮಾನತುಗೊಂಡಿದ್ದಾರೆ ಎಂದು ಡಿವೈಎಸ್ಪಿ ಸುರೇಶ್ ಎಂ ಅವರು ಸತ್ಯಕಾಮಗೆ ತಿಳಿಸಿದ್ದಾರೆ.

    ಘಟನೆ ವಿವರ : ಕಳೆದ ಜೂ.24 ರಂದು ಠಾಣಾ ವ್ಯಾಪ್ತಿಯ ಮಿನಾಸಪುರ ಗ್ರಾಮದ ವೆಂಕಟರಡ್ಡಿ ಮತ್ತು ಅವರ ಮಗ ಹಣಮಂತರಡ್ಡಿ ಎಂಬುವವರ ಮೇಲೆ ಯಾದಯ್ಯ, ಮಲ್ಲಯ್ಯ ಮತ್ತು ಗೋಪಿ ಎಂಬುವವರು ಸೇರಿದಂತೆಯೇ ಐವರು ಮಾರಣಾಂತಿಕ ಹೊಡೆದು ಕೈ,ಕಾಲು ಮುರಿದಿದ್ದಾರೆ ಮತ್ತು ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆಂದು ಅನುಸೂಯಾ ವೆಂಟಕರಡ್ಡಿ ಎಂಬುವವರು ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸುವ ಕುರಿತು ವಿಚಾರಿಸಿದಾಗ ಅವರನ್ನು ಬಂಧಿಸಬೇಕಾದರೇ ಒಂದು ಲಕ್ಷ ರೂ. ನೀಡಬೇಕೆಂಬ ಬೇಡಿಕೆ ಈ ಇಬ್ಬರು ಪೊಲೀಸರು ಇಟ್ಟಿದ್ದರು . ಆಗ ವಿಶ್ವನಾಥರಡ್ಡಿ ಎಂಬುವವರ ಮೊಬೈಲ್ ಗೆ 10 ಸಾವಿರ ರೂ. ಹಾಗೂ ರಾಜೇಂದ್ರಬಾಬು ಎಂಬುವವರ ನಂ.ಗೆ ಹತ್ತು ಸಾವಿರ ರೂ. ಪೊನ್ ಮಾಡಿದ್ದರ ಬಗ್ಗೆ ಎಸ್ ಪಿ ಅವರಿಗೆ ಸಲ್ಲಿಸಿದ್ದ ದೂರಿನಲ್ಲಿ ಅನುಸೂಯ ಎಂಬುವವರು ವಿವರಿಸಿದ್ದರು
    ಈ ದೂರಿನ್ವಯ ತನಿಖೆಗೆ ಆದೇಶಿಸಿದಾಗ ಇದನ್ನು ತನಿಖೆ‌ ಮಾಡಿದ ಡಿವೈಎಸ್ ಪಿ ಅವರು ನೀಡಿದ ವರದಿ ಆಧಾರದ‌ ಮೇಲೆ ಈ ಇಬ್ಬರನ್ನು ಎಸ್ ಪಿ ಅವರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

  • ಗೃಹ ಸಚಿವರಾಗಿ ಅಮಿತ್ ಶಾ ಹೊಸ ದಾಖಲೆ ಸೃಷ್ಟಿ: ಕು.ಲಲಿತಾ ಅನಪುರ.

    ಗೃಹ ಸಚಿವರಾಗಿ ಅಮಿತ್ ಶಾ ಹೊಸ ದಾಖಲೆ ಸೃಷ್ಟಿ: ಕು.ಲಲಿತಾ ಅನಪುರ.

    ಯಾದಗಿರಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ ಹೇಳಿದರು.

    ಅಮಿತ್ ಶಾ ಅವರು ಮೇ 30, 2019 ರಿಂದ ಭಾರತದ ಗೃಹ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗೋವಿಂದ ವಲ್ಲಭ ಪಂತ್ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ದಾಖಲೆಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಅವರ 6 ವರ್ಷ 64 ದಿನಗಳ ಹಾಗೂ ಗೋವಿಂದ ವಲ್ಲಭ ಪಂತ್ ಅವರ 6 ವರ್ಷ 56 ದಿನಗಳ ದಾಖಲೆಯನ್ನು ಮುರಿದಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನ ಅವರ ಕೆಲವು ಗಮನಾರ್ಹ ಉಪಕ್ರಮಗಳಾಗಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ಶಾ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅಮಿತ್ ಶಾ ಅವರ ನಾಯಕತ್ವದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಮನಾರ್ಹ ಇಳಿಕೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಹೆಚ್ಚಳ ಕಂಡುಬಂದಿದೆ.