Author: Satyakam NewsDesk

  • ಯಾದಗಿರಿ: ಇ–ಖಾತಾ ಮಾಡಲು ₹5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತರ ವಶಕ್ಕೆ

    ಯಾದಗಿರಿ: ಇ–ಖಾತಾ ಮಾಡಲು ₹5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತರ ವಶಕ್ಕೆ

    ಯಾದಗಿರಿ: ಇಲ್ಲಿನ ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ ಮಾಣಿಕಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಲಂಚ ಸ್ವೀಕರಿಸುತ್ತಿದ್ದ ವೇಳೆ ವಶಕ್ಕೆ ಪಡೆದಿದ್ದಾರೆ.

    ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ನಿವಾಸಿ ಶಶಿಕುಮಾರ್ ಜ್ಞಾನಮಿತ್ರ ಅವರ ದೂರು ಆಧರಿಸಿ ದಾಳಿ ನಡೆಸಲಾಗಿದೆ. ದೂರುದಾರರಿಗೆ ಇ–ಖಾತಾ ಮಾಡಿಕೊಡಲು ನರಸಪ್ಪ ಅವರು ಹಲವಾರು ಬಾರಿ ಕಚೇರಿಗೆ ಅಲೆದಾಡಿಸಿದರು ಮತ್ತು ₹8 ಸಾವಿರ ಲಂಚ ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

    ಶುಕ್ರವಾರ ಕೋರ್ಟ್ ಮುಂಭಾಗದ ರಸ್ತೆಯ ಬದಿಯಲ್ಲಿ ₹5 ಸಾವಿರ ಲಂಚದ ಹಣವನ್ನು ಫೋನ್‌ಪೇ ಮೂಲಕ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಿಲ್ ಕಲೆಕ್ಟರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

  • ವಿಶ್ವ ಹಿರಿಯ ನಾಗರಿಕರ ದಿನಾಚರಣೆ

    ವಿಶ್ವ ಹಿರಿಯ ನಾಗರಿಕರ ದಿನಾಚರಣೆ

    ಯಾದಗಿರಿ: ಹಿರಿಯರಿಂದಲೇ ಎಲ್ಲರೂ ಎನ್ನುವ‌ ಸತ್ಯ ಅರಿತು, ಪ್ರತಿಯೊಬ್ಬರು ಹಿರಿಯರನ್ನು ಗೌರವಿಸಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ‌ ಪದವಿ ಮಹಾವಿದ್ಯಾಲಯದ‌ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಇಂದು ಹಿರಿಯರನ್ನು ಕಡೆಗಣಿಸುವವರ ಸಂಖ್ಯೆ ಅಧಿಕವಾಗಿದೆ. ಅವರು ನಮ್ಮ ತಂದೆ,ತಾಯಿ, ಅಜ್ಜ,ಅಜ್ಜಿ ಅಲ್ಲದೆ ಪ್ರತಿ ಮನೆಯ ಹಿರಿಯ ಜೀವಿಗಳಾಗಿದ್ದಾರೆ. ಅಂತಹ ಅಮೂಲ್ಯ ಜೀವಗಳಿಗೆ ನಾವೆಲ್ಲರೂ ರಕ್ಷಕರಾಗಬೇಕೆಂದು ಶಾಸಕರು ಮಾರ್ಮಿಕವಾಗಿ ನುಡಿದರು.

    ಹಿರಿಯರು ಇದ್ದ ಮನೆ ತುಂಬಿದ ಕೊಡವಿದ್ದಂತೇ, ಅವರ ಮಾರ್ಗದರ್ಶನ, ಸಲಹೆ ಕಿರಿಯರಿಗೆ ಸದಾ ಬೇಕಾಗುತ್ತದೆ. ದಾರಿ ತಪ್ಪದಂತೆಯೇ ನಮ್ಮನ್ನು ತಿದ್ದಿ,ತೀಡಿ‌ ಸರಿ ದಾರಿಯಲ್ಲಿ ನಡೆಯುವಂತಹ ಮಾತುಗಳು ಹಿರಿಯರು ಹೇಳುತ್ತಾರೆ, ಆದರೇ ಅದನ್ನು ಪಾಸಿಟಿವ್ ತೆಗೆದುಕೊಳ್ಳದೇ ನಿರ್ಲಕ್ಷ್ಯ ಮಾಡುವುದೇ ಹೆಚ್ಚಾಗಿದೆ. ಇದು ನಿಲ್ಲಬೇಕು, ಅವರೆಂದಿಗೂ ನಮ್ಮ ಜೊತೆಯಲ್ಲಿಯೇ ಇರುವಂತಹ ವಾತಾವರಣ ಮೂಡಿಸಬೇಕೆಂದು ಪ್ರಸಕ್ತ ಸನ್ನಿವೇಶವನ್ನು ಶಾಸಕ ಪಾಟೀಲ್ ವಿವರಿಸಿದರು.

    ಹಿರಿಯರೇ ಆಸ್ತಿ, ಆದರೇ ಇಂದು ಬಹಳಷ್ಟು ಜನರು ಅವರನ್ನು ಸಾಕಲು ಹಿಂದೆ,ಮುಂದೆ ನೋಡಿ ಅನಾಥಾಶ್ರಮ, ಹಿರಿಯ ಮನೆಗಳಿಗೆ ಬಿಟ್ಟು ಬರುವ ಮೂಲಕ ಜೀವಂತವಿದ್ದಾಗಲೇ ಒಂಟಿ ಮಾಡಿ ನೋವು ಕೊಡುತ್ತಿದ್ದೇವೆ. ಹೀಗೆ ಮಾಡುವವರು ಒಮ್ಮೆ ಆಲೋಚನೆ ಮಾಡಬೇಕು, ಮುಂದೆ ನಾವೂ ಕೂಡಾ ಹಿರಿಯರಾಗುತ್ತೇವೆ, ಆಗ ನಮ್ಮ ಮಕ್ಕಳು ನಮ್ಮನ್ನು ಅನಾಥರಾಗಿ ಮಾಡಿದರೇ ಪರಸ್ಥಿತಿ ಏನಾಗುತ್ತದೆ ಎಂಬುವುದನ್ನು ತಿಳಿದುಕೊಂಡು ಗೌರವದಿಂದ ನಡೆಸಿಕೊಳ್ಳಬೇಕೆಂದು‌ ಶಾಸಕ ಚನ್ನಾರಡ್ಡಿ ಮನಮುಟ್ಟುವಂತೆಯೇ ತಿಳಿಸಿದರು.

    ಕಾರ್ಯಕ್ರಮದಲ್ಲಿ‌ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ

    ಜಿಲ್ಲಾ ಅಧಿಕಾರಿ‌ ಶರಣಪ್ಪ ಪಾಟೀಲ್ ಮಾತನಾಡಿ, ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.

    ಹಿರಿಯರಾದ ಸಿ.ಎಮ್‌ ಪಟ್ಟೇದಾರ ಮಾತನಾಡಿದರು.

    ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯರಾದ ನಿವೃತ್ತ ಎಎಸ್ ಐ ಸಾಮೂವೆಲ್, ಕಂದಾಯ ಇಲಾಖೆ ಲಕ್ಷ್ಮಣ ದೇಗಲಮಡಿ, ನಿರಾವರಿ ಇಲಾಖೆ ಮಲ್ಲಿನಾಥ ಮಲಗೊಂಡ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ವಾಹೀದ್ ಮಿಯಾ,‌ ಶಿಕ್ಷಣ ಕ್ಷೇತ್ರ ಚಂದ್ರಾಮಪ್ಪ ಬಳಿಚಕ್ರ, ಸಮಾಜ ಸೇವಕ ಸಭಾಪತಿ ಮಹಾದೇವಪ್ಪ ಕಡ್ಡಿ ಅಬ್ಬೆತುಮಕೂರು, ಸಮಾಜ ಸೇವೆ ಶರಣಪ್ಪ ಜಾಕಾ, ನಿವೃತ್ತ ಶಿಕ್ಷಕರಾದ ಸಿದ್ದಪ್ಪ ಬಬಲಾದ, ಮಾಜಿ ನಗರಸಭೆ ಸದಸ್ಯರಾದ ಸಂಗಣ್ಣ ಬುಕಿಸ್ಟಗಾರ ಶಹಾಪುರ, ಸಮಾಜ ಸೇವೆ ನಿರ್ಮಲ್ ಕುಮಾರ ಜೈನ್, ಸಮಾಜ ಸೇವಕರಾದ ಬಿ.ಸಿ ಪಾಟೀಲ್, ನಿವೃತ್ತ ಶಿರಸ್ತೆದಾರ ನ್ಯಾಯಾಂಗ ಇಲಾಖೆ ಭೀಮರಾಯ, ಸಮಾಜ ಸೇವಕ ಮಾಣಿಕಮ್ಮ ಸೋಮಯ್ಯ ಸ್ವಾಮೀ, ಸಮಾಜ ಸೇವಕ ಶರಣಪ್ಪ ಆರ್ ಬಡಿಗೇರ್, ಸಮಾಜ ಸೇವಕ ಯಂಕೋಬಾ ಚಿಂತನಳ್ಳಿ ಅವರಿಗೆ ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಆಧ್ಯಕ್ಷರಾದ ಬಾಬುರಾವ ಕಾಡ್ಲೂರ್, ನಗರಠಾಣೆ ಪಿಎಸ್ ಐ ಮಂಜೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ತಿಪ್ಪಣ್ಣ ಶಿರಸಗಿ, ಹಿರಿಯರಾದ ಚನ್ನಪ್ಪಗೌಡ ಮೋಸಂಬಿ, ಜಿಲ್ಲಾ ನಿವೃತ್ತ ಸಂಘದ ಬಂಡೆಪ್ಪ‌ ಆಕಳ, ಸಿ.ಎಮ್ ಪಟೇದಾರ್, ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಸುಭಾಶ್ಚಂದ್ರ ಕೌಲಗಿ ಇದ್ದರು.

  • ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ ನಾಡ ಹಬ್ಬಕ್ಕೆ ಚಾಲನೆ

    ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ ನಾಡ ಹಬ್ಬಕ್ಕೆ ಚಾಲನೆ

    ಸತ್ಯಕಾಮ ವಾರ್ತೆ ಸುರಪುರ: 

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾದ ರಂಗAಪೇಟಿಯ ಕನ್ನಡ ಸಾಹಿತ್ಯ ಸಂಘದ ೮೩ ನೇ ವರ್ಷದ ನಾಡ ಹಬ್ಬಕ್ಕೆ ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ಭುವನೇಶ್ವರಿ ದೇವಿ ಮೂರ್ತಿಗೆ ಯಜ್ಙೇಶ್ವರ ಭಟ್ ಅವರು ನಾಡದೇವಿಗೆ ಪೂಜೆ ಸಲ್ಲಿಸಿದ ನಂತರ ಪ್ರಸಾದ ವಿತರಿಸಿದರು.

    ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗೂರೇಶ್ವರ ವಾರದ್, ಕಾರ್ಯಾಧ್ಯಕ್ಷ ಶ್ರೀರಂಗಯ್ಯ ಮಿರಿಯಾಲ,ಉಪಾಧ್ಯಕ್ಷರಾದ ಯಂಕಣ್ಣ ಗದ್ವಾಲ್, ಸೋಮರಾಯ ಶಖಾಪುರ,ಶರಣಗೌಡ ಎಂ. ಪಾಟೀಲ್ ಜೈನಾಪುರ, ಪ್ರಧಾನ ಕಾರ್ಯದರ್ಶಿ ಮುದ್ದಪ್ಪ ಅಪ್ಪಾಗೋಳ,ಸಹ ಕಾರ್ಯದರ್ಶಿಗಳಾದ ಸಿದ್ದಯ್ಯ ಮಠ, ಪ್ರಕಾಶ ಆಲಬನೂರ, ಸಂಘಟನಾ ಕಾರ್ಯದರ್ಶಿ ಮಹಾದೇವಪ್ಪ ಗುತ್ತೇದಾರ್, ಖಜಾಂಚಿ ರವಿಕುಮಾರ ತ್ರಿವೇದಿ, ಹಿರಿಯ ಪತ್ರಕರ್ತ ಮಲ್ಲು ಗುಳಗಿ,ವೆಂಕಟೇಶ ಟೊಣಪೆ, ದಿಲೀಪ್ ಗೆಜ್ಜೆಲ್, ಭೀಮರಾಯ ಭಜಂತ್ರಿ,ಭಾಗಣ್ಣ ಹಸನಾಪುರ ಸೇರಿದಂತೆ ಇತರರಿದ್ದರು.

  • ಭೀಮಾನದಿ ತೀರದ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ

    ಭೀಮಾನದಿ ತೀರದ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲೆಯ ವಡಗೇರಾ ತಾಲೂಕಿನ ಭೀಮಾನದಿ ತೀರದ ಹಲವು ಗ್ರಾಮಗಳಲ್ಲಿ ಪ್ರವಾಹದಿಂದ ಬೆಳೆ ಹಾನಿ ಸಂಭವಿಸಿದ್ದು, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಂಗಳವಾರ ಜೋಳದಡಗಿ ಹಾಗೂ ಶಿವನೂರು ಗ್ರಾಮಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿದರು.

    ಮೊದಲು ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ಮಾಡಿದರು. ಈ ವೇಳೆ ಜೋಳದಡಗಿ ಗ್ರಾಮದ ರೈತ ದೇವೇಂದ್ರಪ್ಪ ಪೂಜಾರಿ, ಗೌಡರೆ ನೀರು ಬಂದು ನನ್ನ 4 ಎಕರೆ ಭತ್ತದ ಬೆಳೆ ನೀರಾಗ ಹೋಗ್ಯಾದ.ಪ್ರತಿ ವರ್ಷ ಇದೆ ಪರಿಸ್ಥಿತಿ ಆಗ್ಯಾದ್ ಎಂದು ನೋವು ತೊಡಿಕೊಂಡರು. ಅದೇ ರೀತಿ ರೈತ ಮಹಿಳೆ ಲಕ್ಷ್ಮಿ ಸಹ ಹಾನಿ ಕುರಿತು ಶಾಸಕರಿಗೆ ಕಷ್ಟ ತೊಡಿಕೊಂಡರು.

    ನಂತರ ಶಿವನೂರು ಗ್ರಾಮದಲ್ಲಿ ಭತ್ತ ಹಾಗೂ ಹತ್ತಿ ಬೆಳೆ ಹಾನಿ ವೀಕ್ಷಿಸಿದ ಶಾಸಕರು, ರೈತರ ಮನವಿಗಳನ್ನು ಆಲಿಸಿದರು. ರೈತ ಹಂಪಯ್ಯ ಮಾತನಾಡಿ ಕಳೆದ ವರ್ಷ ಪರಿಹಾರ ತುಂಬಾ ಕಡಿಮೆಯಿತ್ತು. ಈ ಬಾರಿ ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡಿದರು.

    ಈ ವೇಳೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು, ನಮ್ಮ ಸರಕಾರ ಸದಾ ರೈತರ ಪರವಾಗಿಯೇ ಕಾರ್ಯನಿರ್ವಹಿಸಿದೆ. ಸುಮಾರು 3.5 ಲಕ್ಷ ಕ್ಯೂಸೆಕ್ ನೀರು ಬಿಡಲ್ಪಟ್ಟ ಕಾರಣ 22 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸಮಗ್ರ ಸಮೀಕ್ಷೆ ಮಾಡಿ ಯಾವುದೇ ರೈತರ ಜಮೀನು ಮಿಸ್ ಆಗದಂತೆ ನೋಡಿಕೊಳ್ಳಬೇಕು. ಶೀಘ್ರದಲ್ಲೇ ಸೂಕ್ತ ಪರಿಹಾರ ದೊರಕುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

    ಶಿವನೂರು ಗ್ರಾಮ ಪ್ರವಾಹ ಪೀಡಿತ ಪ್ರದೇಶವಾಗಿರುವುದರಿಂದ ಭವಿಷ್ಯದಲ್ಲಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಯೋಜನೆಯೂ ಕೈಗೊಳ್ಳಲಾಗುತ್ತದೆ. ತಾತ್ಕಾಲಿಕವಾಗಿ ಹೆಚ್ಚಿನ ನೀರು ಬಂದರೆ ಕಾಳಜಿ ಕೇಂದ್ರಗಳಿಗೆ ಗ್ರಾಮಸ್ಥರನ್ನು ಕರೆದೊಯ್ಯಲಾಗುತ್ತದೆ ಎಂದರು.

    ಈ ವೇಳೆ ವಡಗೇರಾ ತಹಶಿಲ್ದಾರ ಮಂಗಳಾ,ತಾಪಂ ಇಓ ಮಲ್ಲಿಕಾರ್ಜುನ ಸಂಗ್ವಾರ, ಡಿವೈಎಸ್ಪಿ ಸುರೇಶ್, ಪಶುಸಂಗೋಪನೆ ಇಲಾಖೆ ಡಿಡಿ ರಾಜು ದೇಶಮುಖ, ವೆಂಕಟರೆಡ್ಡಿ ಪಾಟೀಲ, ಶಂಕರಗೌಡ ಪಾಟೀಲ,ಬಾಪುಗೌಡ ಮಾಚನೂರು,ಸಿದ್ದಪ್ಪಗೌಡ ಸೋಮಯ್ಯ ಸ್ವಾಮಿ ಸೇರಿದಂತೆ ಅನೇಕರು ಇದ್ದರು.

     

     

  • ಸಮೀಕ್ಷೆ ವೇಳೆ ಹೆಮ್ಮಯಿಂದ ಮಾದಿಗ ಎಂದು ಬರೆಸಿ – ನೀಲೇಶ್ ಕೊಯಿನಿ

    ಸಮೀಕ್ಷೆ ವೇಳೆ ಹೆಮ್ಮಯಿಂದ ಮಾದಿಗ ಎಂದು ಬರೆಸಿ – ನೀಲೇಶ್ ಕೊಯಿನಿ

    ಸತ್ಯಕಾಮ ವಾರ್ತೆ ಗುರುಮಠಕಲ್ : 

    ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ನಡೆಸಲಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು ತಪ್ಪದೆ ಭಾಗವಹಿಸಿ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಮಾದಿಗ ಎಂದೇ ನಮೂದಿಸಬೇಕು, ಕೋಡ್ 61– ಮಾದಿಗ’ ಎಂದು ತಾಲೂಕ ಮಾದಿಗ ದಂಡೋರ ಕಾರ್ಯದರ್ಶಿ ನೀಲೇಶ್ ಕೊಯಿನಿ ಹೇಳಿದರು.

    ಈ ಮೂಲಕ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚು ಮೀಸಲಾತಿ ಪಡೆಯುವ ಪ್ರಯತ್ನ ಮಾಡಬೇಕಿದೆ. ಜನಸಂಖ್ಯೆಯಲ್ಲಿ ಕಡಿಮೆ ಇರುವವರು ಅಭಿವೃದ್ಧಿಯಲ್ಲಿ ಮುಂದಿದ್ದಾರೆ. ಆದರೆ, ಜನಸಂಖ್ಯೆಯಲ್ಲಿ ಮುಂದಿರುವ ನಾವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದೇವೆ.

    ಸರ್ಕಾರದ ಮೂರೂ ಆಯೋಗಗಳು ಮಾದಿಗರ ಸಂಖ್ಯೆ ಹೆಚ್ಚಿದೆ, ಆದರೆ ಹಿಂದುಳಿದಿದ್ದಾರೆ ಎಂದು ಹೇಳಿವೆ. ಈಗ ಒಳ ಮೀಸಲಾತಿ ಜಾರಿಯಾಗಿದೆ. ಆದರೂ, ನಮ್ಮ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಂಡು, ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಸಮುದಾಯದ ಜಾಗೃತರಾಗಿ ಎಂದರು.

  • ಗುಣಮಟ್ಟದ ಕೆಲಸದೊಂದಿಗೆ ನಿಗದಿತ ಅವಧಿಯಲ್ಲಿ ಮುಗಿಸಿ: ಶಾಸಕ ಪಾಟೀಲ್ ಸೂಚನೆ

    ಗುಣಮಟ್ಟದ ಕೆಲಸದೊಂದಿಗೆ ನಿಗದಿತ ಅವಧಿಯಲ್ಲಿ ಮುಗಿಸಿ: ಶಾಸಕ ಪಾಟೀಲ್ ಸೂಚನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಗುಣಮಟ್ಟ ಕಾಮಗಾರಿ ಆಗಬೇಕು ಮತ್ತು ನಿಗದಿತ ಅವಧಿಯಲ್ಲಿ ಮುಗಿಸಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

    ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಯ ಮ್ಯಾಕ್ರೋ ಯೋಜನೆ ಅಡಿಯಲ್ಲಿ 3.48 ಕೋಟಿ ರೂ. ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಕುರಕುಂದಾದಲ್ಲಿ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಸತಿ ನಿಲಯಗಳ ಕಟ್ಟಡಗಳ ಬೇಡಿಕೆ ಬಹುದಿನಗಳಿಂದಲ್ಲೂ ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಬರುವ ದಿನಗಳಲ್ಲಿ ಉತ್ತಮ ಕಟ್ಟಡಗಳು ಈ ಗ್ರಾಮ ಹೊಂದಲಿದೆ ಎಂದರು.

    ರಾಜ್ಯದ ಸಮಗ್ರದ ಅಭಿವೃದ್ಧಿಗೆ ಬದ್ಧವಾಗಿದೆ. ಅದರಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ವಿಶೇಷ ಕಾಳಜಿ ಹೊಂದಿದೆ ಎಂದರು.

    ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್. ಸೂಗುರೆಡ್ಡಿ ಮಾತನಾಡಿ, ಶಾಸಕರ ಕಾಳಜಿ ಮತ್ತು ಸತತ ಪ್ರಯತ್ನದ ಫಲವಾಗಿ ಈ ಕೆಲಸ ಕಾರ್ಯರೂಪಕ್ಕೆ ಬರುತ್ತಿದೆ. ನಿಗದಿತ ಅವಧಿಯೊಳಗೆ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುವುದೆಂದು ಹೇಳಿದರು.

    ಕಾರ್ಯಕ್ರಮದಲ್ಲಿ EO ಮಲ್ಲಿಕಾರ್ಜುನ ಸಂಗವಾರ ವಡಗೇರಾ, ತಾಲೂಕ ಆರೋಗ್ಯ ಅಧಿಕಾರಿ ರಮೇಶ ಗುತ್ತೇದಾರ, ಖಾಜಾ ಮೊನುದ್ದಿನ್ ಮಿರ್ಚಿ,ಸಾಬಣ್ಣ ಗುಂಜನೂರ್, ಬನಪ್ಪ, ಶೂಪುತ್ರಪ್ಪ ಪದ್ದಿ, ರಾಮಲಿಂಗ ಕುದರೆ, ಶರಣಬಸಪ್ಪ, ದೇವಪ್ಪ ವಟ್ಟ, ಕಾಸಿಮ್ ಮುತ್ಯಾ, ಕುರುಕುಂದಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಮುದ್ದಮ್ಮ ಗುಡುಸಾಬ, ಕುರಕುಂದಾ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಮಲ್ಲಪ್ಪ ಹಣಮಂತ ಇದ್ದರು.

  • ಸೆ.15 ರಂದು ಇಂಜಿನಿಯರ್ ದಿನಾಚರಣೆ: ಭೀಮಣ್ಣಗೌಡ ಕ್ಯಾತನಾಳ

    ಸೆ.15 ರಂದು ಇಂಜಿನಿಯರ್ ದಿನಾಚರಣೆ: ಭೀಮಣ್ಣಗೌಡ ಕ್ಯಾತನಾಳ

    ಸತ್ಯಕಾಮ ವಾರ್ತೆ ಯಾದಗಿರಿ:

    ಇಲ್ಲಿನ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ನಿಂದ ನಗರದ ವಿವೇಕಾನಂದ ನಗರದ ತಾಯಮ್ಮ ದೇವಿ, ಹನುಮಾನ ಹಾಗೂ ಈಶ್ವರ ದೇವಾಲಯದ ಸಭಾಂಗಣದಲ್ಲಿ ಸೆ. 15 ರಂದು ಮಧ್ಯಾಹ್ನ 12 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಅವರ 164 ಜನ್ಮದಿನದಂಗವಾಗಿ ಇಂಜಿನಿಯರ್ ಡೇ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇನ್ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ್ ತಿಳಿಸಿದ್ದಾರೆ.

    ಶುಕ್ರವಾರ ಪತ್ರಿಕಾ ಭವನದಲ್ಲಿ‌ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿಸಿ ಹರ್ಷಲ್ ಬೋಯರ್, ಜಿಪಂ ಸಿಇಒ ಲವೀಶ್ ಓರ್ಡಿಯಾ ಮತ್ತು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಭಾಗವಹಿಸುವರು. ವಿವಿಧ ಇಲಾಖೆಗಳ ಪೌರಾಯುಕ್ತ ಉಮೇಶ ಚವ್ಹಾಣ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಪೂಜಾರಿ,ಇಂಜಿನಿಯರ್ ಪ್ರಕಾಶ, ನಫೆಡ್ ರಾಷ್ಟ್ರಿಯ ಉಪಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಿಶ್ವೇಶ್ವರಯ್ಯ ಕಾರ್ಮಿಕ ಸಂಘದ ಅಧ್ಯಕ್ಷ ದೇವಜಿ ಯಾದವ್ ಸೇರಿದಂತೆಯೇ ಇತರರು ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು, ಅಧಿಕಾರಿಗಳನ್ನು‌ ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಗುವುದೆಂದು ಕ್ಯಾತನಾಳ್ ಹೇಳಿದರು.

    ಇದರಂಗವಾಗಿ ಸೆ.14 ರಂದು ಬೆಳಗ್ಗೆ 6.30ರಿಂದ ಇಲ್ಲಿನ ಸರ್ಕಾರಿ‌ ಡಿಗ್ರಿ ಕಾಲೇಜಿನಿಂದ ಲೋಕೋಪಯೋಗಿ ಕಚೇರಿಯವರೆಗೂ ಮ್ಯಾರಥಾನ ಹಮ್ಮಿಕೊಳ್ಳಲಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಅಸೋಸಿಯೇನ್ ಪದಾಧಿಕಾರಿಗಳಾದ ಇರ್ಫಾನ್ ಬಾದಲ್, ಸೋಮಶೇಖರ ಗಣದೂರ, ಬಸವರಾಜ ಕಲಕೇರಿ, ಲೂಕಮಾನ್ ಅಹ್ಮದ್, ಲಕ್ಷ್ಮಣ ಬಾಹುರ, ಗೋಪಿ ಸೇರಿದಂತೆಯೇ ಇತರರಿದ್ದರು.

  • ಗಣಪತಿ ಸರ್ಕಾರಕ್ಕೆ ಸದ್ಬುದ್ದಿ ನೀಡಲಿ : ಶಾಸಕ ಕಂದಕೂರ

    ಗಣಪತಿ ಸರ್ಕಾರಕ್ಕೆ ಸದ್ಬುದ್ದಿ ನೀಡಲಿ : ಶಾಸಕ ಕಂದಕೂರ

    ಸತ್ಯಕಾಮ ವಾರ್ತೆ ಯಾದಗಿರಿ:

    ಅನ್ನದಾತರನ್ನು ಆ ಭಗವಂತ ಗಣೇಶ ಕಾಪಾಡಲಿ, ಅತಿವೃಷ್ಠಿಯಿಂದ ಹಾನಿಗೀಡಾದ ಪರಿಹಾರ ನೀಡಲು ಸರ್ಕಾರಕ್ಕೆ ಗಣಪತಿ ದೇವ ಸದ್ಬುದ್ದಿ ಕೊಡಲಿ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

    ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಹಿರಿಯ ಸಹೋದರ ಮಲ್ಲಿಕಾರ್ಜುನ ರಡ್ಡಿ ಆಶಯದಂತೆ ನಮ್ಮ ಕುಟುಂಬದವರು ಗಣೇಶನಿಗೆ ಪ್ರತಿವರ್ಷ ವಿಶೇಷ ಪೂಜೆ ಸಲ್ಲಿಸುತ್ತೇವೆ. ಗಣಪತಿ ನಮ್ಮ ಜನರ ಎಲ್ಲಾ ಕಷ್ಟಗಳನ್ನು ಪರಿಹರಿಸಲಿ ಎಂದರು.

    ಹಿAದೂ ಮಹಾಗಣಪತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಮಂಟಪವನ್ನು ಅಯೋಧ್ಯೆಯಂತೆ ವಾತಾವರಣ ನಿರ್ಮಾಣ ಮಾಡಿ, ಮಹಾಭಾರತದ ವಿಶೇಷ ಚಿತ್ರಗಳನ್ನು ಭಿತ್ತರಿಸಿರುವುದು ಎಲ್ಲರೂ ಭಕ್ತಿಯಿಂದ ಪುನಿತರಾಗುವಂತೆ ಮಾಡಲಾಗಿರುವುದು ಹಿಂದೂ ಕಾರ್ಯಕರ್ತರ ಭಕ್ತಿಗೆ ಸಾಕ್ಷಿಯಾಗಿದೆ ಎಂದರು.

    ಶನಿವಾರದAದು ಜರುಗುವ ಹಿಂದೂ ಮಹಾಗಣಪತಿಯ ವಿಸರ್ಜನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಭಾಗವಹಿಸಿ ಇದೊಂದು ಐತಿಹಾಸಿಕ ಕಾರ್ಯಕ್ರಮವನ್ನಾಗಿಸಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ, ಪ್ರಮುಖರಾದ ಚನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಶಿರವಾಳ, ಬಂದಪ್ಪ ಅರಳಿ, ಮಲ್ಲಣಗೌಡ ಹಳಿಮನಿ ಕೌಳೂರು, ಮಲ್ಲಣಗೌಡ ಹೊಸಳ್ಳಿ, ಮಲ್ಲಿಕಾರ್ಜುನ ಅರುಣಿ, ಸಾಹೇಬಗೌಡ ಗೌಡಗೇರಾ, ಈಶ್ವರನಾಯಕ ಸೇರಿದಂತೆ ಇತರರಿದ್ದರು.

  • ಧಾರಾಕಾರ ಮಳೆ – ಕೆರೆಯಂತಾದ ಶಾಲಾ ಆವರಣ

    ಧಾರಾಕಾರ ಮಳೆ – ಕೆರೆಯಂತಾದ ಶಾಲಾ ಆವರಣ

    ಸತ್ಯಕಾಮ ವಾರ್ತೆ ಕಲಬುರಗಿ: 

    ನಗರದ ವಿವಿಧೆಡೆ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಬ್ರಹ್ಮಪುರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸಂಪೂರ್ಣವಾಗಿ ಮಳೆನೀರಿನಿಂದ ಕೇರೆಯಂತಾಗಿದ್ದು, ಶಾಲೆಗೆ ತೆರಳಿದ ಮಕ್ಕಳು ಪರದಾಡುವಂತಾಗಿದೆ.

    ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಆವರಣದ ಒಳಗೇ ನೀರು ನಿಂತುಹೋಗಿದೆ. ಬೆಳಗ್ಗೆ ಪೋಷಕರು ಮಕ್ಕಳನ್ನು ಶಾಲೆಗೆ ಕೊಂಡೊಯ್ಯಲು ತೊಂದರೆ ಅನುಭವಿಸಿದರೆ, ಕೆಲವು ವಿದ್ಯಾರ್ಥಿಗಳು ನೀರನ್ನು ದಾಟಿ ತರಗತಿಗೆ ಸೇರಬೇಕಾಯಿತು.

    ಶಾಲಾ ಆವರಣದಲ್ಲಿ ನೀರು ಹೋಗುವುದಕ್ಕೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    “ಪ್ರತಿ ಬಾರಿ ಮಳೆ ಬಿದ್ದಾಗ ಇದೇ ಪರಿಸ್ಥಿತಿ. ಹೀಗಾದರೆ ಮಕ್ಕಳು ಓದುವುದು ಹೇಗೆ?” ಎಂದು ಪೋಷಕರು ಪ್ರಶ್ನಿಸಿದರು.

  • ಜಾತಿ ಸಮೀಕ್ಷೆಯಲ್ಲಿ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಿಸಿ : ಮಹೇಶ ವಿಶ್ವಕರ್ಮ

    ಜಾತಿ ಸಮೀಕ್ಷೆಯಲ್ಲಿ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಿಸಿ : ಮಹೇಶ ವಿಶ್ವಕರ್ಮ

    ಸತ್ಯಕಾಮ ವಾರ್ತೆ ಯಾದಗಿರಿ:
    ಇದೇ ಸೆ.22 ರಿಂದ ಆರಂಭವಾಗಲಿರುವ ಜಾತಿ ಸಮೀಕ್ಷೆ ವೇಳೆ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ಜಿಲ್ಲಾಧ್ಯಕ್ಷ ಮಹೇಶ ವಿಶ್ವಕರ್ಮ ತಿಳಿಸಿದ್ದಾರೆ.

    ಸೋಮವಾರ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಾರ, ಬಡಿಗೇರ, ಅಕ್ಕಸಾಲಿಗ, ಪತ್ತಾರ, ವಿಶ್ವಬ್ರಾಹ್ಮಣ ಹೀಗೆ ಉಪಜಾತಿಗಳನ್ನು ಬರೆಯಿಸದೇ ಎಲ್ಲರೂ ಒಂದಾಗಿ ಹಿಂದೂ ವಿಶ್ವಕರ್ಮ ಎಂದೇ ಬರೆಯಬೇಕೆಂದು ಮನವಿ ಮಾಡಿದ್ದಾರೆ.

    ಹಿಂದೇ ನಡೆಸಿದ ಸಮೀಕ್ಷೆ ಸರಿಯಾಗಿಲ್ಲ, ರಾಜ್ಯದಲ್ಲಿ ಒಟ್ಟು ಸುಮಾರು 45 ಲಕ್ಷ ಜನರು ವಿಶ್ವಕರ್ಮ ಜನರಿದ್ದು, ಅಲ್ಲಿ ಕೇವಲ  15 ಲಕ್ಷ ಜನರೆಂದು ತೊರಿಸುವ ಮೂಲಕ ಅನ್ಯಾಯ ಮಾಡಲಾಗಿದೆ. ಕಾರಣ, ಈಗ ನಡೆಯುವ ಸಮೀಕ್ಷೆ ವೇಳೆ ನಾವೇ ಬೇರೆ, ಬೇರೆಯಾಗಿ ಬರೆಸಿದರೇ ನಮ್ಮ ಜನಸಂಖ್ಯೆಯ ನಿಖರ ಮಾಹಿತಿ ಸಿಗುವುದಿಲ್ಲ ಎಂದರು.

    ಸೇ. 17 ರಂದು ನಡೆಯುವ ವಿಶ್ವಕರ್ಮ ಜಯಂತಿಯಲ್ಲಿ ಸಮಾಜದ ಎಲ್ಲರೂ ಭಾಗವಹಿಸಬೇಕು.ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೇ ಶೇ.70 ರಷ್ಟು ಅಂಕಗಳನ್ನು ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದೆಂದರು.

    ಇದಕ್ಕಾಗಿ ಬನ್ನಪ್ಪ ಕಾಳಬೆಳಗುಂದಿ 70194023439, ದೇವೇಂದ್ರಪ್ಪ ತಳವಾರಗೇರಿ 8660620887, ಗಣೇಶ ಪತ್ತಾರ 9980778380, ಮನೋಹರ 9448561261, ಶ್ರೀನಿವಾಸ 8095760145 ಮತ್ತು ಬನ್ನಪ್ಪ ಬಿಳ್ಹಾರ 9901546261 ಗೇ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

    ಮಹಾಸಭೆಯ ಪ್ರಮುಖರಾದ ದೇವೀಂದ್ರಪ್ಪ ವಡಗೇರಿ,ರಮೇಶ ಹತ್ತಿಕುಣಿ, ಶಿವಣ್ಣ ಹೂನುರು, ಮೌನೇಶ ನಾಯ್ಕಲ್, ಹಣಮಂತ್ರಾಯ ಉಳ್ಳೆಸೂಗುರು, ಜೀವಣ್ಣ ನಾಯ್ಕಲ್, ಮೌನಪ್ಪ ಪಸಪುಲ್, ಬನ್ನಪ್ಪ ಕಾಳೆಬೆಳಗುಂದಿ ಮತ್ತು ಶೇಖರ ತಾತಾ ಮುಸ್ಠೂರ ಸೇರಿದಂತೆಯೇ ಇತರರಿದ್ದರು.