ಬೆಂಗಳೂರು ನಗರದ ವೇಗದ ಬೆಳವಣಿಗೆಗೆ ಅನುಪಾತವಾಗಿ ಇಲ್ಲಿ ಟ್ರಾಫಿಕ್ ಸಮಸ್ಯೆಯೂ ಅಬ್ಬರಿಸಿದೆ. ಕೆಲಸಕ್ಕೆ ಹೋಗುವಾಗ, ಕಾಲೇಜು, ಆಸ್ಪತ್ರೆ, ಅಥವಾ ಸಾಮಾನ್ಯವಾಗಿ ನಗರದಲ್ಲಿ ಸಂಚಾರ ಮಾಡುವಾಗ ವಾಹನ ದಟ್ಟಣೆ ಜನರನ್ನು ಗಂಟೆಗಳ ಕಾಲ ಸಿಲುಕಿಸಿಟ್ಟಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬಂತೆ ಬೆಂಗಳೂರಿನ ಮೆಟ್ರೋ ಸಾರಿಗೆ (Namma Metro) ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಈಗ ಈ ಮೆಟ್ರೋ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸುವ ದೊಡ್ಡ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ.
ನಗರದ ಪ್ರತಿಯೊಂದು ಆರಂಭದಿಂದ ಕೊನೆಯವರೆಗೂ ಮೆಟ್ರೋ ತಲುಪಿಸುವ ಗುರಿ ಹೊಂದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಈಗ ಹೊಸ ರೈಲು ಹಾಗೂ ಕೋಚ್‌ಗಳ ಆರ್ಡರ್ ನೀಡಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿದರೂ, ಒಂದು ರೈಲುಗಾಗಿ ಹೆಚ್ಚು ಸಮಯ ಕಾಯಬೇಕಾಗುವುದಿಲ್ಲ. ಮುಂದಿನ ದಿನಗಳಲ್ಲಿ 3 ನಿಮಿಷಕ್ಕೊಮ್ಮೆ ಮೆಟ್ರೋ ನಿಮ್ಮ ಪ್ಲಾಟ್‌ಫಾರ್ಮ್‌ಗೆ ಬಂದು ನಿಲ್ಲಲಿದೆ!
ಪ್ರಸ್ತುತ ಗ್ರೀನ್, ಪರ್ಪಲ್ ಮತ್ತು ಯೆಲ್ಲೋ ಸೇರಿ ಒಟ್ಟು 63 ರೈಲುಗಳು ನಮ್ಮ ಮೆಟ್ರೋ ಬಳಿಯಿವೆ.
ಗ್ರೀನ್ + ಪರ್ಪಲ್ ಲೈನ್‌ನಲ್ಲಿ: 57 ರೈಲು
ಯೆಲ್ಲೋ ಲೈನ್‌ನಲ್ಲಿ: 6 ರೈಲು
ಹೊಸ ಸೇರ್ಪಡೆ ಹೀಗಿದೆ:
ಗ್ರೀನ್ ಮತ್ತು ಪರ್ಪಲ್ ಲೈನ್ – 21 ಹೊಸ ರೈಲುಗಳು
ಯೆಲ್ಲೋ ಲೈನ್ – 9 ಹೊಸ ರೈಲುಗಳು
ಹೆಚ್ಚುವರಿ ಆರ್ಡರ್ – 6 ರೈಲುಗಳು
ಪಿಂಕ್ ಲೈನ್ ವಿಶೇಷ:
ಕಾಳೇನ ಅಗ್ರಹಾರ ಟು ನಾಗವಾರ – 16 ರೈಲು
ಹೆಚ್ಚುವರಿ – 7 ರೈಲು
ಒಟ್ಟು 23 ರೈಲುಗಳು
ಬ್ಲೂ ಲೈನ್‌ಗಾಗಿ ದೊಡ್ಡ ಸೇರ್ಪಡೆ:
ಸಿಲ್ಕ್ ಬೋರ್ಡ್ ಟು ಕೆ.ಆರ್ ಪುರ – 16 ರೈಲು
ಕೆ.ಆರ್ ಪುರ ಟು ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಟು 21 ರೈಲು
ಒಟ್ಟು 37 ರೈಲುಗಳು
3 ನಿಮಿಷಕ್ಕೊಂದು ಮೆಟ್ರೋ!
ಬ್ಲೂ ಮತ್ತು ಪಿಂಕ್ ಲೈನ್‌ಗಳು ಚಾಲನೆಗೊಂಡು, ಹೊಸ ರೈಲುಗಳು ಸೇರಿಕೊಂಡರೆ, ಪ್ರತಿ 3 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಸಾಧ್ಯವಾಗಲಿದೆ.
ಒಟ್ಟು ರೈಲುಗಳ ಸಂಖ್ಯೆ ರೈಸ್!
ಈಗಿರುವ 63 ರೈಲುಗಳಿಗೆ 96 ಹೊಸ ರೈಲುಗಳು ಸೇರಿದರೆ, ಒಟ್ಟು 159 ರೈಲುಗಳು ನಮ್ಮ ಮೆಟ್ರೋ ಬಳಿಯಲ್ಲಿರಲಿವೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಇದು ದೊಡ್ಡ ನಿರಾಳಿಕೆಯ ಸುದ್ದಿ. ಹೊಸ ಮಾರ್ಗಗಳು ತೆರೆಯುತ್ತಾ, ರೈಲುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದ್ದಂತೆ, ಪ್ರಯಾಣ ಸುಗಮವಾಗುವುದು ಖಚಿತ. ಮೆಟ್ರೋ ಅಭಿವೃದ್ಧಿಯ ಈ ವೇಗ ಮುಂದುವರಿದರೆ, ಭವಿಷ್ಯದಲ್ಲಿ ಬೆಂಗಳೂರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲೇ ಕ್ರಾಂತಿಯನ್ನು ಕಾಣಲಿದೆ.
