ಕಿಚ್ಚ ಸುದೀಪ್ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ‘ಮಾರ್ಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸ್ಯಾಂಡಲ್‌ವುಡ್ ವಾತಾವರಣವೇ ಬದಲಾಗಿದೆ. ಯೂಟ್ಯೂಬ್ ತೆರೆಯುತ್ತಿದ್ದವರಿಗೇ ಮೊದಲಿಗೆ ಕಾಣಿಸಿಕೊಂಡದ್ದು ಕಿಚ್ಚನ ಖಡಕ್ ಲುಕ್. ಟ್ರೈಲರ್ ಬಂದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ದಾಟಿ, ‘ಮಾರ್ಕ್’ ಟ್ರೆಂಡಿಂಗ್ ಪಟ್ಟಿಯ ಮೇಲ್ಭಾಗಕ್ಕೆ ಸರಿಯುವಷ್ಟು ಸದ್ದು ಮಾಡಿದೆ.
ಟ್ರೈಲರ್ ನೋಡಿದ ಕ್ಷಣದಿಂದಲೇ ಅಭಿಮಾನಿಗಳ ಪ್ರತಿಕ್ರಿಯೆ ಒಂದೇ ರೀತಿ ಇದು ಕಿಚ್ಚನ ಪಕ್ಕಾ ಮಾಸ್ ಲುಕ್. ಪೊಲೀಸ್ ಅಧಿಕಾರಿಯಾಗಿ ನಿಂತುಕೊಂಡಿರುವ ಸುದೀಪ್ ಅವರ ನೋಟ, ಸಂಭಾಷಣೆ, ಶೈಲಿ ಎಲ್ಲವೂ ‘ಮ್ಯಾಕ್ಸ್’ನ ಜೋಶ್ ಹಿಂದಿರುಗಿದೆ ಅನ್ನೋ ಭಾವನೆ ಕೊಡುತ್ತದೆ. 18 ಮಕ್ಕಳ ಅಪಹರಣ ಪ್ರಕರಣವನ್ನು 18 ಗಂಟೆಗಳೊಳಗೆ ಬಗೆಹರಿಸಬೇಕಾದ ಒತ್ತಡದ ಕಥೆ ಟ್ರೈಲರ್‌ನಷ್ಟರಲ್ಲೇ ತೀವ್ರತೆಯನ್ನು ತೋರಿಸಿದೆ. ಸುದೀಪ್ ಅವರ ಮುಖದಲ್ಲಿರುವ ಗಂಭೀರತೆ, ಟ್ರೈಲರ್‌ನ ಬ್ಯಾಕ್ಗ್ರೌಂಡ್ ಮ್ಯೂಸಿಕ್, ಆಕ್ಷನ್ ಸೀನ್‌ಗಳು ಎಲ್ಲವೂ ಒಟ್ಟಿಗೆ ಸಿನಿಮಾ ದಿಕ್ಕೇ ಹೇಳುವಂತೆ ಮಾಡಿವೆ.
ಕಳೆದ ವರ್ಷ ಇದೇ ಸಮಯದಲ್ಲಿ ‘ಮ್ಯಾಕ್ಸ್’ ಹುಚ್ಚುಹಬ್ಬ ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿತ್ತು. ಈಗ ಅದೇ ಜೋಶ್ ಮತ್ತೆ ಕಾಣಿಸಿಕೊಂಡಿದೆ. ಟ್ರೈಲರ್ ಬಂದ ಕೆಲವೇ ಗಂಟೆಗಳಲ್ಲಿ 1 ಕೋಟಿ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವುದು ದಾಖಲೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಸಾಮಾನ್ಯ ಪ್ರೇಕ್ಷಕರೂ ಟ್ರೈಲರ್ ಅನ್ನು ಹಂಚಿಕೊಳ್ಳುತ್ತಿರುವುದು ಚಿತ್ರಕ್ಕೆ ಇರುವ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಸುದೀಪ್ ಹಾಕಿರುವ ಹೊಸ ಹಾಡಿನ ಸಣ್ಣ ಸ್ಟೆಪ್ ಟ್ರೈಲರ್‌ನಲ್ಲೇ ಗಮನ ಸೆಳೆದಿದೆ. ‘ಮ್ಯಾಕ್ಸ್’ ಸಮಯದಲ್ಲಿ ಹೇಗೆ ಕಿಚ್ಚನ ಸ್ಟೆಪ್ಸ್ ವೈರಲ್ ಆಗಿದ್ದವೋ, ಇದೇ ರೀತಿ ಈ ಬಾರಿಯೂ ಟ್ರೆಂಡ್ ಆಗೋದ್ರಲ್ಲಿ ಎರಡು ಮಾತಿಲ್ಲ. ಕಿಚ್ಚನ ನ್ಯಾಚುರಲ್ ಸ್ಟೈಲ್, ಕಿಕ್ ಕೊಡುವ ಸ್ಕ್ರೀನ್ ಪ್ರೆಸೆನ್ಸ್ಈ ರೀತಿಯದ್ದನ್ನು ನೋಡುವುದು ಅಭಿಮಾನಿಗಳಿಗೆ ಯಾವಾಗಲೂ ವಿಶೇಷ.
‘ಮಾರ್ಕ್’ ಚಿತ್ರದಲ್ಲಿ ವಿಕ್ರಾಂತ್, ನವೀನ್ ಚಂದ್ರ, ರೋಶಿಣಿ ಪ್ರಕಾಶ್, ಯೋಗಿಬಾಬು, ಶೈನ್ ಟಾಮ್ ಚಾಕೋ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕೂಡ ಸಂಭ್ರಮದ ನಡುವೆಯೇ ಜರುಗಿದ್ದು, ನಿರ್ದೇಶಕ ಪ್ರೇಮ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಮತ್ತು ಸುದೀಪ್ ಅವರ ಪತ್ನಿ ಪ್ರಿಯಾ ಕೂಡ ಉಪಸ್ಥಿತರಿದ್ದರು.
ಡಿಸೆಂಬರ್ 25ರಂದು ಕ್ರಿಸ್‌ಮಸ್ ದಿನ ‘ಮಾರ್ಕ್’ ಬಿಡುಗಡೆಯಾಗಲಿದೆ. ಟ್ರೈಲರ್‌ನಷ್ಟರಲ್ಲೇ ಸಿನಿಮಾ ಕೊಡುವ ಜೋಷ್ ಸ್ಪಷ್ಟವಾಗಿದೆ. ಬಿಡುಗಡೆಯ ದಿನವು ಅಭಿಮಾನಿಗಳಿಗೆ ಹಬ್ಬದಂತೆಯೇ ಇರಲಿದೆ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಟ್ರೈಲರ್ ನೀಡಿರುವ ಸ್ಪೀಡ್ ನೋಡಿದರೆ ‘ಮಾರ್ಕ್’ ಬಾಕ್ಸ್ ಆಫೀಸ್‌ನಲ್ಲಿ ಧೂಳು ಎಬ್ಬಿಸೋದು ಅನಿವಾರ್ಯ ಎನ್ನುವ ಮಾತು ಈಗಲೇ ಕೇಳಿ ಬರುತ್ತಿದೆ.
