ಹೈದರಾಬಾದ್: ಸೌತ್ ಸಿನೆಮಾದ ಪ್ಯಾನ್ ಇಂಡಿಯಾ ಸ್ಟಾರ್, ಎಲ್ಲರ ಮನದ ಡಾರ್ಲಿಂಗ್ ಪ್ರಭಾಸ್ ಅವರ ಹುಟ್ಟುಹಬ್ಬ (ಅಕ್ಟೋಬರ್ 23) ಸಂದರ್ಭದಲ್ಲಿ ಅವರ ಹೊಸ ಸಿನಿಮಾ “ಫೌಜಿ” ಅಧಿಕೃತವಾಗಿ ಘೋಷಣೆಯಾಗಿದೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಭರ್ಜರಿಯಾಗಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಘೋಷಣೆಯ ಜೊತೆಗೆ ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ಈಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಪೋಸ್ಟರ್‌ನಲ್ಲಿ ಪ್ರಭಾಸ್ ಅವರ ತೀಕ್ಷ್ಣ ನೋಟ, ಯುದ್ಧ ಶಸ್ತ್ರಾಸ್ತ್ರಗಳು ಹಾಗೂ ಐತಿಹಾಸಿಕ ವಾತಾವರಣದ ವಿನ್ಯಾಸದಿಂದ ಕೂಡಿದೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಚಿತ್ರದ ಕಥೆ 1940ರ ದಶಕದ ಬ್ರಿಟಿಷ್ ಭಾರತದ ಹಿನ್ನೆಲೆಯಲ್ಲಿದೆ ಎನ್ನಲಾಗಿದೆ. ಅಂದರೆ, ಇದು ಒಂದು ಪೀರಿಯಡ್ ಡ್ರಾಮಾ ಶೈಲಿಯ ಯುದ್ಧಕಥೆ ಆಗಿದ್ದು, ಪ್ರಭಾಸ್ ಅವರನ್ನು ಸಂಪೂರ್ಣ ಹೊಸ ಶೈಲಿಯಲ್ಲಿ ಕಾಣುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ಚಿತ್ರದಲ್ಲಿ ತಾರಾಬಳಗವೂ ಅತ್ಯಂತ ಭರ್ಜರಿಯಾಗಿದೆ ಇಮಾನ್ವಿ, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಾ ಪ್ರದಾ ಸೇರಿದಂತೆ ಹಲವಾರು ಹಿರಿಯ ಕಲಾವಿದರು ಕಾಣಿಸಿದ್ದಾರೆ.
ಹುಟ್ಟುಹಬ್ಬದ ದಿನ ಬಿಡುಗಡೆಯಾದ ಈ ಘೋಷಣೆಯ ನಂತರ, ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಹ್ಯಾಷ್‌ಟ್ಯಾಗ್‌ಗಳು, ಪೋಸ್ಟರ್ ಹಂಚಿಕೆ, ಫ್ಯಾನ್ ಮೀಟಿಂಗ್‌ಗಳ ಮೂಲಕ “ಫೌಜಿ” ಬಗ್ಗೆ ಚರ್ಚೆ ಗರಿಗೆದರುತ್ತಿದೆ.
