ಭಾರತೀಯ ರೈಲ್ವೆ ಯಾವಾಗಲೂ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಕನಸಿನ ಉದ್ಯೋಗ ಕೇಂದ್ರವಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಸ್ಥಿರತೆ, ಆಕರ್ಷಕ ಸೌಲಭ್ಯಗಳು ಹಾಗೂ ದೇಶದಾದ್ಯಂತ ಕೆಲಸ ಮಾಡುವ ಅವಕಾಶಗಳಿರುವುದರಿಂದ ರೈಲ್ವೆ ಇಲಾಖೆಯ ನೇಮಕಾತಿ ಪ್ರಕಟಣೆಗಳು ಸದಾ ಜನರ ಗಮನ ಸೆಳೆಯುತ್ತವೆ. ಈಗ ಇದೇ ರೀತಿಯ ಒಂದು ಸುವರ್ಣಾವಕಾಶವನ್ನು ಈಶಾನ್ಯ ರೈಲ್ವೆ (North Eastern Railway – NER) ಪ್ರಕಟಿಸಿದೆ.
ದೇಶದಾದ್ಯಂತ ವಿವಿಧ ಘಟಕಗಳಲ್ಲಿ ಖಾಲಿ ಇರುವ ಒಟ್ಟು 1104 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಗೊಂಡಿದೆ. ವಿಶೇಷವೆಂದರೆ, ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಅರ್ಹತೆಗಳ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು 2025ರ ನವೆಂಬರ್ 15ರ ಒಳಗಾಗಿ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಸರ್ಕಾರೀ ನೌಕರಿಯಾಗಲು ಬಯಸುವ ಯುವಕರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಹುದ್ದೆಗಳ ವಿಭಾಗವಾರು ವಿವರ ಹೀಗಿದೆ:
ಮೆಕ್ಯಾನಿಕಲ್ ವರ್ಕ್‌ಶಾಪ್ – 390 ಹುದ್ದೆಗಳು
ಸಿಗ್ನಲ್ ವರ್ಕ್‌ಶಾಪ್ – 63 ಹುದ್ದೆಗಳು
ಬಿಡ್ಡಿ ವರ್ಕ್‌ಶಾಪ್ – 35 ಹುದ್ದೆಗಳು
ಮೆಕ್ಯಾನಿಕಲ್ ವರ್ಕ್‌ಶಾಪ್ (ಇತರೆ) – 142 ಹುದ್ದೆಗಳು
ಡೀಸೆಲ್ ಶೆಡ್ – 60 ಹುದ್ದೆಗಳು
ಕ್ಯಾರೇಜ್ ಮತ್ತು ವ್ಯಾಗನ್ – 64 ಹುದ್ದೆಗಳು
ಕ್ಯಾರೇಜ್ ಮತ್ತು ವ್ಯಾಗನ್ / ಲಕ್ಷ್ಮೀ – 149 ಹುದ್ದೆಗಳು
ಡೀಸೆಲ್ ಶೆಡ್ / ಗೊಂಡಾ – 88 ಹುದ್ದೆಗಳು
ಕ್ಯಾರೇಜ್ ಮತ್ತು ವ್ಯಾಗನ್ ವಾರಣಾಸಿ – 73 ಹುದ್ದೆಗಳು
ವಾರಣಾಸಿಯ TRD ವಿಭಾಗ – 40 ಹುದ್ದೆಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತಾ ಮಾನದಂಡಗಳು ಹೀಗಿವೆ:
ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ 10ನೇ ತರಗತಿ ಮತ್ತು ಐಟಿಐ (ITI) ಉತ್ತೀರ್ಣರಾಗಿರಬೇಕು.
ವಯೋಮಿತಿ: 2025ರ ಅಕ್ಟೋಬರ್ 16ರಂತೆ ಅಭ್ಯರ್ಥಿಗಳ ವಯಸ್ಸು 15 ರಿಂದ 24 ವರ್ಷಗಳೊಳಗಾಗಿ ಇರಬೇಕು.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ – 5 ವರ್ಷಗಳ ಸಡಿಲಿಕೆ
ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷಗಳ ಸಡಿಲಿಕೆ
ಪಿಎಚ್ ಅಭ್ಯರ್ಥಿಗಳಿಗೆ – 10 ವರ್ಷಗಳ ಸಡಿಲಿಕೆ
ಅರ್ಜಿ ಶುಲ್ಕದ ವಿವರ ಹೀಗಿದೆ:
ಸಾಮಾನ್ಯ ಅಭ್ಯರ್ಥಿಗಳು – ₹100
ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ ಯಾವ ರೀತಿಯಿರುತ್ತದೆ:
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯುತ್ತದೆ. ಆಯ್ಕೆಯಾದವರಿಗೆ ರೈಲ್ವೆಯ ನಿಯಮಾವಳಿಯಂತೆ ಸ್ಟೈಪೆಂಡ್ (ಪ್ರಶಿಕ್ಷಣ ವೇತನ) ನೀಡಲಾಗುತ್ತದೆ.
ಮುಖ್ಯ ದಿನಾಂಕ: ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 15 ನವೆಂಬರ್ 2025 ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಇರುವವರು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಅಧಿಕೃತ ವೆಬ್‌ಸೈಟ್ ಮೂಲಕ ಸಮಯಕ್ಕೆ ಮುನ್ನ ಅರ್ಜಿ ಸಲ್ಲಿಸಿ, ಯಾವುದೇ ಪರೀಕ್ಷೆ ಇಲ್ಲದೆ ಸರ್ಕಾರೀ ಉದ್ಯೋಗದತ್ತ ಮೊದಲ ಹೆಜ್ಜೆ ಇಡಿ.

