ನಮ್ಮ ದಿನನಿತ್ಯದ ಜೀವನದಲ್ಲಿ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಸಂವಹನದಿಂದ ಹಿಡಿದು ಬ್ಯಾಂಕಿಂಗ್, ಶಿಕ್ಷಣ, ಮನರಂಜನೆ ಹಾಗೂ ಆರೋಗ್ಯದವರೆಗೆ ಎಲ್ಲವೂ ಇಂದು ಕೈಯಲ್ಲಿರುವ ಒಂದು ಸ್ಮಾರ್ಟ್‌ಫೋನ್‌ನಿಂದ ಸಾಧ್ಯವಾಗಿದೆ. ಹೊಸ ಫೋನ್ ಖರೀದಿಸಿದಾಗ ನಾವು ಅದರ ಡಿಸೈನ್, ಕ್ಯಾಮೆರಾ ಗುಣಮಟ್ಟ, ಬ್ಯಾಟರಿ ಬ್ಯಾಕಪ್ ಹಾಗೂ ಬೆಲೆ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ. ಆದರೆ ಒಂದು ಮಹತ್ವದ ವಿಷಯವನ್ನು ಬಹುತೆಕ ಜನರು ಕಡೆಗಣಿಸುತ್ತಾರೆ ಅದು ಫೋನ್‌ನ ಜೀವಿತಾವಧಿ (Lifespan) ಅಥವಾ ಎಕ್ಸ್ ಪೈರಿ ದಿನಾಂಕ (Expiry Date).
ಹಾಲು, ತರಕಾರಿ ಅಥವಾ ಪ್ಯಾಕೇಜ್ಡ್ ಆಹಾರಗಳಂತೆ, ಎಲೆಕ್ಟ್ರಾನಿಕ್ ಸಾಧನಗಳಿಗೂ ಒಂದು ನಿರ್ದಿಷ್ಟ ಅವಧಿಯ ನಂತರ ಸಹಜ ಬಾಳಿಕೆ ಮುಗಿಯುತ್ತದೆ. ಫೋನ್‌ನ ಹಾರ್ಡ್‌ವೇರ್ ನಿಧಾನವಾಗಿ ಹಳೆಯದಾಗುತ್ತದೆ, ಸಾಫ್ಟ್‌ವೇರ್ ಅಪ್‌ಡೇಟ್‌ಗಳು ನಿಲ್ಲುತ್ತವೆ ಮತ್ತು ಕಾರ್ಯಕ್ಷಮತೆಯಲ್ಲಿ ಕುಸಿತ ಕಂಡುಬರುತ್ತದೆ. ಆದರೆ ಬಹಳಷ್ಟು ಮಂದಿ ತಮ್ಮ ಫೋನ್ ಯಾವಾಗ ಮುಕ್ತಾಯ ದಿನಾಂಕ ತಲುಪುತ್ತದೆ ಎಂಬುದನ್ನು ತಿಳಿಯದೇ, ತಡವಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ.
ಇದಕ್ಕಾಗಿ ನಿಮ್ಮ ಫೋನ್‌ನ ಉತ್ಪಾದನಾ ದಿನಾಂಕ ಹಾಗೂ ಕಂಪನಿ ನೀಡುವ ಬೆಂಬಲ ಅವಧಿಯನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಮಾಹಿತಿ ನಿಮ್ಮ ಫೋನ್ ಎಷ್ಟು ವರ್ಷಗಳವರೆಗೆ ಸುರಕ್ಷಿತವಾಗಿ, ಅಪ್‌ಡೇಟ್‌ಗಳೊಂದಿಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ತಿಳಿಸುತ್ತದೆ. ಕೆಳಗಿನ ಹಂತಗಳನ್ನು ಅನುಸರಿಸಿ, ನೀವು ನಿಮ್ಮ ಫೋನ್‌ನ ‘ಎಕ್ಸ್ ಪೈರಿ’ ದಿನಾಂಕವನ್ನು ಸುಲಭವಾಗಿ ಕಂಡುಹಿಡಿಯಬಹುದು.
ಫೋನ್‌ನ ಜೀವಿತಾವಧಿ ತಯಾರಾದ ದಿನದಿಂದಲೇ ಆರಂಭವಾಗುತ್ತದೆ:
ವರದಿಯ ಪ್ರಕಾರ, ಕೆಲವು ಫೋನ್‌ಗಳು ಕೇವಲ 2 ವರ್ಷಗಳವರೆಗೆ ಮಾತ್ರ ಉತ್ತಮವಾಗಿ ಕೆಲಸ ಮಾಡುತ್ತವೆ, ಇತರವು 3–4 ವರ್ಷಗಳವರೆಗೆ ಬೆಂಬಲ ಪಡೆಯುತ್ತವೆ. ಹಾರ್ಡ್‌ವೇರ್ ಸವೆತಕ್ಕಿಂತಲೂ ಕಂಪನಿ ನೀಡುವ ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮತ್ತು ಸೆಕ್ಯುರಿಟಿ ಬೆಂಬಲದ ಅವಧಿಯೇ ಮುಖ್ಯ. ನೀವು ಫೋನ್ ಖರೀದಿಸಿದ ದಿನದಿಂದ ಅಲ್ಲ, ತಯಾರಾದ ದಿನದಿಂದಲೇ ಅವುಗಳ ಜೀವಿತಾವಧಿ ಆರಂಭವಾಗುತ್ತದೆ.
ಬ್ರಾಂಡ್‌ವಾರು ಸರಾಸರಿ ಜೀವಿತಾವಧಿ (Support Period):
Apple iPhone: 4 ರಿಂದ 8 ವರ್ಷಗಳು
Samsung: 3 ರಿಂದ 6 ವರ್ಷಗಳು
Google Pixel: 3 ರಿಂದ 5 ವರ್ಷಗಳು
Huawei: 2 ರಿಂದ 4 ವರ್ಷಗಳು
Vivo, Lava ಮುಂತಾದವು: ಸರಾಸರಿ 3 ರಿಂದ 4 ವರ್ಷಗಳು (ಕೆಲವು 5 ವರ್ಷಗಳವರೆಗೂ)
ಉತ್ಪಾದನಾ ದಿನಾಂಕವನ್ನು ಪತ್ತೆ ಹಚ್ಚುವುದು ಹೇಗೆ?
ಫೋನ್‌ನ ಎಕ್ಸ್ ಪೈರಿ ದಿನಾಂಕವನ್ನು ತಿಳಿಯಲು ಮೊದಲು ಅದರ ಉತ್ಪಾದನಾ ದಿನಾಂಕ ತಿಳಿದುಕೊಳ್ಳಬೇಕು.
ಬಾಕ್ಸ್ ಪರಿಶೀಲನೆ: ಹೆಚ್ಚಿನ ಫೋನ್‌ಗಳ ಬಾಕ್ಸ್‌ನಲ್ಲಿ ಉತ್ಪಾದನಾ ದಿನಾಂಕ ಬರೆಯಲ್ಪಟ್ಟಿರುತ್ತದೆ.
Settings, About Phone: ಇಲ್ಲಿ Serial Number ಅಥವಾ Manufacturing Date ದೊರೆಯುತ್ತದೆ.
SNDeepInfo ವೆಬ್‌ಸೈಟ್‌ಗೆ ಹೋಗಿ ಫೋನ್‌ನ ಸೀರಿಯಲ್ ನಂಬರ್ ನಮೂದಿಸಿ. ಅದು ತಯಾರಾದ ನಿಖರ ದಿನಾಂಕವನ್ನು ನಿಮಗೆ ತೋರಿಸುತ್ತದೆ.
Dial Code: *#06# ಅನ್ನು ಡಯಲ್ ಮಾಡಿದರೆ ಫೋನ್‌ನ Serial Number ಕಾಣಿಸುತ್ತದೆ.
ಎಕ್ಸ್ ಪೈರಿ ದಿನಾಂಕ ಲೆಕ್ಕ ಹಾಕುವುದು ಹೇಗೆ?
ಉತ್ಪಾದನಾ ದಿನಾಂಕವನ್ನು ತಿಳಿದ ನಂತರ, ಬ್ರಾಂಡ್‌ನ ಸರಾಸರಿ ಬೆಂಬಲ ಅವಧಿಯನ್ನು ಅದರ ಮೇಲೆ ಸೇರಿಸಿ ಲೆಕ್ಕ ಹಾಕಿ.
ಉದಾಹರಣೆಗೆ, ನೀವು 2020ರಲ್ಲಿ ತಯಾರಾದ iPhone ಬಳಸುತ್ತಿದ್ದರೆ, ಅದು 2024ರಿಂದ 2028ರ ಒಳಗೆ ಬೆಂಬಲ ಮುಗಿಯುವ ಸಾಧ್ಯತೆ ಇದೆ.
endoflife.date ಸೈಟ್ ಬಳಸಿ ನಿಖರ ಮಾಹಿತಿಯನ್ನು ಪಡೆಯಿರಿ:
endoflife.date ಎಂಬ ವೆಬ್‌ಸೈಟ್‌ನಲ್ಲಿ ವಿವಿಧ ಫೋನ್‌ಗಳು, ಸಾಫ್ಟ್‌ವೇರ್ ಹಾಗೂ ಉಪಕರಣಗಳ ಅಧಿಕೃತ ಮುಕ್ತಾಯ ದಿನಾಂಕ (End of Support Date) ನೀಡಲಾಗುತ್ತದೆ.
ಈ ಸೈಟ್‌ನಲ್ಲಿ ನೀವು iPhone, iPad, Apple Watch ಅಥವಾ Amazon Kindle ಮುಂತಾದ ಸಾಧನಗಳಿಗೂ ಮುಕ್ತಾಯ ದಿನಾಂಕವನ್ನು ಪರಿಶೀಲಿಸಬಹುದು.
ಹೀಗಾಗಿ, ನೀವು ಹೊಸ ಫೋನ್ ಖರೀದಿಸುವಾಗ ಅಥವಾ ಉಪಯೋಗಿಸಿದ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಮೊದಲು ಅದರ ಎಕ್ಸ್ ಪೈರಿ ದಿನಾಂಕವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಫೋನ್‌ನ ಎಕ್ಸ್ ಪೈರಿ ದಿನಾಂಕ ತಿಳಿದಿರುವುದರಿಂದ ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು z ಹೊಸ ಫೋನ್‌ಗೆ ಸರಿಯಾದ ಸಮಯದಲ್ಲಿ ಅಪ್‌ಗ್ರೇಡ್ ಮಾಡಬಹುದು, ಸುರಕ್ಷತೆ ಕಾಪಾಡಬಹುದು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಮುಂಚಿತವಾಗಿ ತಪ್ಪಿಸಬಹುದು.

