ಸತ್ಯಕಾಮ ವಾರ್ತೆ ಯಾದಗಿರಿ:
ಇಲ್ಲಿನ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ನಿಂದ ನಗರದ ವಿವೇಕಾನಂದ ನಗರದ ತಾಯಮ್ಮ ದೇವಿ, ಹನುಮಾನ ಹಾಗೂ ಈಶ್ವರ ದೇವಾಲಯದ ಸಭಾಂಗಣದಲ್ಲಿ ಸೆ. 15 ರಂದು ಮಧ್ಯಾಹ್ನ 12 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಅವರ 164 ಜನ್ಮದಿನದಂಗವಾಗಿ ಇಂಜಿನಿಯರ್ ಡೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇನ್ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾ ಭವನದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿಸಿ ಹರ್ಷಲ್ ಬೋಯರ್, ಜಿಪಂ ಸಿಇಒ ಲವೀಶ್ ಓರ್ಡಿಯಾ ಮತ್ತು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಭಾಗವಹಿಸುವರು. ವಿವಿಧ ಇಲಾಖೆಗಳ ಪೌರಾಯುಕ್ತ ಉಮೇಶ ಚವ್ಹಾಣ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಪೂಜಾರಿ,ಇಂಜಿನಿಯರ್ ಪ್ರಕಾಶ, ನಫೆಡ್ ರಾಷ್ಟ್ರಿಯ ಉಪಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಿಶ್ವೇಶ್ವರಯ್ಯ ಕಾರ್ಮಿಕ ಸಂಘದ ಅಧ್ಯಕ್ಷ ದೇವಜಿ ಯಾದವ್ ಸೇರಿದಂತೆಯೇ ಇತರರು ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು, ಅಧಿಕಾರಿಗಳನ್ನು ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಗುವುದೆಂದು ಕ್ಯಾತನಾಳ್ ಹೇಳಿದರು.
ಇದರಂಗವಾಗಿ ಸೆ.14 ರಂದು ಬೆಳಗ್ಗೆ 6.30ರಿಂದ ಇಲ್ಲಿನ ಸರ್ಕಾರಿ ಡಿಗ್ರಿ ಕಾಲೇಜಿನಿಂದ ಲೋಕೋಪಯೋಗಿ ಕಚೇರಿಯವರೆಗೂ ಮ್ಯಾರಥಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇನ್ ಪದಾಧಿಕಾರಿಗಳಾದ ಇರ್ಫಾನ್ ಬಾದಲ್, ಸೋಮಶೇಖರ ಗಣದೂರ, ಬಸವರಾಜ ಕಲಕೇರಿ, ಲೂಕಮಾನ್ ಅಹ್ಮದ್, ಲಕ್ಷ್ಮಣ ಬಾಹುರ, ಗೋಪಿ ಸೇರಿದಂತೆಯೇ ಇತರರಿದ್ದರು.

