ಸತ್ಯಕಾಮ ವಾರ್ತೆ ಯಾದಗಿರಿ:
ಅನ್ನದಾತರನ್ನು ಆ ಭಗವಂತ ಗಣೇಶ ಕಾಪಾಡಲಿ, ಅತಿವೃಷ್ಠಿಯಿಂದ ಹಾನಿಗೀಡಾದ ಪರಿಹಾರ ನೀಡಲು ಸರ್ಕಾರಕ್ಕೆ ಗಣಪತಿ ದೇವ ಸದ್ಬುದ್ದಿ ಕೊಡಲಿ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಹಿರಿಯ ಸಹೋದರ ಮಲ್ಲಿಕಾರ್ಜುನ ರಡ್ಡಿ ಆಶಯದಂತೆ ನಮ್ಮ ಕುಟುಂಬದವರು ಗಣೇಶನಿಗೆ ಪ್ರತಿವರ್ಷ ವಿಶೇಷ ಪೂಜೆ ಸಲ್ಲಿಸುತ್ತೇವೆ. ಗಣಪತಿ ನಮ್ಮ ಜನರ ಎಲ್ಲಾ ಕಷ್ಟಗಳನ್ನು ಪರಿಹರಿಸಲಿ ಎಂದರು.
ಹಿAದೂ ಮಹಾಗಣಪತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಮಂಟಪವನ್ನು ಅಯೋಧ್ಯೆಯಂತೆ ವಾತಾವರಣ ನಿರ್ಮಾಣ ಮಾಡಿ, ಮಹಾಭಾರತದ ವಿಶೇಷ ಚಿತ್ರಗಳನ್ನು ಭಿತ್ತರಿಸಿರುವುದು ಎಲ್ಲರೂ ಭಕ್ತಿಯಿಂದ ಪುನಿತರಾಗುವಂತೆ ಮಾಡಲಾಗಿರುವುದು ಹಿಂದೂ ಕಾರ್ಯಕರ್ತರ ಭಕ್ತಿಗೆ ಸಾಕ್ಷಿಯಾಗಿದೆ ಎಂದರು.
ಶನಿವಾರದAದು ಜರುಗುವ ಹಿಂದೂ ಮಹಾಗಣಪತಿಯ ವಿಸರ್ಜನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಭಾಗವಹಿಸಿ ಇದೊಂದು ಐತಿಹಾಸಿಕ ಕಾರ್ಯಕ್ರಮವನ್ನಾಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ, ಪ್ರಮುಖರಾದ ಚನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಶಿರವಾಳ, ಬಂದಪ್ಪ ಅರಳಿ, ಮಲ್ಲಣಗೌಡ ಹಳಿಮನಿ ಕೌಳೂರು, ಮಲ್ಲಣಗೌಡ ಹೊಸಳ್ಳಿ, ಮಲ್ಲಿಕಾರ್ಜುನ ಅರುಣಿ, ಸಾಹೇಬಗೌಡ ಗೌಡಗೇರಾ, ಈಶ್ವರನಾಯಕ ಸೇರಿದಂತೆ ಇತರರಿದ್ದರು.

