ಸನ್ಮಾನ ನೇರವೆರಿಸಿ ಮಾತನಾಡಿದ ಸಹಕಾರ ಯೂನಿಯನ್ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಪೂರ ಗಿರಿ ಜಿಲ್ಲೆಯ ಸಹಕಾರ ಸಂಘದಲ್ಲಿ ಗುರಿತಿಕೊಂಡಿದ್ದ ಸಿದ್ದಪ್ಪ ಹೊಟ್ಟಿ ದೇಶದ ದೆಹಲಿಯಲ್ಲಿರುವ ನೆಪೆಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದು ನಮ್ಮ ಹಿಂದುಳಿದ ಯಾದಗಿರಿ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸಹಕಾರ ಯುನಿಯನ್ ನಿರ್ದೇಶಕ ಕೆಂಚಪ್ಪ ನಗನೂರ ಮಾತನಾಡಿ ಸಿದ್ದಪ್ಪ ಎಸ್ ಹೊಟ್ಟಿ ಅವರು ದೆಹಲಿ ನೆಪೆಡ್ ಸಂಸ್ಥೆಯ ಮತ್ತ ನೂತನವಾಗಿ ಆಯ್ಕೆಯಾದ ಎನ್ ಎಚ್ ಆರ್ ಡಿ ಎಪ್ ಸಂಸ್ಥೆಯ ವತಿಯಿಂದ ಬರುವ ಸವಲತ್ತುಗಳನ್ನು ನಮ್ಮ ಗಿರಿ ಜಿಲ್ಲೆಗೆ ತರುವಂತಹ ಕೆಲಸ ಆಗಬೇಕು ನಮ್ಮ ಸ್ಥಳೀಯ ಸಹಕಾರ ಸಂಘಗಳಿಗೆ ಆರ್ಥಿಕ ಶಕ್ತಿ ತುಂಬುವಂತಹ ಕೆಲಸ ತಾವು ಮಾಡಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದಪ್ಪ ಎಸ್ ಹೊಟ್ಟಿ ನಾನು ಸಹಕಾರ ಕ್ಷೇತ್ರದಲ್ಲಿ ಇಂದು ಈ ಮಟಕ್ಕೆ ಹೋಗಲು ದಿವಂಗತ ಸದಾಶಿವರೆಡ್ಡಿ ಕಂದಕೂರ ಅವರ ಆಶಿರ್ವಾದದಿಂದ ನಾನು ಸಹಕಾರ ಕ್ಷೇತ್ರದಲ್ಲಿ ಬೇಳೆಯಲು ಸಾದ್ಯವಾಗಿದೆ ಎಂದು ಹೇಳಿದರು. ನಾನು ತಾಲೂಕು ಒಕ್ಕಲುತನ ಹುಟ್ಟವಳಿ ಮಾರಟ ಸಹಕಾರ ಸಂಘದ ಅಧ್ಯಕ್ಷರಾಗಿ ನಿರ್ದೇಶಕರಾಗಿ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ. ಇನ್ನೂ ಅನೇಕ ಸಂಘಗಳಲ್ಲಿ ಹುದ್ದೆಯನ್ನು ನಿಭಾಯಿಸಲು ನಿಮ್ಮೇಲ್ಲರ ಸಹಕಾರದಿಂದ ಸೇವೆ ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಲಬುರಗಿ ಹಾಗೂ ಯಾದಗಿರಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಪವನ ಕುಮಾರ. ಅಯ್ಯಣ್ಣ ಹುಂಡೇಕಾರ.ಪ್ರಕಾಶ ಅಂಗಡಿ ಕನ್ನೆಳ್ಳಿ. ಆರ್ ಮಾಹದೇವಪ್ಪಗೌಡ ಅಬ್ಬೆತುಮಕುರ. ಬಸವಂತ್ರಾಯ ಮಾಲಿಪಾಟೀಲ್. ಬಸವರಾಜ ಮೊಟ್ನಳ್ಳಿ. ಡಾ. ಭೀಮರಾಯ ಲಿಂಗೇರಿ.ಡಾ. ಎಸ್ ಎಸ್ ನಾಯಕ. ಚೆನ್ನಪ್ಪ ಠಾಣಗುಂದಿ, ಸೂಗಪ್ಪ ಪಾಟೀಲ್, ಅಮರಣ್ಣಗೌಡ ಗಡ್ಡೆಸೂಗೂರು, ವೈಜನಾಥ ತುಮಕೂರು, ನಾಗೇಂದ್ರ ಜಾಜಿ. ವಿ ಎಸ್ ಜಾಕಾಮಠ. ವೀರಭದ್ರಯ್ಯ ಮೋಟಾರ. ಶರಣಪ್ಪ ಗುಳಗಿ. ನಾಗಪ್ಪ ಸಜ್ಜನ. ಮಲ್ಲಿನಾಥ ಆಯರಕರ್. ಶೇಖರ ಅರಳಿ. ಲಕ್ಮೀನಾರಯಣ. ಅಯ್ಯಣ್ಣ ಗೌಡ ಕ್ಯಾಸಪನಳ್ಳಿ. ದೇವರಾಜ ವರ್ಕನಳ್ಳಿ, ಸುಜಾತ ಮಠ.ರೇಖಾ ಮ್ಯಾಗೇರಿ. ಮಲ್ಲು ಸ್ವಾಮಿ,ಸಿದ್ದಪ್ಪ ಹೊಟ್ಟಿಯ ಆತ್ಮೀಯ ಬಳಗದಿಂದ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

