ಗುರುಮಠಕಲ್: ತಾಲೂಕಿನ ಬೋರಾಬಂಡ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಅ.15 ಶುಕ್ರವಾರದಂದು ಎರಡನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಸ್. ಎಲ್. ಟಿ ದೇವಸ್ಥಾನದ ವ್ಯವಸ್ಥಾಪಕ ನರೇಂದ್ರ ರಾಠೋಡ್ ಹೇಳಿದರು.
ಪಟ್ಟಣದ ಎಸ್.ಎಲ್.ಟಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 5:30ಕ್ಕೆ ಸುಪ್ರಭಾತ ಸೇವೆ. 6:30ಕ್ಕೆ ಪಂಚಾಮೃತ ಹಾಗೂ ಅಲಂಕಾರ ಸೇವಾ ಮಹಾಪೂಜೆ, 9:30ಕ್ಕೆ ಶ್ರೀ ವರಮಹಾಲಕ್ಷ್ಮಿ ಪೂಜೆ ಪ್ರಾರಂಭ, 11.ಗಂ ರಥೋತ್ಸವ ನಂತರ ಮಹಾನೈವೇದ್ಯ, ಮಹಾ ಮಂಗಳಾರತಿ, ತದನಂತರದಲ್ಲಿ ತೀರ್ಥಪ್ರಸಾದವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಶ್ರೀ ಕೃಷ್ಣ ಜನೋತ್ಸವ ಪ್ರಯುಕ್ತ ಅ. 17ರಂದು ಬೆಳಗ್ಗೆ 9-00ಕ್ಕೆ ಬೋಡಬಂಡ ಗ್ರಾಮದ ಶ್ರೀ ಹನುಮಾನ ದೇವಸ್ಥನದಿಂದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದವರೆಗೆ ಶ್ರೀಕೃಷ್ಣ ದೇವರ ಪಲ್ಲಕ್ಕಿ ಉತ್ಸವ ಜೊತೆಗೆ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ ಮಹಾದ್ವಾರದ ಹತ್ತಿರ ಮೊದಲನೆಯ ಮೊಸರಿನ ಗಡಿಗೆ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಸನ್ನಿಧಿಯಲ್ಲಿ ಎರಡನೇ ಮೊಸರಿನ ಗಡಿಗೆ ಹೊಡೆದು, ಬಣ್ಣದ ಓಕುಳಿ ಆಡಲಾಗುವುದು ಎಂದು ಅವರುತಿಳಿಸಿದರು.
ಶ್ರೀ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ಮೋ.8885011111, 7021261844 ಸಂಖ್ಯೆಗೆ ಕರೆಮಾಡಿ ಹೆಸರನ್ನು ನೊಂದಾಯಿಸಬೇಕು ಹಾಗೂ ಕಡ್ಡಾಯವಾಗಿ ದಂಪತಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಎಂದು ಅವರು ವಿನಂತಿಸಿಕೊಂಡರು.
ಈ ಸಂಧರ್ಭದಲ್ಲಿ ಬಂಜಾರ ಸಮುದಾಯದ ಮುಖಂಡ ಕಾಶಿನಾಥ ರಾಠೋಡ್, ಶರಣಪ್ಪ, ಹಫೀಜ್ ಮಡ್ಕಿ ಉಪಸ್ಥಿತರಿದ್ದರು.

