ತಾಲೂಕಿನ ತುಪ್ಪದೂರು ಕೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಮಾದಕ ವ್ಯಸನಕ್ಕೆ ಬಲಿಯಾಗುತಿದ್ದು, ಇದನ್ನು ತಡೆಗಟ್ಟಲು ಪ್ರತಿಯೊಬ್ಬ ಯುವಕರು ನಶಾಮುಕ್ತ ಜಿಲ್ಲೆಗೆ ಕೈಜೋಡಿಸಿದಾಗ ಮಾತ್ರ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಯುವಕರು ಚಿಕ್ಕ ವಯಸ್ಸಿನಲ್ಲಿ ನಶೆ ತರಿಸುವ ಚಟಗಳಿಗೆ ದಾಸರಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಪಂಜಾಬ ಮತ್ತಿತರ ರಾಜ್ಯಗಳಲ್ಲಿ ಇದು ಮಿತಿಮೀರುತ್ತಿದೆ. ಇದರಿಂದ ಸಮಾಜ ಮತ್ತು ದೇಶದ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಯುವಕರೇ ದೇಶದ ಶಕ್ತಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಅತಿಥಿ ಶಿಕ್ಷಕರಾದ ನಾಗೇಶ ಭೋವಿ ಕುರುಡಿ, ಶಿವಪ್ಪ ನಾಯಕ ಕಲ್ಲೂರು, ಅಂಗನವಾಡಿ ಶಿಕ್ಷಕಿ ಸುಜಾತ ಮಾಚನೂರು, ಅಡುಗೆ ಸಿಬ್ಬಂದಿ ದೇವಮ್ಮ, ಬಸ್ಸಮ್ಮ, ಹುಲಿಗೆಮ್ಮ ಗ್ರಾಮದ ಯುವಕರಾದ ಹನುಮಂತ ನಾಯಕ, ರವಿ ನಾಯಕ, ಉರುಕುಂದ ನಾಯಕ, ಚೆನ್ನಯ, ಮಾರೆಪ್ಪ ನಾಯಕ, ಯಂಕಪ್ಪ ನಾಯಕ, ಯಲ್ಲಾಲಿಂಗ ನಾಯಕ, ಹುಲಿಗೇಶ ನಾಯಕ, ನಾಗರಾಜ, ಯಂಕಪ್ಪ , ದೇವಯ್ಯ ನಾಯಕ, ಯಲ್ಲಾಲಿಂಗ, ಮಹೇಶ್ ನಾಯಕ ಸೇರಿದಂತೆ ಇತರರಿದ್ದರು.

