ವಡಗೇರಾ: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಶಾಂತಿ ಸಭೆಯನ್ನು ವಡಗೇರಾ ಪೊಲೀಸ್ ಠಾಣಾ ಅವರಣದಲ್ಲಿ ಆಯೋಜಿಸಲಾಗಿತ್ತು.
ತಾಲೂಕಿನ ಕಾಡಮಗೇರಾ (ಬಿ), ತುಮಕೂರು, ಐಕೂರು ಗ್ರಾಮಗಳ ಸಮುದಾಯ ಮುಖಂಡರು ಸಭೆಯಲ್ಲಿ ಭಾಗವಹಿಸಿದರು.
ಪಿಎಸ್ಐ ಮಹಿಬೂಬ್ ಅಲಿ ಮಾತನಾಡಿ – ಗಣೇಶ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆ ಕಡ್ಡಾಯ, ಮೂರ್ತಿ ಪ್ರತಿಷ್ಠಾಪನೆ ಬಳಿಕ ಪ್ರತಿದಿನ ಮೂರ್ತಿಯನ್ನು ಕಾಯಲು 1–2 ಮಂದಿ ಕಡ್ಡಾಯವಾಗಿ ಇರತಕ್ಕದ್ದು, ವಿಸರ್ಜನೆ ವೇಳೆ ಕರ್ಕಶ ಡಿಜೆ ನಿಷೇಧ ಎಂದು ಸ್ಪಷ್ಟ ಸೂಚನೆ ನೀಡಿದರು.
ಈದ್ ಮಿಲಾದ್ ಮೆರವಣಿಗೆಯೂ ಶಾಂತಿಯುತವಾಗಿರಬೇಕು, ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಶಾಂತ ರೀತಿಯಿಂದ ಯಾವುದೇ ಧರ್ಮಕ್ಕೆ ತೊಂದರೆಯಾಗದಂತೆ, ಹಿಂದೂ–ಮುಸ್ಲಿಂ ಸಹೋದರತ್ವ ಕಾಪಾಡಬೇಕು ಎಂದು ತಿಳಿಸಿದರು.

