ಸತ್ಯಕಾಮ ವಾರ್ತೆ ವಡಗೇರಾ:
ಆಗಸ್ಟ್ 5 ರಂದು ಶಹಾಪುರ ನಗರದಲ್ಲಿ ನಡೆದ ಹೋಬಳಿ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ವಡಗೇರಾ ತಾಲೂಕಿನ ಕ್ಯಾತನಾಳ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಕ್ಕಳ ಸಾಧನೆ ಕುರಿತು ಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ ಬಾಗ್ಲಿ ಮಾತನಾಡಿದರು.ಗ್ರಾಮೀಣ ಪ್ರತಿಭೆಗಳಿಗೆ ಕ್ರೀಡೆಯಲ್ಲಿ ಅತಿ ಹೆಚ್ಚು ಸಾಧನೆ ಮಾಡುತ್ತಿದ್ದು ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಇಲಾಖೆಯ ಅಧಿಕಾರಿಗಳು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಮುಂದೆ ನಡೆಯುವ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯಶಾಲಿಯಾಗಿ ಎಂದು ಹಾರೈಸಿದರು.
ಈ ಮಕ್ಕಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರಾದ ಶರಣಪ್ಪ ಬಾಗ್ಲಿ ,ಶಿಕ್ಷಕ ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಗ್ರಾ ಪಂ ಸದಸ್ಯರಾದ ಮಂಜುಳಾ ಎಚ್. ಬಿ ಪಾಟೀಲ, ಮಲ್ಲಿಕಾರ್ಜುನ್ ಠಾಣಗುಂದಿ , ವಿದ್ಯಾಧರ್ ಜಾಕಾ, ದೇವೇಂದ್ರಪ್ಪ ಗುಡ್ಡೆನೂರು, ಸಿದ್ದಮ್ಮ, ದೇವೇಂದ್ರಪ್ಪ ಮಲ್ಲಳ್ಳಿ, ಸೋಫಿಯಾ ಬೇಗಂ, ಹಾಗೂ ಇನ್ನಿತರರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

