ಸುರಪುರ:ರಸಗೊಬ್ಬರ ಅಂಗಡಿಗಳಲ್ಲಿ ಗೊಬ್ಬರವಿದ್ದರು ರೈತರಿಗೆ ನೀಡುತ್ತಿಲ್ಲ.ರಸಗೊಬ್ಬರ ಅಂಗಡಿಗಳ ಮಾಲೀಕರು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.ಆದ್ದರಿಂದ ಇಲಾಖೆಯಿಂದ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಆಗ್ರಹಿಸಿದರು.
ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ವತಿಯಿಂದ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಈಗಾಗಲೇ ರೈತರು ರಸಗೊಬ್ಬರ ಸಿಗದೆ ತುಂಬಾ ತೊಂದರೆ ಪಡುತ್ತಿದ್ದು ಕೃಷಿ ಇಲಾಖೆ ರೈತರ ಸಮಸ್ಯೆಗೆ ಸ್ಪಂದಿಸುವAತೆ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಸಹಾಯಕ ಕೃಷಿ ನಿರ್ದೇಶಕ ಮಾತನಾಡಿ,ರೈತರು ರಸಗೊಬ್ಬರದ ಬದಲಾಗಿ ನ್ಯಾನೋ ರಸಗೊಬ್ಬರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.ಅಲ್ಲದೆ,ತಾವು ಸಲ್ಲಿಸಿರುವ ಬೇಡಿಕೆಯಂತೆ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ಏನಾದರು ಅಕ್ರಮ ನಡೆದಿದ್ದರೆ ಅಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ತಾಲ್ಲೂಕ ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟೆ, ಶಿವರಾಜ ಮೊಕಾಸಿ ಸತ್ಯಂಪೇಟೆ,ವಾಸುದೇವ ನಾಯಕ,ಮೌನೇಶ ದಳಪತಿ,ರಾಘವೇಂದ್ರ ಸಗರ,ಬಸವರಾಜ ಪಾಟೀಲ್,ರವಿ ಹುಲಕಲ್,ಮಲ್ಲು ನಾಯಕ,ರವಿಕಿರಣ್ ಹೊಸ ಸಿದ್ದಾಪುರ,ದ್ಯಾವಪ್ಪ ದೇವಿಕೇರಾ,ನಿಂಗಣ್ಣ ದುಸ್ತಾರಿ,ಭೀಮಣ್ಣ ಗಡ್ಡಿಮನಿ, ದೇವು ನಾಯಕ,ಕೃಷ್ಣಾ ನಾಯಕ,ಶಿವಮೂರ್ತಿ ದೀವಳಗುಡ್ಡ,ಬಸಪ್ಪ ಹೆಳವರ,ಮರೆಪ್ಪ ಕೋಮಾರಿ,ಹುಲಿರಾಜ್ ಹುಲಕಲ್,ರಾಘವೇಂದ್ರ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.

