ಸತ್ಯಕಾಮ ವಾರ್ತೆ ಯಾದಗಿರಿ:
ಸಂಸ್ಕೃತಿಯ ನಾಡೆಂದು ಹೆಸರು ವಾಸಿಯಾಗಿರುವ ಭಾರತ ಸಂಸ್ಕೃತಿ ನೆಲದಲ್ಲಿ ಜನಿಸಿದ ನಾವೆಲ್ಲರೂ ನಾಡಿನ ಕಲೆ ಸಂಸ್ಕೃತಿ ಸಾಹಿತ್ಯವನ್ನು ಬೆಳೆಸೋಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ ಹೇಳಿದರು.
ತಾಲೂಕಿನ ಯರಗೋಳ ಗ್ರಾಮದಲ್ಲಿ ನಡೆದ ಸಮನ್ವಯ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿರುವ ಜಾನಪದ ಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ರೈತರ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಪ್ರದರ್ಶಿಸಿ ಪ್ರದರ್ಶಿಸುವ ಒಂದು ಸುವರ್ಣ ವೇದಿಕೆ ಸಂಘ-ಸಂಸ್ಥೆಗಳು ಮಾಡಲ್ಪಟ್ಟಿವೆ ಹಾಗಾಗಿ ಪ್ರತಿಯೊಬ್ಬರೂ ನಾಡಿನ ಕಲೆ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು.
ಸಮನ್ವಯ ಸೇವಾ ಸಂಸ್ಥೆ ಹಲವು ವರ್ಷದಿಂದ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದೆ, ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯವಾಗಿದೆ, ಶಿಕ್ಷಣದ ಜೊತೆಗೆ ಕಲೆ ಸಂಸ್ಕೃತಿ ಬೆಳೆಸಲು ಇಂತಹ ಸಂಘ ಸಂಸ್ಥೆಗಳು ಜೀವಂತವಾಗಿವೆ, ಇಂತಹ ಸಂಸ್ಥೆಗಳಿಗೆ ಸರಕಾರದಿಂದ ಸಹಾಯ ಧನ ಪಡೆದುಕೊಂಡು ದೊಡ್ಡ ಮಟ್ಟದ ಸೇವೆಯನ್ನು ಮಾಡಲಿ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಬಾಬು ಚೌಹಾನ್ ಪ್ರಾಸ್ತವಿಕ ನುಡಿಗಳು.
ಈ ಸಂದರ್ಭದಲ್ಲಿ ರೈತ ಸೇನೆಯ ತಾಲೂಕು ಉಪಾಧ್ಯಕ್ಷ ತಾಯಪ್ಪ ನಾಯಕ, ಸಂಸ್ಥೆಯ ಅಧ್ಯಕ್ಷ ದೇವಿಂದ್ರ ಧೋತ್ರ, ಭೀಮಾ ಜ್ಯೋತಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಭೀಮಶಂಕರ ಎಂ.ಯರಗೋಳ, ಮುಖ್ಯ ಗುರು ಲಕ್ಷ್ಮಿಕಾಂತ್, ಚನಬಸಪ್ಪ, ನಿವೃತ್ತ ಮುಖ್ಯಗುರು ಚಂದ್ರಪ್ಪ ಗುಂಜಾನೂರ್, ಮುಖ್ಯ ಗುರು ಶ್ರೀಮತಿ ಕಲ್ಪನಾ, ಎಸ್.ಡಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದುರ್ಗಪ್ಪ ಪೂಜಾರಿ, ಸಾಬಣ್ಣ ಜೋಗಿ ಗ್ರಾ.ಪಂ.ಕಾರ್ಯದರ್ಶಿ ರವಿ ಮುಂತಾದವರಿದ್ದರು.
ಈ ವೇಳೆ ವೇಳೆಯಲ್ಲಿ ಗೌತಮ್ ಬುದ್ಧ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಭರತನಾಟ್ಯ, ಜಾನಪದ ಗೀತೆ, ಜಾನಪದ ಸಾಮೂಹಿಕ ನೃತ್ಯ, ಗೀತ ಗಾಯನ ಮುಂತಾದವು ಕಲೆಗಳನ್ನು ಪ್ರದರ್ಶಿಸಿದರು ನೋಡುಗರ ಗಮನ ಸೆಳೆದವು.

