ನಂತರ ಮಾತನಾಡಿದ ಇವರು ಮೂಟ್ ಕೋರ್ಟ್ ಹಾಲ್ ಇದೊಂದು ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಅಧ್ಯಯನ ಹಾಗೂ ಪ್ರಾಯೋಗಿಕವಾಗಿ ಕಾನೂನು ತರಬೇತಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಿರ್ದೇಶಕರಾದ ಶ್ರೀ ಸಿ.ಎಸ್. ಪಾಟೀಲ, ಕರ್ನಾಟಕ ಕಾನೂನು ಮತ್ತು ಸಂಸತ್ತೀಯ ಸುಧಾರಣಾ ಸಂಸ್ಥೆ ಹಾಗೂ ಮಾಜಿ ಕುಲಪತಿಗಳು, ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ, ಗೌರವಾನ್ವಿತ ಕುಲಾಧಿಪತಿ, ಐಸಿಎಫ್ಎಐ ಕಾನೂನು ವಿಶ್ವವಿದ್ಯಾಲಯ, ಮಿಜೋರಂ ಮತ್ತು ಮಾಜಿ ಕುಲಪತಿ, ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಶ್ರೀ ವೈ.ಆರ್. ಹರಗೋಪಾಲ್ ರೆಡ್ಡಿಯವರು, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರ್ ಮತ್ತು ಸುಪ್ರೀಂ ಕೋರ್ಟ್ ನ ದಾಖಲಾತಿ ನ್ಯಾಯವಾದಿಯಾದ ಶ್ರೀ ಗೌತಮ್ ದಾಸ್ ಮತ್ತಿತರು ಉಪಸ್ಥಿತರಿದ್ದರು.
ಇನ್ನು ವಿಶೇಷ ಆಹ್ವಾನಿತರಾಗಿ ಪ್ರೊ. ಡಾ. ಸಂದೀಪ್ ದೇಸಾಯಿ ರವರು ಡೀನ್ ಹಾಗೂ ಅಮಿಟಿ ಕಾನೂನು ಕಾಲೇಜು, ಹಾಗೂ ಶ್ರೀ ಇ. ಸುಹೈಲ್ ಅಹ್ಮದ್, ಹಿರಿಯ ಸಹಭಾಗಿ ಮತ್ತು ಟ್ರೈಲ್ ಬೇಸ್, ಬೆಂಗಳೂರು ಇದ್ದರು. ಅತಿಥಿಗಳನ್ನು ಕುಲಪತಿಗಳಾದ ಪ್ರೊ. ಡಾ. ಮುದ್ದು ವಿನಯ್ ರವರು ಮತ್ತು ವಿಭಾಗದ ಮುಖ್ಯಸ್ಥೆ ಡಾ. ರಾಜಶ್ರೀ ಪಾಟೀಲ, ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು.

