ಸುರಪುರ:ಕಳೆದ ಅನೇಕ ವರ್ಷಗಳಿಂದ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ತಾಲ್ಲೂಕ ಸಂಯೋಜಕರಾಗಿ ಶಿಕ್ಷಣ ರಂಗದ ಬೆಳವಣಿಗೆಗೆ ಸೇವೆ ಸಲ್ಲಿಸಿ ಕಲಬುರ್ಗಿಗೆ ವರ್ಗಾವಣೆಗೊಂಡ ಅನ್ವರ್ ಜಮಾದಾರ್ ಅವರಿಗೆ ನಗರದ ಎಪಿಡಿ ಸಂಸ್ಥೆ ವತಿಯಿಂದ ವರ್ಗಾವಣೆಗೊಂಡ ಪ್ರಯುಕ್ತ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅನ್ವರ್ ಜಮಾದಾರ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸುರಪುರ ಮತ್ತು ಹುಣಸಿಗಿ ತಾಲೂಕಿನಲ್ಲಿ ಎಪಿಡಿ ಸಂಸ್ಥೆ ವತಿಯಿಂದ ವಿಶೇಷ ಚೇತನರ ಮಕ್ಕಳ ಬಗ್ಗೆ ಇರುವ ಕಾಳಜಿ ಅವರಿಗೆ ಅವಶ್ಯಕತೆ ಸಾಮಗ್ರಿಗಳನ್ನು ತುಂಬಾ ಕಾಳಜಿಯಿಂದ ಕೊಡುತ್ತಿರುವುದು ಅತ್ಯಂತ ಶ್ಲಾಘನೀಯವಾದದ್ದು. ಅವರ ತಂಡದೊಂದಿಗಿನ ನನ್ನ ಪಯಣ ಸದಾ ನೆನಪಿನ ಬುತ್ತಿಯಲ್ಲಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಎಪಿಡಿ ಸಂಸ್ಥೆಯ ಜಿಲ್ಲಾ ಸಂಯೋಜಕ ಸಂಪ್ರೀತಾ ಮಾತನಾಡುತ್ತಾ, ಎಪಿಡಿ ಸಂಸ್ಥೆಯ ಸುರಪುರದಲ್ಲಿ ಆರಂಭದಿಂದಲೂ ಇಲ್ಲಿವರೆಗೆ ನಮಗೆ ಅನ್ವರ್ ಜಮಾದಾರ್ ಅವರು ಪ್ರತಿಯೊಂದು ಕಾರ್ಯಗಳಿಗೆ ಬೆನ್ನೆಲುಬಾಗಿದ್ದರು, ನಮ್ಮ ಸಂಸ್ಥೆ ವತಿಯಿಂದ ಯಾವುದೇ ಜವಾಬ್ದಾರಿ ನೀಡಿದರು ಪ್ರೀತಿಯಿಂದ ಅದನ್ನು ತುಂಬಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು, ಅದರಲ್ಲೂ ವಿಶೇಷ ಚೇತನ ಮಕ್ಕಳಿಗೆ ಅವರಿಲ್ಲಿರುವ ಕಾಳಜಿ ಅಪಾರವಾದದ್ದು ಎಂದರು.
ತಾಲೂಕ್ ಸಂಯೋಜಕ ಗಿರೀಶ್ ಕುಲಕರ್ಣಿ ಮಾತನಾಡಿ, ಅನ್ವರ್ ಜಮಾದಾರ ಅವರೊಂದಿಗೆ ಕಾರ್ಯ ಮಾಡುವಾಗ ನಾನು ಗಮನಿಸಿದ ಪ್ರಮುಖ ಅಂಶಗಳೆಂದರೆ ಅತ್ಯಂತ ಸರಳ ವ್ಯಕ್ತಿ ,ಸ್ನೇಹಪರತೆ,ಸಾಮಾಜಿಕ ಕಾಳಜಿ ನಮ್ಮೆಲ್ಲರಿಗೂ ದಾರಿ ದೀಪವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮಹಾಂತೇಶ್ ಲಕ್ಷ್ಮಿ ಹಾಗೂ ಎಪಿಡಿ ಸಂಸ್ಥೆಯ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

