ಸತ್ಯಕಾಮ ವಾರ್ತೆ ಯಾದಗಿರಿ :
ವಿಶೇಷ ಚೇತನರಲ್ಲಿರುವ ಆತ್ಮಶಕ್ತಿ ಅತ್ಯಂತ ಮಹತ್ವದ್ದಾಗಿದ್ದು, ಅದರಿಂದಲೇ ಅವರು ಸಮಾಜದಲ್ಲಿ ಅತ್ಯಂತ ಗೌರವದಿಂದ ಬದುಕುವಂತಾಗಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಗುರುಮಠಕಲ್ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆರ್‌ಪಿಡಿ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಗ್ರಾಮೀಣ ಹಾಗೂ ನಗರ ಅಂಗವಿಕಲರ ಪುನರ್ವಸ್ಥಿತಿ ಕಾರ್ಯಕ್ರಮದ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ ಅರಿವು ವಿಕಲಚೇತನ ಹಾಕುತ್ತಾಯಿ ಸಮಾವೇಶ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ಅವರಲ್ಲಿ ಆತ್ಮಸ್ಥೆರ್ಯ ತುಂಬುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಅಂಗವೈಕಲ್ಯ ಶಾಪವಲ್ಲ. ಅದು ಆಕಸ್ಮಿಕವಾಗಿ ಹುಟ್ಟಿನಿಂದ ಬರುತ್ತದೆ. ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ವಿಶ್ವಾಸ ಹಾಗೂ ಅತ್ಮಸ್ಥೆöÊರ್ಯ ತುಂಬಿ ಇತರರಂತೆ ಬದುಕಲು ಅವಕಾಶ ನೀಡಬೇಕು ಎಂದರು.
ಗುರುಮಠಕಲ್ ಖಾಸಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಜಿಗಳು, ಸಾನ್ನಿಧ್ಯವಹಿಸಿದ್ದರು. ಆರ್.ಪಿ.ಡಿ ಕಾಯ್ದೆ ಕುರಿತು ನಾಗಪ್ಪಜಿ ಅವಟಿ ಉಪನ್ಯಾಸ ನೀಡಿದರು.
ಎಲೇರಿಯ ವಿಕಲಚೇತನ ಸಂಘಕ್ಕೆ ೧೫೦೦೦೦ ಸಾವಿರ ಚೆಕ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗುರುಮಠಕಲ್ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ್ ನಜರಾಪುರ್ ಉಪಾಧ್ಯಕ್ಷರಾದ ರೇಣುಕಾ ಪಡಿಗೆ, ಭಾರತಿ ದಂಡೋತಿ ತಹಸೀಲ್ದಾರ ಶಾಂತಗೌಡ ಬಿರಾದಾರ್, ಇಒ ಅಮರೇಶ್ ಪಾಟೀಲ್, ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಹನುಮಂತರೆಡ್ಡಿ ಎಪಿಡಿ ಸಂಸ್ಥೆ ಯಾದಗಿರಿ ವ್ಯವಸ್ಥಾಪಕರಾದ ಸಂಪ್ರಿತ ದೇವಪುತ್ರ ಸಂತೋಷ್ ನಿರೇಟಿ ತಾಲೂಕ ನೌಕರ ಸಂಘದ ಅಧ್ಯಕ್ಷರು ಗುರುಮಟ್ಕಲ್, ಉಮಾ ನಾಯಕ್ ಅಧ್ಯಕ್ಷರು ಆರ್ ಪಿ ಡಿ ಟಾಸ್ಕ್ ಪೋರ್ಸ್ ಯಾದಗಿರಿ ಸೇರಿದಂತೆ ಇತರರಿದ್ದರು.

