ಸತ್ಯಕಾಮ ವಾರ್ತೆ ಯಾದಗಿರಿ:
ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ ಜನತೆಗೆ ಉತ್ತಮ ಸೇವೆ ಒದಗಿಸಬೇಕಿದೆ. ಆಸ್ಪತ್ರೆಯ ಸುತ್ತಲಿನ ಪರಿಸರದ ಸ್ವಚ್ಛತೆಯ ಕಡೆಗೆ ಪ್ರತಿಯೊಬ್ಬರೂ ಗಮನಹರಿಸಬೇಕು, ಆಸ್ಪತ್ರೆಯ ಬಳಿ ನಾಗರೀಕರು ಕೂಡ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸ್ವಚ್ಚತೆ ಕುರಿತು ಆಸ್ಪತ್ರೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಎಲ್ಲೆಂದರಲ್ಲಿ ಮನೆಯಿಂದ ತಂದ ಊಟ ಮಾಡಿ ಅಲ್ಲೇ ಉಳಿದ ಅನ್ನವನ್ನು ಬಿಸಾಡುವುದು, ಬಿಡಿ, ಸಿಗರೇಟ್ ಸೇದುವುದು, ತಂಬಾಕು ಗುಟಕಾ ತಿಂದು ಉಗುಳುವುದು ಯಾರೂ ಮಾಡಬಾರದು ನಮ್ಮ ಆಸ್ಪತ್ರೆ ಸ್ವಚ್ಚತೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲದೆ ಎಂದು ಹೇಳಿದರು.
ಆಸ್ಪತ್ರೆ ಆವರಣದಲ್ಲಿ ಕಸ ಇದ್ದರೆ ಪ್ರತಿಯೊಬ್ಬರೂ ಮೂಗು ಮುಚ್ಚಿಕೊಂಡೇ ತಿರುಗುವಂತಹ ಪರಿಸ್ಥಿತಿ ಬರುತ್ತದೆ. ನಾಗರೀಕರ ನಿಷ್ಕಾಳಜಿಯೂ ಕೂಡ ಪರಿಸರ ಸ್ವಚ್ಚತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿಸರ ಅಭಿಯಂತ ಪ್ರಶಾಂತ, ಡಾ.ಅಂಗಡಿ, ಡಾ.ರಿಜ್ವಾನಾ, ಎಸ್.ಎ.ಶಿವಪುತ್ರ, ಮಾಜಿ ಸದಸ್ಯ ಅಬ್ದುಲ್ ಖರೀಂ ಸೇರಿದಂತೆ ಇತರರಿದ್ದರು.
ಸರಕಾರಿ ಆಸ್ಪತ್ರೆಯ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಕಸದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ವಿ ಆಗ್ತೇವೆ. ಸಿಬ್ಬಂದಿಗೆ ಕಸವನ್ನು ಸರಿಯಾಗಿ ವಿಂಗಡಿಸುವ ಮಹತ್ವ ಹಾಗೂ ಪರಿಸರದ ಮೇಲೆ ಅದರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಕು.ಲಲಿತಾ ಮೌಲಾಲಿ ಅನಪೂರ, ನಗರಸಭೆ ಅಧ್ಯಕ್ಷರು, ಯಾದಗಿರಿ

