ಸತ್ಯಕಾಮ ವಾರ್ತೆ ಲಿಂಗಸುಗೂರು:
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಲಿಂಗಸುಗೂರಿನ ಐತಿಹಾಸಿಕ ಕೆರೆ ಸಂಪೂರ್ಣ ನಿರ್ಲಕ್ಷೆಯಿಂದ ದುರಾವಸ್ಥೆಗೆ ತುತ್ತಾಗಿದ್ದು, ಸುತ್ತಮುತ್ತ ಬೆಳೆದಿರುವ ಮುಳ್ಳು ಗಿಡಗಳು ಹಾಗೂ ಹೂಳು ನಾಶ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕವು ಪುರಸಭೆ ಅಧ್ಯಕ್ಷರಿಗೆ ಮನವಿಯನ್ನು ನೀಡಿದರು.
ಕರವೇ ತಾಲೂಕು ಘಟಕದ ಅಧ್ಯಕ್ಷರಾದ ಆಂಜನೇಯ.ಹೆಚ್.ಭಂಡಾರಿ “ಈ ಐತಿಹಾಸಿಕ ಕೆರೆಯ ನೀರನ್ನು ಬ್ರಿಟಿಷರ ಕಾಲದಲ್ಲಿ ಕೂಡ ಕುಡಿಯಲು
ಬಳಸಲಾಗುತ್ತಿತ್ತು. ಆದರೆ ಇಂದು ಜಾನುವಾರುಗಳು ಕೂಡ ನೀರು ಕುಡಿಯಲು ಹಿಂದೇಟು ಹಾಕುವಂತಾಗಿದೆ. ಸುತ್ತಲಿನ ಭೂಮಿ ಕೂಡ ಒತ್ತುವರಿಯಿಂದ ಕೆರೆಯ ಗಾತ್ರ ಹದಗೆಟ್ಟಿದೆ.ಅಲ್ಲದೆ, ಕೆರೆಯ ದಡದಲ್ಲಿರುವ ಲಕ್ಷಾಂತರ ವೆಚ್ಚದ ಪಟ್ಟಣದ ಏಕೈಕ ಉದ್ಯಾನವನ ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿದೆ. ಕಲ್ಲಿನ ಬೆಂಚುಗಳು ಮುರಿದಿರುವುದು, ಕಸದ ಗುಂಡಿಯಾಗಿ ಉದ್ಯಾನವು ಮಾರ್ಪಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಪುರಸಭೆಗೆ ಮನವಿ ಸಲ್ಲಿಸಿ, ಕೆರೆ ಸುತ್ತಲಿನ ಗಿಡಗಂಟಿ ತೆರವುಗೊಳಿಸಿ, ಹೂಳು ಸ್ವಚ್ಛಗೊಳಿಸಿ, ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಮತ್ತು ಉದ್ಯಾನವನದ ನಿರ್ವಹಣೆಗಾಗಿ ಪ್ರತ್ಯೇಕ ಅನುದಾನ ನೀಡಬೇಕು ಎಂದು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಕರವೇ ಕಾರ್ಯ ಕರ್ತರು ಇದ್ದರು.
- Advertisement -

