ನೀರು ಬಳಕೆ ಪ್ರಮಾಣ ಪತ್ರ ಪಡೆಯಲು ರೈತರು ನಿತ್ಯ ಅಲೆದಾಟ
ವರದಿ: ಕುದಾನ್ ಸಾಬ್
ಸತ್ಯಕಾಮ ವಾರ್ತೆ ಯಾದಗಿರಿ:
ಹೌದು.. ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರದಲ್ಲಿರುವ ಕೆಬಿಜೆಎನ್ಎಲ್ ಪರಿಸ್ಥಿತಿವಿದು. ನಾರಾಯಣಪುರ ಆಣೆಕಟ್ಟು ಹಿನ್ನೀರು ಬಳಕೆ ಮಾಡಲು ಈ ಕಚೇರಿಯು 5 ತಾಲೂಕಿನ ರೈತರಿಗೆ ಪ್ರಮಾಣ ಪತ್ರವನ್ನು ನೀಡುತ್ತದೆ. ಪ್ರಮಾಣ ಪತ್ರಕ್ಕೆ ರೈತರಿಂದ ಕೆಲವು ಅಧಿಕಾರಿಗಳು ಹಣ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಹಣ ನೀಡದೇ ಇರುವ ರೈತರನ್ನು ಕುಂಟುನೆಪ ಹೇಳಿ ಅಲೆದಾಡಿಸಲಾಗುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿವೆ.
- Advertisement -
ನಾರಾಯಣಪೂರ ಕೆಬಿಜೆಎನ್ಎಲ್ ನಂ.3 ಕಚೇರಿ ಕಾರ್ಯನಿರ್ವಾಹಕ ಅಭಿಯಂತರರು ಹೆಚ್.ಬಿ ಕೊಣ್ಣೂರ ಅವರಿಗೆ ಈ ಬಗ್ಗೆ ರೈತರು ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಬಳಕೆ ಪ್ರಮಾಣ ಪತ್ರ ನೀಡಲು ನಮಗೆ ಬರುವುದಿಲ್ಲ ಮುಖ್ಯ ಇಂಜಿನಿಯರ್ ಮಂಜುನಾಥ್ ಆರ್ ಅವರಿಗೆ ಬರುತ್ತದೆ ಎಂದು ತಾಳ್ಮೆಯಿಂದ ಜಾರಿಕೊಳ್ಳುವ ಕಾರ್ಯವನ್ನು ಈ ಅಧಿಕಾರಿ ರೂಢಿಸಿಕೊಂಡಿದ್ದಾರೆ.
ಪ್ರಮಾಣ ಪತ್ರ ಕುರಿತು ನಾರಾಯಣಪುರ ಕೆಬಿಜೆಎನ್ಎಲ್ ಮುಖ್ಯ ಇಂಜಿನಿಯರ್ ಮಂಜುನಾಥ್ ಆರ್ ಅವರಿಗೆ ಈ ಕುರಿತು ಗಮನಕ್ಕೆ ತಂದ ವೇಳೆಯಲ್ಲಿ, ಕೆಳ ದರ್ಜೆಯ ಅಧಿಕಾರಿಗಳು ರೈತರಿಗೆ ಸರಿಯಾದ ಸಮಯದಲ್ಲಿ ನೀರು ಬಳಕೆ ಪ್ರಮಾಣ ಪತ್ರ ನೀಡದೇ ರೈತರನ್ನು ಪರದಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದು ರೈತರಿಗೆ ಮನದಟ್ಟಾಯಿತು.
ಇನ್ನು ರೈತರಿಗೆ ಅಲೆದಾಡಿಸುವ ಕೆಲಸವನ್ನು ಇಲ್ಲಿನ ಅಧಿಕಾರಿಗಳು ಮಾಡುತ್ತಿದ್ದು, ರೈತರ ಕೆಲಸ ಮಾಡಿಕೊಡುವಂತೆ ಮುಖ್ಯ ಇಂಜಿನಿಯರ್ ಹೇಳಿದರು ಕೂಡ ಸಿಬ್ಬಂದಿ ಶಿವನಗೌಡ ಅವರು ಪತ್ರ ನೀಡದೆ ರೈತರನ್ನು ಅಲೆದಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೇಲಾಧಿಕಾರಿಗಳು ಶಿವನಗೌಡ ಅವರಿಗೆ ರೈತರಿಗೆ ಪ್ರಮಾಣ ನೀಡಲು ತಾಕೀತು ಮಾಡಿದರು ಪ್ರಮಾಣ ಪತ್ರ ನೀಡದ ತಮ್ಮ ಮೊಂಡತನವನ್ನು ಮತ್ತೆ ಮುಂದುವರೆಸಿದ್ದಾರೆ.
ಒಟ್ಟಾರೆಯಾಗಿ ನಾರಾಯಣಪುರ ಆಣೆಕಟ್ಟು ಕೆಬಿಜೆಎನ್ಎಲ್ ಕಚೇರಿಯಲ್ಲಿ ನೀರು ಬಳಕೆ ಪ್ರಮಾಣ ಪತ್ರ ಪಡೆಯಬೇಕೆಂದರೆ ಕನಿಷ್ಠ ಐದಕ್ಕಿಂತ ಹೆಚ್ಚು ಬಾರಿ ಕಚೇರಿಗೆ ಅಲೆದಾಡಬೇಕು. ಇಲ್ಲದಿದ್ದರೆ ರೈತರಿಗೆ ಪ್ರಮಾಣ ಪತ್ರ ಸಿಗುವುದೇ ಅಪರೂಪ ಎನ್ನುವಂತೆ ರೈತರ ಆಶಾಭಾವವಾಗಿದೆ. ಈ ಕೂಡಲೇ ಇಂತಹ ಅಧಿಕಾರಿಗಳ ಬಗ್ಗೆ ಮುಖ್ಯ ಇಂಜಿನಿಯರ್ ಮಂಜುನಾಥ್ ಆರ್ ಅವರು ಸೂಕ್ತ ಕ್ರಮಕೈಗೊಂಡು ರೈತರಿಗೆ ಸುಲಭ ಹಾಗೂ ವಿಳಂಬ ನೀತಿ ಅನುಸರಿಸದೇ ಸರಿಯಾದ ವೇಳೆಯಲ್ಲಿ ಪ್ರಮಾಣ ಪತ್ರ ರೈತರಿಗೆ ಸಿಗುವಂತಾಗಲಿ ಎನ್ನುವುದೇ ಸತ್ಯಕಾಮ ದಿನಪತ್ರಿಕೆ ಆಶಯ.

