ಸತ್ಯಕಾಮ ವಾರ್ತೆ ಯಾದಗಿರಿ:
ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಹೋಗುವ ಶಾಸ್ತ್ರಿ ಸರ್ಕಲ್ ಪಕ್ಕದ ರಸ್ತೆ ಹಾಗೂ ಬಾಲಾಜಿ ದೇವಸ್ಥಾನ ಹಿಂಭಾಗದಲ್ಲಿರುವ ರಸ್ತೆಯ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ರಸ್ತೆ ಮೇಲಿನ ನೀರು ಹಾಗೂ ಚರಂಡಿ ನೀರನ್ನು ಸರಾಗವಾಗಿ ಹರಿಯುವ ಹಾಗೂ ನಿಲ್ಲದಂತೆಯೇ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಕಾಮಗಾರಿ ಮಾಡಿಸಿದ್ದಾರೆ.
ಚರಂಡಿ ಸ್ವಚ್ಚಗೊಳಿಸಿ ಅಗತ್ಯ ಕಾಮಗಾರಿ ಕೈಗೊಂಡು ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಮುಂದೇ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ, ರೈಲ್ವೆ ಸ್ಟೇಷನ್ ಹೋಗುವ ರಸ್ತೆಯಲ್ಲಿ ಸ್ವಲ್ಪ ಮಳೆ ಬಂದರೂ ನೀರು ನಿಂತು ಸಂಚಾರಕ್ಕೆ ಅನಾನೂಕುಲವಾಗುತ್ತಿತ್ತು.ಇದನ್ನು ಮನಗಂಡ ಅಧ್ಯಕ್ಷೆ ಅನಪೂರ ಅವರು, ಕಾಂಕ್ರೀಟ್ ಹಾಕುವ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ.
ಸುಮಾರು ದಿನಗಳಿಂದ ಮಳೆ ಬರುತ್ತಲೇ ರಸ್ತೆಯ ಮೇಲೆ ನೀರು ನಿಂತು ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುವುದನ್ನು ಖುದ್ದಾಗಿ ಗಮನಿಸಿದ ಅಧ್ಯಕ್ಷರು, ರಸ್ತೆ ದುರಸ್ತಿ ಹಾಗೂ ಚರಂಡಿ ನಿರ್ಮಾಣ ಮಾಡುವ ಮೂಲಕ ಸುಲಭ ಸಂಚಾರಕ್ಕೆ ಅನುಕೂಲಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಭಾರಿ ಕಿರಿಯ ಅಭಿಯಂತರರಾದ ಅಂಬಿಕೇಶ್ವರ ಹೊನಕೇರಿ ಸೇರಿದಂತೆಯೇ ಇತರರಿದ್ದರು.

