ಸತ್ಯಕಾಮ ವಾರ್ತೆ ಲಿಂಗಸುಗೂರು:
ಲಿಂಗಸುಗೂರು ತಾಲ್ಲೂಕಿನ ನಮ್ಮಕರ್ನಾಟಕ ಸೇನೆಯ ವತಿಯಿಂದ ತಾಲ್ಲೂಕು ಸಹಾಯಕ ಆಯುಕ್ತರಿಗೆ ಮಿನಿ ವಿಧಾನಸೌಧ ಸ್ಥಳಾಂತರ ಮಾಡುವ ಕುರಿತು ಮನವಿ ಸಲ್ಲಿಸಲಾಯಿತು.
ಮನವಿ ವೇಳೆ ತಾಲೂಕು ಅಧ್ಯಕ್ಷ ಶಿವರಾಜ ನಾಯಕ ಮಾತನಾಡಿ
ಪ್ರಸ್ತುತ ಮಿನಿ ವಿಧಾನಸೌಧ ಪಟ್ಟಣದ ಹೊರವಲಯದಲ್ಲಿದ್ದು, ಗ್ರಾಮೀಣ ಭಾಗದ ಬಡ ಜನತೆ ಜಾತಿ, ಆದಾಯ ಹಾಗೂ ಇತರೆ ದಾಖಲೆಗಳಿಗಾಗಿ ತಹಶೀಲ್ದಾರ ಕಚೇರಿಗೆ ಹೋಗುವಾಗ ಬಹುಮಾನವೊಂದು ಕಷ್ಟವನ್ನು ಎದುರಿಸುತ್ತಿದ್ದಾರೆ.
ಒಂದು ದಾಖಲೆಯ ಕೇವಲ ಪ್ರತಿ ಪಡೆಯಲು ಸಹ ನಾಗರಿಕರು ಪಟ್ಟಣಕ್ಕೆ ಬಂದು ಮತ್ತೆ ವಾಪಸು ಹೋಗಬೇಕಾಗಿ ಬರುವುದರಿಂದ ಸುಮಾರು ರೂ.100 ರಿಂದ ರೂ 200 ವರೆಗೆ ಖರ್ಚಾಗುತ್ತಿದೆ. ಅಲ್ಲದೇ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲಭೂತ ಸೌಲಭ್ಯಗಳ ಕೊರತೆಯೂ ಉಂಟಾಗಿದೆ ಎಂದರು.
ಮಹಿಳೆಯರಿಗೆ ಈ ಸ್ಥಳದ ಅಗ್ರಸ್ಥಾನ ಹಾಗೂ ಎರಡು ವಿಭಿನ್ನ ಪ್ರದೇಶಗಳಲ್ಲಿ ವಿಭಾಗವಾಗಿ ಇರುವ ವ್ಯವಸ್ಥೆ ಭದ್ರತೆಯ ಅಭಾವದ ಭಯವನ್ನು ಉಂಟುಮಾಡಿದೆ. ಇದಲ್ಲದೆ, ಹಲವು ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಬಾಡಿಗೆಯಾದರೂ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಹಣ ವ್ಯರ್ಥವಾಗುತ್ತಿದೆ ಸಹಾಯಕ ಆಯುಕ್ತರ ಕಚೇರಿ ಪಕ್ಕದಲ್ಲಿ ಹಾಗೂ ತಾಲೂಕ ಪಂಚಾಯತಿ ಕಟ್ಟಡದಲ್ಲಿ ಸಾಕಷ್ಟು ಕೊಠಡಿಗಳು ಖಾಲಿ ಇದ್ದು, ಈ ಕಟ್ಟಡಗಳಲ್ಲಿ ಮಿನಿ ವಿಧಾನಸೌಧವನ್ನು ಸ್ಥಳಾಂತರ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವನ್ನು ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
- Advertisement -
ಈ ಸಂದರ್ಭದಲ್ಲಿ ರಾಜು ಪತ್ತಾರ, ಯಲ್ಲಪ್ಪ ಬೋವಿ, ಬಸವಲಿಂಗ ಯಲಗಲದಿನ್ನಿ, ಗುರುನಾಥ ದ್ಯಾಪೂರ, ಶಿವಲಿಂಗ, ಕೃಷ್ಣ ಬೋವಿ, ಕಂಠೆಪ್ಪ, ಮೌನೇಶ ನಾಯಕ ದವಲಗೌಡ, ನಾಗರಾಜ ಕರಡಕಲ್, ಮಾರುತಿ, ಮಹೇಂದ್ರ ಕುಮಾರ, ವೀರೇಶ ಐದನಾಳ, ಶರಣಬಸವನಗೌಡ, ಶಂಭುಗೌಡ, ವೀವೇಕಾನಂದ ನಾಯಕ, ವೆಂಕಟೇಶ ಗುತ್ತೇದಾರ ಸೇರಿದಂತೆ ಇನ್ನಿತರರು ಇದ್ದರು.

