ಸತ್ಯಕಾಮ ವಾರ್ತೆ ಸುರಪುರ:
ಇಲ್ಲಿಯ ನ್ಯಾಯಾಲಯದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಲೋಕದಾಲತ್ ನಲ್ಲಿ ಬ್ಯಾಂಕ್ ವ್ಯಾಜ್ಯಗಳು ಸೇರಿ 2478 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.
ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಅವರು ಪ್ರಕರಣ ಒಂದರ ಇತ್ಯರ್ಥದ ಸಂದರ್ಭದಲ್ಲಿ ಭಾಗವಹಿಸಿದ್ದರು.ಅಲ್ಲದೆ ಜಿಲ್ಲಾ ಎರಡನೇ ಹೆಚ್ಚವರಿ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ,ಸುರಪುರ ಸೀನಿಯರ್ ಸಿವಿಲ್ ನ್ಯಾಯಾಧೀಶರಾದ ಫಕಿರವ್ವ ಕೆಳಗೇರಿ,ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಭಾಗವಹಿಸಿದ್ದರು.
ಲೋಕ ಅದಾಲತ್‌ನಲ್ಲಿ ಒಟ್ಟು 4229 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.ಅವುಗಳಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 7 ಪ್ರಕರಣಗಳು ತೆಗೆದುಕೊಂಡು 4 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಇವುಗಳಲ್ಲಿ 1 ಲಕ್ಷ 50 ಸಾವಿರ ಪರಿಹಾರವನ್ನು ಕೊಡಿಸಲಾಗಿದೆ.ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 1444 ಪ್ರಕರಣಗಳು ತೆಗೆದುಕೊಂಡು 675 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. 18 ಲಕ್ಷ 46 ಸಾವಿರ 725 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಸಿವಿಲ್ ನ್ಯಾಯಾಲಯದಲ್ಲಿ 1437 ಪ್ರಕರಣಗಳನ್ನು ತೆಗೆದುಕೊಂಡು 928 ಪ್ರಕರಣಗಳನ್ನು ಇತ್ಯರ್ಥಗೊಳಿಸಿ,3 ಲಕ್ಷ 11 ಸಾವಿರ 824 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಹೆಚ್ಚುವರಿ ನ್ಯಾಯಾಲಯದಲ್ಲಿ 1341 ಪ್ರಕರಣಗಳು ಕೈಗೆತ್ತಿಕೊಳ್ಳಲಾಗಿತ್ತು, ಇವುಗಳಲ್ಲಿ 865 ಪ್ರಕರಣಗಳು ಇತ್ಯರ್ಥಗೊಳಿಸಿ 7 ಲಕ್ಷ 72 ಸಾವಿರ 550 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಅಲ್ಲದೆ ಬ್ಯಾಂಕ್ ವ್ಯವಹಾರದ 6 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 19 ಲಕ್ಷ 96 ಸಾವಿರ ರೂಪಾಯಿಗಳ ತುಂಬಿಸಲಾಗಿದೆ.
ಒಟ್ಟು 4229 ಪ್ರಕರಣಗಳಲ್ಲಿ 2472 ಪ್ರಕರಣಗಳು ಇತ್ಯರ್ಥಗೊಂಡು 2769275 ರೂಪಾಯಿಗಳ ಪರಿಹಾರವನ್ನು ಕೊಡಿಸಲಾಗಿದೆ.ಅಲ್ಲದೆ 6 ಬ್ಯಾಂಕ್ ವ್ಯವಹಾರದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.
- Advertisement -
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಅವರು,ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿಯವರು,ಹಿರಿಯ ಸಿವಿಲ್ ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿಯವರು,ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಉಪಸ್ಥಿತರಿದ್ದರು. ವಕೀಲರಾದ ಹಿರಿಯ ನ್ಯಾಯವಾದಿ ನಿಂಗಣ್ಣ ಚಿಂಚೋಡಿ,ವಿನೋದ ಜೇವರ್ಗಿ,ಎಮ್.ಎಸ್.ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಲೋಕ ಅದಾಲತ್‌ನಲ್ಲಿ ಪತಿ ಪತ್ನಿ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪ್ರಕರಣವೊಂದರಲ್ಲಿ ಪತ್ನಿಯೇ ಪತಿಗೆ ಒಂದಾಗಿ ಜೀವನ ಸಾಗಿಸುವ ಕುರಿತು ನ್ಯಾಯಾಧೀಶರ ಮುಂದೆ ಪತಿಗೆ ಮನವೊಲಿಸಿ ವಿಚ್ಛೇದನವನ್ನು ಕೈಬಿಟ್ಟು ನ್ಯಾಯಾಲಯದಲ್ಲಿ ಒಂದಾಗಿ ಹಾರ ಬದಲಾಯಿಸಿಕೊಂಡು ಎಲ್ಲ ನ್ಯಾಯಾಧೀಶರು ಹಾಗೂ ವಕೀಲರಿಗೆ ಸಿಹಿ ಹಂಚಿ ಒಂದಾಗಿ ನಡೆದ ಘಟನೆ ನಡೆಯಿತು.

