- ಶಾಸಕ ಕಂದಕೂರ ಆದೇಶದ ಮೆರೆಗೆ ವಸತಿ ನಿಲಯಗಳಿಗೆ ಅಧಿಕಾರಿಗಳು ಭೇಟಿ
- ವಸತಿ ನಿಲಯಗಳ ವ್ಯವಸ್ಥೆ ಹಾಗೂ ಸ್ವಚ್ಚತೆ ಪರಿಶೀಲನೆ; ಸಿಇಓ ಲವೀಶ
ಸತ್ಯಕಾಮ ವಾರ್ತೆ ಗುರುಮಠಕಲ್:
ಪಟ್ಟಣದ ಪದವಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವಿಶ್ ಓರ್ಡಿಯಾ ಗುರುವಾರ ಭೇಟಿ ನೀಡಿ ವಸತಿ ನಿಲಯಗಳ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು.
ಪಟ್ಟಣದ ಪದವಿ ಕಾಲೆಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಬುಧವಾರ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರು ಅವರಿಗೆ ವಿದ್ಯಾರ್ಥಿಗಳು ವಸತಿ ನಿಲ್ಯಗಳಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತಂದಾಗ, ಜಿಲ್ಲಾ ಮುಖ್ಯಾಧಿಕಾರಿಗಳಿಗೆ ಮಾತನಾಡಿ ವೀಕ್ಷಿಸಲು ತಿಳಿಸಿದ ಪ್ರಯುಕ್ತ ಅಧಿಕಾರಿಗಳು ಇಂದು ದಿಡೀರ ಭೇಟಿ ನೀಡಿ ಪರಿಶೀಲಿಸಿದರು.
ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಡಾ. ಬಿ. ಅರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಅಡುಗೆ ಕೋಣೆ, ಶೌಚಾಲಯಗಳು, ವಿದ್ಯಾರ್ಥಿಗಳ ಕೊಠಡಿಗಳು, ಗ್ರಂಥಾಲಯಗಳನ್ನು ಪರಿಶೀಲಿಸಿದ ನಂತರ ವಿದ್ಯಾರ್ಥಿಗಳ ಜೊತೆಗೆ ಕೂಲಂಕುಷವಾಗಿ ಸಮಾಲೊಚನೆ ನಡೆಸಿ ಸಮಸ್ಯೆ ಆಲಿಸಿದರು. ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ನೀಡಬೇಕು, ವಸತಿ ನಿಲಯದಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು, ಮಕ್ಕಳ ವಿಧ್ಯಾಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಾಣಮಾಡಿ ಎಂದು ವಸತಿ ನಿಲಯ ಮೇಲ್ವೀಚಾರಕರಿಗೆ ಸೂಚಿಸಿದರು.
- Advertisement -
ಆಹಾರದಲ್ಲಿನ ರುಚಿಯ ಕೊರತೆ, ನೀರಿನ ಸಮಸ್ಯೆ, ಸೋಲಾರ ದೀಪದ ವ್ಯವಸ್ಥೆ, ವಿಧ್ಯಾರ್ಥಿಗಳಿಗೆ ವ್ಯಾಸಂಗ ಮಾಡುವ ಕೊಠಡಿ ಹಾಗೂ ಬಿಸಿನೀರಿನ ಸಮಸ್ಯೆ ಕುರಿತು ವಿಧ್ಯಾರ್ಥಿಗಳು ಬಗೆಹರಿಸುವಂತೆ ಹೇಳಿಕೊಂಡರು.
ವಿಧ್ಯಾರ್ಥಿಗಳಿಗೆ ಊಟದ ಮೇಜು, ಸ್ಟಡಿ ಚೇರ್, ಸೋಲಾರ್ ಪ್ಯಾನೆಲ್, ಶೌಚಾಲಯ ದುರಸ್ಥಿಗೊಳಿಸುವಂತೆ ಮತ್ತುಹಾಸ್ಟೆಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಗಂಟಿ ಬೆಳೆದಿದ್ದು ಸ್ವಚ್ಛವಾಗಿಡಲು ಪುರಸಭೆ ಮುಖ್ಯಾಧಿಕಾರಿಗೆ ತಿಳಿಸಿದರು. ಶಾಲೆಯ ಆವರಣದಲ್ಲಿ ಮಧ್ಯಪಾನದ ಬಾಟಲ್ ಹಾಗೂ ಪ್ಯಾಕೇಟ ಕಂಡು ರಾತ್ರಿವೇಳೆ ಪೋಲಿಸ್ ಗಸ್ತು ವ್ಯವಸ್ಥೆ ಮಾಡಿಸುತ್ತೇನೆ ಹಾಗೂ ಶಾಶ್ವತ ಪರಿಹಾರವಾಗಿ ಕಾಂಪೌAಡ್ ಗೋಡೆ ನಿರ್ಮಾಣ ಮಾಡಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ಅಂಬರೀಷ ಪಾಟೀಲ, ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಪುರಸಭೆ ಮುಖ್ಯಾಧಿಕಾರಿ ಭಾರತಿ, ಹಿಂದುಳಿದ ವರ್ಗಗಳ ಉಪ ನಿರ್ದೇಶಕ ಸದಾಶಿವ ನಾರಾಯಣಕರ, ತಾಲೂಕ ಹಿಂದುಳಿದ ವರ್ಗಗಳ ಅಧಿಕಾರಿ ಸಂತೋಷ ರೆಡ್ಡಿ, ಸಮಾಜ ಕಲ್ಯಾಣ ತಾಲೂಕಾಧಿಕಾರಿ ಬೇಬಿ, ಪುರಸಭೆ ಕಿರಿಯ ಅಭಿಯಂತರ ಅಬ್ದುಲ್ ಅಲೀಂ, ಹಾಸ್ಟೆಲ್ ವಾರ್ಡನ್ ಶ್ರೀದೇವಿ ಹಾಜರಿದ್ದರು.

