- ಖ್ಯಾತ ಸಂಖ್ಯಾಶಾಸ್ತ್ರಜ್ಞ ಮಹಾಲ್ ನೋಬಿಸ್ ಜನ್ಮದಿನಾಚರಣೆ ಅಂಗವಾಗಿ ಸಾಂಖ್ಯಿಕ ದಿನಾಚರಣೆ
- ದೇಶದ ಪ್ರಗತಿಯಲ್ಲಿ ಅಂಕಿ ಅಂಶಗಳು ಬಹುಮುಖ್ಯ: ನೈಜ ಅಂಕಿ ಅಂಶಗಳನ್ನು ಸಂಗ್ರಹಿಸಿ ನೆರವಾಗಿ
ಸತ್ಯಕಾಮ ವಾರ್ತೆ ಯಾದಗಿರಿ:
ಖ್ಯಾತ ಸಂಖ್ಯಾಶಾಸ್ತ್ರಜ್ಞ ಶ್ರೀ ಪ್ರಶಾಂತ ಚಂದ್ರ ಮಹಾಲ್ ನೋಬಿಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸಾಂಖ್ಯಿಕ ದಿನಾಚರಣೆಯನ್ನು ನಗರದ ಜಿಲ್ಲಾ ಸಂಖ್ಯಾ ಸಂಗ್ರ ಹಣಾಧಿಕಾರಿಗಳ ಕಚೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಾಂತ ಚಂದ್ರ ಮಹಾಲ್ನೋಬಿಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಅರ್ಪಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ನಿವೃತ್ತ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸತ್ಕರಿಸುವ ಮೂಲಕ ಅರ್ಥಪೂರ್ಣವಾಗಿ ಈ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಮುಖ್ಯ ಯೋಜನಾಧಿಕಾರಿ ಕೆ .ಕುಮುಲಯ್ಯ ಅವರು,,ಆಡಳಿತ ಮತ್ತು ಅಭಿವೃದ್ಧಿಯಲ್ಲಿ ದೇಶವನ್ನು ಮುಂಚೂಣಿಗೆ ತರಲು ಅಂಕಿ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿ, ನೀರಾವರಿ,ಜನಗಣತಿ,ಕೈಗಾರಿಕಾ ಸಮೀಕ್ಷೆ ಹೀಗೆ ವಿವಿಧ ಅಂಕಿ ಅಂಶಗಳ ನೈಜ ಸಂಗ್ರಹಣೆ ಮುಖ್ಯ.ಅದರಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆಯವ್ಯಯ ಮತ್ತು ಕೇಂದ್ರದಿಂದ ಗ್ರಾಮ ಪಂಚಾಯತ್ ವರೆಗಿನ ಅನುದಾನ ಹಂಚಿಕೆಯಲ್ಲಿ ಅಂಕಿ ಅಂಶಗಳು ಪ್ರಮುಖವಾಗಿವೆ.
- Advertisement -
ಈ ಹಿನ್ನೆಲೆಯಲ್ಲಿ ಅಂಕಿ ಸಂಖ್ಯೆ ಇಲಾಖೆ ಅಧಿಕಾರಿಗಳು ನೈಜ, ವಾಸ್ತವಿಕ ಅಂಕಿ ಅಂಶಗಳನ್ನು ಸಂಗ್ರಹಿಸಿ ನೀಡಬೇಕು.ತಪ್ಪು ಮಾಹಿತಿಗಳು ಯೋಜನೆಗಳ ತಪ್ಪು ರೂಪುರೇಷೆಗೆ ಕಾರಣವಾಗುತ್ತವೆ ಎಂದು ಹೇಳಿ ಮಹಾಲ್ ನೋಬಿಸ್ ಅವರ ಕೊಡುಗೆ ಸ್ಮರಿಸಿದರು.
ಪದವಿ ಕಾಲೇಜ್ ನ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಪ್ರಹ್ಲಾದ ಜೋಶಿ ಅವರು ಸರ್ಕಾರದ ಯೋಜನೆಗಳು, ಸಾಮಾಜಿಕ, ಆರ್ಥಿಕ ನೀತಿ, ನಿಯಮಗಳಿಗೆ ಅಂಕಿ ಅಂಶಗಳು ಬೆನ್ನಲುಬಾಗಿ ನಿಂತಿವೆ.ಸರ್ಕಾರ ಹಾಗೂ ಸಂಸ್ಥೆಗಳಿಗೆ ಹಾಗೂ ಮನೆಯಿಂದ ಅರಮನೆವರೆಗೆ ಅಂಕಿ ಅಂಶಗಳು ಮುಖ್ಯವಾಗಿವೆ ಎಂದು ಹೇಳಿದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಉದಯಕುಮಾರ್ , ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು (ಪ್ರ) ಶ್ರೀ ಸುಲೈಮಾನ್ ನದಾಫ,
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಅಂಬರಾಯ ಸಾಗರ, ಸಹಾಯಕ ನಿರ್ದೇಶಕ ಎಂ.ಪ್ರಶಾಂತಕುಮಾರ್, ಉಪಸ್ಥಿತರಿದ್ದರು.
ಹೊನ್ನಕ್ಕ ತಾಳಿ, ಲಕ್ಷ್ಮಿ ಪ್ರಾರ್ಥಿಸಿದರು. ಪ್ರಭಾರಿ ಸಹಾಯಕ ನಿರ್ದೇಶಕಿ ಕು.ಚೇತನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ನಾಗರಾಜ್ ನಾಗೂರ್, ಪ್ರತಿಜ್ಞಾ ವಿಧಿ ಬೋಧಿಸಿ, ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಅಧಿಕಾರಿಗಳಾದ ಚಂದ್ರಶೇಖರ್ ಭಂಡಾರಿ, ವೆಂಕಟಯ್ಯ, ವರದರಾಜ ರೆಡ್ಡಿ, ಅಧೀಕ್ಷಕ ಸಾಹೇಬಣ್ಣ ಚೂರಿ, ಫಕೃದ್ದೀನ್,ಇವರನ್ನು ಸನ್ಮಾನಿಸಲಾಯಿತು. ಕೊನೆಯಲ್ಲಿ ದತ್ತಾತ್ರೇಯ ಭಟ್ ವಂದಿಸಿದರು.
- Advertisement -

