ಸತ್ಯಕಾಮ ವಾರ್ತೆ ಯಾದಗಿರಿ:
ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲೆಗಳಿಗೆ ಜಿಲ್ಲಾಮಟ್ಟದ ಆಹಾರ ಧಾನ್ಯ ಏಜೆನ್ಸಿಗಳು ಕಳಪೆ ಮಟ್ಟದ ತೊಗರಿ ಬೇಳೆ ಮತ್ತು ಅಕ್ಕಿಯನ್ನು ಪೂರೈಕೆ ಮಾಡುತ್ತಿವೆ. ಅದರಲ್ಲಿ ತೊಗರಿ ಬೇಳೆ ತೀರ ಕಳಪೆಯಾಗಿದ್ದು ಇದರ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಬೇಕು ಎಂದು ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಆಗ್ರಹಿಸಿದರು.
ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರ ಧಾನ್ಯ ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ತೊಗರಿಬೇಳೆ, ಸಂಸ್ಕರಿತ ತಾಳೆಎಣ್ಣೆ ಮತ್ತು ಕಡಲೆ ಬೇಳೆಗಳನ್ನೊಳಗೊಂಡ ಆಹಾರವನ್ನು ನಿರ್ಧರಿಸಿದೆ. ಸಾಮಾನ್ಯ ಅಕ್ಕಿ ಮತ್ತು ಕಡಲೇಬೇಳೆಗಳ ಗುಣಮಟ್ಟವನ್ನು ಅಳೆಯಲು ಸರ್ಕಾರಿ ಸಂಸ್ಥೆಗಳನ್ನು ಬಿಟ್ಟು ಮೂರನೇ ವ್ಯಕ್ತಿ ಆಯ್ಕೆ ಮಾಡಲಾಗಿದೆ.
ಆದರೆ ಏಜೆನ್ಸಿ ಅವರು ಶಾಲೆಗಳಿಗೆ ಕಳಪೆ ಮಟ್ಟದ ತೊಗರಿ ಬೆಳೆ ಪೂರೈಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಮತ್ತು ಶಾಲೆಗಳಿಗೆ ಗುಣಮಟ್ಟದ ಬೇಳೆಯನ್ನು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು..
- Advertisement -

