ಸತ್ಯಕಾಮ ವಾರ್ತೆ ಯಾದಗಿರಿ:
ಮತಕ್ಷೇತ್ರದ ತಡಿಬಿಡಿ ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಘಟನೆಯೊಂದು ತಡಿಬಿಡಿ ಗ್ರಾಮದ ವಾರ್ಡ್ ನಂ 4 ರಲ್ಲಿ ಸೃಷ್ಟಿಯಾಗಿದೆ.
ವಡಿಗೇರಾ ತಾಲೂಕಿನ ತಡಿಬಿಡಿ ಗ್ರಾಮ ಪಂಚಾಯಿತಿಯಲ್ಲಿ ಬರುವ ವಾರ್ಡ್ ನಂ 4ರಲ್ಲಿ ವಾಸವಾಗಿರುವ ಕುಟುಂಬಗಳು ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಗ್ರಾಮದಲ್ಲಿ ನೀರಿಗಾಗಿ ಆಹಾಕಾರ ಸೃಷ್ಟಿಯಾಗಿದೆ. ಸಂಭಂದಪಟ್ಟ ಅಧಿಕಾರಿಗಳಿಗೆ ಗ್ರಾಮದ ಜನತೆ ಹಲವಾರು ಬಾರಿ ಮನವಿ ನೀಡಿದರೂ ಮನವಿಗೆ ಸ್ಪಂದಿಸದೆ ಬೇಜವಾಬ್ದಾರಿಯಾಗಿ ವರ್ತಿಸಿತ್ತಿರುವುದು ಖಂಡನೀಯ…

ಮಾನ್ಯ ಸ್ಥಳೀಯ ಶಾಸಕರು ಇದರ ಬಗ್ಗೆ ಗಮನ ಹರಿಸಿ ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು… ಕ್ಷೇತ್ರದ ಜನರಿಗೆ ಸಮರ್ಪಕವಾದ ಕುಡಿಯುವ ನೀರು ಒದಗಿಸದ ಅತ್ಯಂತ ಬೇಜವಾಬ್ದಾರಿತನದ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಧರ ಸಾಹುಕಾರ ಅವರು ಆರೋಪಿಸಿದ್ದಾರೆ .
 Total Visits: 16
Total Visits: 16 All time total visits: 30542
All time total visits: 30542
 
			 
                                 
                              
         
         
         
        