ಸತ್ಯಕಾಮ ವಾರ್ತೆ ಯಾದಗಿರಿ:
ವರ್ಕನಳ್ಳಿ ಗ್ರಾಮದ ಸೀಮೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಬ್ಲಾಸ್ಟಿಂಗ್‌ನಿಂದ ರಸ್ತೆ ಹದೆಗೆಟ್ಟಿದ್ದು, ಧೂಳಿನಿಂದ ಜನರಿಗೆ ಬಹಳ ತೊಂದರೆ ಆಗಿದ್ದು ಇದನ್ನು ತಡೆಗಟ್ಟುವಂತೆ ವರ್ಕನಳ್ಳಿ ಗ್ರಾಮದ ಯುವಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಯಾದಗಿರಿ ತಾಲೂಕು ವರ್ಕನಳ್ಳಿ ಗ್ರಾಮದ ಸೀಮೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ದಿನನಿತ್ಯ ಓಡಾಡುವ ಕಲಬುರಗಿ & ಸ್ಥಳೀಯ ಟಿಪ್ಪರ್‌ಗಳ ಹಾವಳಿ ಜಾಸ್ತಿಯಾಗಿ ಈ ಭಾಗದ ರಸ್ತೆಗಳು ಹದೆಗೆಟ್ಟಿದ್ದು, ಓವರ್ ಲೋಡ್ ಹಾಕಿ ನಡೆಸುತ್ತಿದ್ದಾರೆ. ವಾಹನದಲ್ಲಿ ದೊಡ್ಡ ದೊಡ್ಡ ಸೋಲಿಂಗ್ ಕಲ್ಲುಗಳು ತರುತ್ತಿದ್ದು, ಕೆಳಗಡೆ ಬಿದ್ದರೆ ಜನರ ಪ್ರಾಣಕ್ಕೆ ಹಾನಿ ಉಂಟಾಗುತ್ತದೆ. ಹಾಗೂ ಧೂಳಿನಿಂದ ಜನರಿಗೆ ಬಹಳ ತೊಂದರೆ ಆಗಿದ್ದು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ, ಜನರ ಆರೋಗ್ಯ ಹದಗೆಟ್ಟಿದೆ. ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.
ಅಕ್ರಮ ಬ್ಲಾಸ್ಟಿಂಗ್‌ನಿಂದ ಸುತ್ತ-ಮುತ್ತಲಿನ ಗ್ರಾಮಗಳ ಮನೆಗಳು ಬಿರುಕು ಬಿಟ್ಟಿವೆ. ಹೊಲಕ್ಕೆ ಹೋಗುವ ರೈತರು ಭಯ ಭೀತರಾಗಿದ್ದು, ಕಲ್ಲುಗಳು ಮೈ ಮೇಲೆ ಬಿದ್ದು, ಜನ ಜಾನುವಾರುಗಳಿಗೆ ಜೀವಕ್ಕೆ ಹಾನಿ ಉಂಟಾಗುತ್ತಿದೆ. ರಾತ್ರಿ ವೇಳೆ ಕ್ವಾರಿಯಲ್ಲಿ ಮಷಿನ್‌ಗಳು ಬ್ರೇಕರ್ ಚಾಲು ಇರುವುದರಿಂದ ಜನರಿಗೆ ನಿದ್ರೆ ಬಾರದೇ ತೊಂದರೆ ಉಂಟಾಗುತ್ತಿದೆ. ರೈತರ ಜಮೀನಿನಲ್ಲಿನ ಬೆಳೆಗಳು ಕೂಡಾ ಬೆಳೆಯದಂತಾಗಿದೆ.
- Advertisement -
ಈ ಭಾಗದಲ್ಲಿ ಗಣಿಗಾರಿಕೆ ಹಾವಳಿ ಜಾಸ್ತಿಯಾಗಿದ್ದು, ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿದ್ದು, ಬ್ಲಾಸ್ಟಿಂಗ್‌ನಿಂದ ಗ್ರಾಮಗಳ ಜನರು ಭಯ ಭೀತರಾಗಿದ್ದು, ಮತ್ತು ಅಕ್ರಮವಾಗಿ ಅವ್ಯವಹತವಾಗಿ ಗಣಿಗಾರಿಕೆ ನಡೆಯುತ್ತಿದೆ. ಈ ಅಕ್ರಮದ ಬಗ್ಗೆ ಗಣಿಗಾರಿಕೆ ಇಲಾಖೆಯ ಗಮನಕ್ಕೆ ತಂದರೂ ಕೂಡಾ ಕ್ರಮ ಕೈಗೊಂಡಿಲ್ಲ.
ಆದ ಕಾರಣ ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು / ಬ್ಲಾಸ್ಟಿಂಗ್ ನಿಂದ ಈ ಕೂಡಲೇ ತಡೆಹಿಡಿದು, ಜನರ ಆರೋಗ್ಯ ಕಾಪಾಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಶಫಿ ವರ್ಕನಳ್ಳಿ ಮಲ್ಲುನಾಯಕ ವರ್ಕನಳ್ಳಿ ರವಿನಾಯಕ ಭೀಮುನಾಯಕ. ಕಾಶಿನಾಯಕ, ಭೀಮು ಮಡಿವಾಳ. ತಾಯಪ್ಪ ನಾಯಕ ಮೋದಿನ. ದೇವು ನಾಯಕ ರಾಜಪ್ಪ ನಾಯಕ ಇತರರು ಇದ್ದರು.

