ಸತ್ಯಕಾಮ ವಾರ್ತೆ ಕಲಬುರಗಿ:
ಇಂದಿನ ದಿನಮಾನಗಳಲ್ಲಿ ಆರೋಗ್ಯವೇ ಮಹತ್ವವಾಗಿದ್ದರಿಂದ ಜತೆಗೆ ಕೃಷಿ ಮತ್ತೆ ಪ್ರಾಮುಖ್ಯತೆ ಹೊಂದುವ ನಿಟ್ಟಿನಲ್ಲಿ ಮಾಧ್ಯಮಗಳಲ್ಲಿ ಅದರಲ್ಲೂ ಪತ್ರಿಕೆಗಳಲ್ಲಿ ಹೆಚ್ಚು ಲೇಖನಗಳು ಹೊರ ಬರುತ್ತಿರಲಿ ಎಂದು ಶರಣಬಸವೇಶ್ವರ ಸಂಸ್ಥಾನದ ಡಾ. ಲಿಂಗರಾಜಪ್ಪ ಅಪ್ಪ ಆಶಯ ವ್ಯಕ್ತಪಡಿಸಿದರು.
ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಸತ್ಯಕಾಮ ಪತ್ರಿಕೆಯ ಸಂಸ್ಥಾಪಕ ಸಂಪಾದಕ ದಿ. ಪಿ.ಎಂ. ಮಣ್ಣೂರ ಅವರ ೭೭ನೇ ಜನ್ಮ ದಿನದಂಗವಾಗಿ ಆಯೋಜಿಸಲಾದ ಹಿರಿಯ ಪತ್ರಕರ್ತರಿಗೆ ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜನರಿಗಿಂದು ಆಹಾರದ ಮಹತ್ವ ಅದರಲ್ಲೂ ಬಳಕೆ ಕುರಿತಾಗಿ ಪರಿಣಾಮಕಾರಿ ತಿಳಿ ಹೇಳಬೇಕಿದೆ. ಹೀಗಾಗಿ ಆರೋಗ್ಯದ ಮಾಹಿತಿ ನೀಡುವ ಲೇಖನಗಳು ಹೊರ ಬರಲಿ, ಅದೇ ತೆರನಾಗಿ ಕೃಷಿಯೇ ನಮ್ಮ ದೇಶದ ಪ್ರಮುಖ ಕಾಯಕ. ಈ ಕಾಯಕದಿಂದ ಸಮಾಜದ ಆರ್ಥಿಕ ಸ್ಥಿರತೆ ಸಾಧ್ಯ. ಹೀಗಾಗಿ ಕೃಷಿ ಮಹತ್ವ ಮತ್ತು ಕೃಷಿಯಲ್ಲಿನ ಸುಧಾರಣೆ ಕುರಿತಾಗಿ ಲೇಖನಗಳು ಪ್ರಕಟವಾಗುತ್ತಿರಲಿ ಎಂದು ಹೇಳಿದರು.

ಪಿ.ಎಂ. ಮಣ್ಣೂರ ಅವರು ಸ್ಥಾಪಿಸಿದ ಪತ್ರಿಕೆಯನ್ನು ಆನಂದ ಮಣ್ಣೂರ ಮುಂದುವರೆಸಿಕೊAಡು ಹೋಗುತ್ತಿರುವುದು ಶ್ಲಾಘನೀಯ. ಸದಾ ಅವರ ಮಾಧ್ಯಮ ಚಟುವಟಿಕೆಗಳಿಗೆ ಬೆಂಬಲ ಇದ್ದೇ ಇರುತ್ತದೆ ಎಂದು ಡಾ. ಲಿಂಗರಾಜಪ್ಪ ಅಪ್ಪ ಅಭಯ ನೀಡಿದರು.
- Advertisement -
ಹಿರಿಯ ವೈದ್ಯರು ಹಾಗೂ ಸಾಹಿತಿಗಳಾಗಿರುವ ಡಾ. ಎಸ್.ಎಸ್. ಗುಬ್ಬಿ ಮಾತನಾಡಿ, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಸಾಯುವ ಕೊನೆ ಘಳಿಗೆವರೆಗೂ ಕಲಿಕೆ ಇದ್ದೇ ಇರುತ್ತದೆ. ಮಣ್ಣೂರ ಅವರು ದಿನ ನಿತ್ಯ ಹೊಸದಾದ ಕಲಿಕೆಯನ್ನೇ ಮೈಗೂಢಿಸಿಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಪತ್ರಿಕೋದ್ಯಮವಲ್ಲದೇ ರಾಜಕೀಯ, ಸಾಹಿತ್ಯ, ರಂಗಭೂಮಿ ಸೇರಿ ಇತರ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಲು ಸಾಧ್ಯವಾಯಿತು ಎಂದು ಹೇಳಿದರಲ್ಲದೇ ತಂದೆ-ತಾಯಿ ಹಾಗೂ ಹಿರಿಯರಿಗೆ ಗೌರವ ಕೊಡುವುದು ಇಂದು ದೊಡ್ಡ ಮಾತು ಎನ್ನುವಂತಾಗಿದೆ. ಆದ್ದರಿಂದ ಎಲ್ಲರಲ್ಲಿ ಜನ್ಮ ನೀಡಿದವರಿಗೆ ಹಾಗೂ ಹಿರಿಯರಿಗೆ ಗೌರವ ಕೊಡುವುದನ್ನು ಎಲ್ಲರೂ ಪಾಲಿಸಿದ್ದಲ್ಲಿ ಸಮೃದ್ಧ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕಿದವರಲ್ಲಿ ಪಿ.ಎಂ. ಮಣ್ಣೂರ ಒಬ್ಬರು. ಒಟ್ಟಾರೆ ಆಡು ಮುಟ್ಟದ ಸೊಪ್ಪಿಲ್ಲ. ಮಣ್ಣೂರು ಕಾರ್ಯ ಮಾಡದ ಕ್ಷೇತ್ರವಿಲ್ಲ ಎನ್ನುವಂತಿದೆ ಎಂದರು.
ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ಸಮಾಜದ ಎಲ್ಲ ವರ್ಗದವರನ್ನು ಪ್ರಶ್ನಿಸುವ ಹಾಗೂ ತಿದ್ದುವ ಅಧಿಕಾರ ಪತ್ರಕರ್ತರು ಹೊಂದಿದ್ದಾರೆ ಎಂದು ಹೇಳಿದರು.
ಸತ್ಯಾಕಾಮ ಸಮ್ಮಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಶಂಕರ ಕೊಡ್ಲಾ, ಮಣ್ಣೂರ ಅವರು ಸಾಮಾಜಿಕವಾಗಿ ಹತ್ತಾರು ಕಾರ್ಯಗಳನ್ನು ಮಾಡಿದ್ದಾರೆ. ಕಲಬುರಗಿ ವೀರಶೈವ ಲಿಂಗಾಯತ ವಸತಿ ನಿಲಯ ಪ್ರಾರಂಭವಾಗುವಲ್ಲಿ ಡಾ. ಶರಣಪ್ಪ ಗಿರಿ ಅವರ ಜತೆ ಕೈ ಜೋಡಿಸಿದವರಲ್ಲಿ ಇವರೇ ಪ್ರಮುಖರು. ಅದೇ ತೆರನಾಗಿ ಮೂರು ದಶಕಗಳ ಹಿಂದೆ ಬಸವ ಜಯಂತಿ ಆಚರಣೆಗೆ ನಾಂದಿ ಹಾಡಿದವರಲ್ಲೂ ಮಣ್ಣೂರ ಅವರೇ ಪ್ರಮುಖರು. ಪ್ರಮುಖವಾಗಿ ಸದಾ ಹಸನ್ಮುಖಿಯಾಗಿದ್ದರಲ್ಲದೇ ಹಾಸ್ಯ ಚಟಾಕಿ ಹಾರಿಸುವಲ್ಲಿ ಎತ್ತಿದ ಕೈಯಾಗಿದ್ದರು ಎಂದು ಒಡನಾಟದ ಘಟನೆಗಳ ವಿವರಣೆ ನೀಡಿದರು.
ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ ಸಹ ಸತ್ಯಕಾಮ ಸಮ್ಮಾನ ಪ್ರಶಸ್ತಿ ಸ್ವೀಕರಿಸಿ, ಮಣ್ಣೂರ ಅವರು ಸತ್ಯಕ್ಕೆ ಹೇಳಲು ಹಿಂಜರಿಕೆ ಬೇಡ ಎಂದು ಹೇಳುತ್ತಿದ್ದರು. ಪಾಲಿಕೆ ಸದಸ್ಯರಾಗಿಯೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ನಗರದ ಒಂದು ರಸ್ತೆಗೆ ಹೆಸರಿಡಲಿ ಎಂದರು.
- Advertisement -
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ವಿಜ್ಞಾನಿ ಡಾ. ಡಿ.ಎಂ.ಮಣ್ಣೂರ ಅಧ್ಯಕ್ಷತೆ ವಹಿಸಿ, ತಂದೆಯವರು ಸಾಹಿತಿ ಮತ್ತು ಸ್ವಾತಂತ್ರö್ಯ ಹೋರಾಟಗಾರರಾಗಿದ್ದರು. ಅದನ್ನು ಪಿ.ಎಂ. ಮಣ್ಣೂರ ಮೈಗೂಢಿಸಿಕೊಂಡಿದ್ದರು. ಅದ್ನನೀಗ ಆನಂದ ಮಣ್ಣೂರು ಮುಂದುವರೆಸಿಕೊAಡು ಹೋಗುತ್ತಿದ್ದಾರೆ ಎಂದರು.
ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ನಿವೃತ್ತ ವಾರ್ತಾಧಿಕಾರಿ ಅಪ್ಪಾರಾವ ಅಕ್ಕೋಣಿ, ಹಿರಿಯ ಪತ್ರಕರ್ತ ದೇವಿಂದ್ರಪ್ಪ ಕಪನೂರ, ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಗುರುರಾಜ ಕುಲಕರ್ಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಮುಖರಾದ ಝರಣಪ್ಪ ಚಿಂಚೋಳಿ, ರೇವಣಸಿದ್ದಪ್ಪ ಮಾಸ್ತರ್, ಚಾಮರಾಜ ದೊಡ್ಡಮನಿ, ಸುರೇಶ ಕೊಟಗಿ, ಬಸವರಾಜ ಶಿವಗೋಳ ಸೇರಿದಂತೆ ಮುಂತಾದವರಿದ್ದರು. ಸಂಪಾದಕ ಆನಂದ ಪಿ. ಮಣ್ಣೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಾಗಲಿಂಗಯ್ಯ ಶಾಸ್ತಿçÃಗಳು, ಪತ್ರಕರ್ತ ಸಂಗಮನಾಥ ರೇವತಗಾಂವ ನಿರೂಪಿಸಿದರು. ಬಾಬುರಾವ ಕೋಬಾಳ ಪ್ರಾರ್ಥನೆಗೀತೆ ಹಾಡಿದರು. ಕಿರಣ ಪಾಟೀಲ್ ನೇತೃತ್ವದ ಸುಕಿ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಿತು.
- Advertisement -
ದಿ.ವಿ.ಎನ್ ಕಾಗಲಕರ್ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ಸ್ಥಾಪಿಸಲೆಂದು ಈಗಾಗಲೇ ಒತ್ತಾಯಿಸಲಾಗಿದೆ. ಅದೇ ತೆರನಾಗಿ ಪಿ.ಎಂ. ಮಣ್ಣೂರ ಹೆಸರಿನಲ್ಲೂ ಪ್ರಶಸ್ತಿ ಸ್ಥಾಪಿಸುವಂತೆ ಒತ್ತಾಯಿಸಲಾಗುವುದು. ಪ್ರಮುಖವಾಗಿ ಪತ್ರಕರ್ತರ ಕಲಬುರಗಿ ಜಿಲ್ಲಾ ಸಂಘದಿAದ ಪಿ.ಎಂ.ಮಣ್ಣೂರ ಹೆಸರಿನಲ್ಲಿ ಇದೇ ವರ್ಷದಿಂದ ಪ್ರಶಸ್ತಿ ಪ್ರಾರಂಭಿಸಲಾಗುವುದು.
–ಬಾಬುರಾವ ಯಡ್ರಾಮಿ, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ
ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ
ಹಿರಿಯ ಪತ್ರಕರ್ತರಾದ ಶಂಕರ ಕೊಡ್ಲಾ, ಅಜೀಜುಲ್ಲಾ ಸರ್ಮಸ್ತ್, ರಾಮಕೃಷ್ಣ ಬಡಶೇಷಿ, ಹಣಮಂತರಾವ ಭೈರಾಮಡಗಿ, ಚಂದ್ರಕಾAತ ಹುಣಸಗಿ, ಪ್ರಕಾಶ ಕುಲಕರ್ಣಿ ಅವರಿಗೆ ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

