ಕಲುಬುರಗಿ: ಜುಲೈ 01 ರಂದು ದಿ. ಪಿ.ಎಂ. ಮಣ್ಣೂರ ಅವರ 77ನೇ ಹುಟ್ಟುಹಬ್ಬ ಹಾಗೂ “ಸತ್ಯಕಾಮ ಸಮ್ಮಾನ್“ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಆಡಿಟೊರಿಯಂನಲ್ಲಿ ಬೆಳ್ಳಗೆ 11:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸತ್ಯಕಾಮ” ಪತ್ರಿಕೆಯ ಸಂಪಾದಕರಾದ ಆನಂದ್ ಪಿ. ಮಣ್ಣೂರ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಜುಲೈ 01ರಂದು ದಿ. ಪಿ.ಎಂ. ಮಣ್ಣೂರ ಅವರ ಹುಟ್ಟುಹಬ್ಬದ ಅಂಗವಾಗಿ “ಸತ್ಯಕಾಮ ಸಮ್ಮಾನ್” ಪ್ರಶಸ್ತಿಯನ್ನು ಐವರು ಗಣ್ಯರಿಗೆ ಹಾಗೂ ಸತ್ಯಕಾಮ ಪತ್ರಿಕೆಯಲ್ಲಿ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ವಿಜಯಪುರ ಆವೃತ್ತಿಯಲ್ಲಿ ಸ್ಥಾನಿಕ ಸಂಪಾದಕರಿಗೆ ಸತ್ಯಕಾಮ ಸಮ್ಮಾನ್ ವಿತರಿಸಲಾಗುವುದು ಎಂದರು. ಅಂದು ಬೆಳ್ಳಗೆ 11:30 ಗಂಟೆಗೆ ಜರಗುವ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಡಾ. ಲಿಂಗರಾಜಪ್ಪ ಅಪ್ಪ ನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಗದ್ದುಗೆ ಮಠದ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ನಿವೃತ್ತ. ಯೋಜನಾ ನಿರ್ದೇಶಕರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ಡಿ. ಎಂ ಮಣ್ಣೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಬುರ್ಗಿ ಮಹಾಪೌರರಾದ ಯಲ್ಲಪ್ಪ ಎಸ್ ನಾಯ್ಕೋಡಿ, ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಜಡಿಯಪ್ಪ ಗೆದ್ದಗಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರ್ಗಿ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಬುದ್ಧ ಲೋಕ ಪತ್ರಿಕೆಯ ಹಿರಿಯ ಸಂಪಾದಕರು ದೇವೇಂದ್ರಪ್ಪ ಕಪನೂರ್, ಮಾಧ್ಯಮ ಮಾನ್ಯತೆ ಸಮಿತಿ ಸದಸ್ಯರು ಮತ್ತು ಕ.ಕ.ಸಂ.ಸಂಘದ ಕಲಬುರ್ಗಿ ಅಧ್ಯಕ್ಷ ಗುರುರಾಜ್ ಕುಲಕರ್ಣಿ, ಅರ್ಥೋಪೆಡಿಕ್ ಸರ್ಜನ್ ಮತ್ತು ಸಾಹಿತಿಗಳಾದ ಡಾ. ಎಸ್.ಎಸ್ ಗುಬ್ಬಿ, ಕೆ.ಕೆ.ಸಿ.ಸಿ.ಐ ಅದ್ಯಕ್ಷರಾದ ಶರಣಬಸಪ್ಪ ಪಪ್ಪಾರವರು ಅತಿಥಿಗಳಾಗಿ ಬಾಗವಹಿಸಲಿದ್ದಾರೆ ಎಂದರು.
- Advertisement -
ಸುಕಿ ಮೆಲೋಡಿಸ್(ಕಿರಣ್ ಪಾಟೀಲ್) ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು. ಶ್ರೀ ನಾಗಲಿಂಗಯ್ಯ ಶಾಸ್ತ್ರೀಗಳು ಸ್ಥಾವರಮಠ ಅವರು ನಿರೂಪಿಸಿಲಿದ್ದಾರೆ ಎಂದರು.
ಸತ್ಯಕಾಮ ಸಮ್ಮಾನ್ ಪುರಸ್ಕೃತರು
-
ಶ್ರೀ ಶಂಕರ್ ಕೊಡ್ಲಾ, ಸಂಪಾದಕರು, ಜೈ ಭೀಮ್ ಗದೆ ಪತ್ರಿಕೆ ಮತ್ತು ವ್ಯವಸ್ಥಾಪಕರು, ಎಸ್.ಎಸ್.ವಿ.ಟಿವಿ
-
ಶ್ರೀ ಅಜೀಜುಲ್ಲಾ ಸರ್ಮಸ್ತ್, ಸಂಸ್ಥಾಪಕ ಸಂಪಾದಕರು, ಬ್ಹಾಮನಿ ಉರ್ದು ದಿನಪತ್ರಿಕೆ
-
ಶ್ರೀ ರಾಮಕೃಷ್ಣ ಬಡಶೇಷಿ, ವಿಶೇಷ ವರದಿಗಾರರು, ಕಲಬುರಗಿ, ದಿ ನ್ಯೂ ಇಂಡಿಯಾ ಎಕ್ಸಪ್ರೆಸ್
- Advertisement -
-
ಶ್ರೀ ಹಣಮಂತರಾವ್ ಭೈರಾಮಡಗಿ, ಡೆಪ್ಯೂಟಿ ಚೀಫ್ ರಿಪೋರ್ಟರ್, ಉದಯವಾಣಿ, ಕಲಬುರಗಿ ಆವೃತ್ತಿ
-
ಶ್ರೀ ಚಂದ್ರಕಾAತ್ ಹುಣಸಗಿ, ಪ್ರಧಾನ ವರದಿಗಾರರು,ಗುಲ್ಬರ್ಗಾ ಸಂಜೆವಾಣಿ
-
ಶ್ರೀ ಪ್ರದೀಪ್ ಕುಲಕರ್ಣಿ, ಸ್ಥಾನಿಕ ಸಂಪಾದಕರು, ಸತ್ಯಕಾಮ, ವಿಜಯಪುರ,ಮೂರು ದಶಕಗಳ ಸೇವೆಗೆ ಸನ್ಮಾನ
- Advertisement -

