ಸತ್ಯಕಾಮ ವಾರ್ತೆ ವಡಗೇರಾ:
ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಜರತ್ ಇಮಾಮ ಕಾಸಿಂ ದೇವರ ಸೇವಕರಾದ ಲಿಂಗೈಕ್ಯ ಶ್ರೀ ಈರಗಣ್ಣ ತಾತನವರ ನೂತನ ದರ್ಗಾ ಉದ್ಘಾಟನೆಯು ಸೋಮವಾರ ಜೂನ್ 23 ರಂದು ಬೆಳಿಗ್ಗೆ 9:30ಕ್ಕೆ ಸಂತ ಶರಣರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ ಎಂದು ದರ್ಗಾ ಕಮಿಟಿಯವರು ತಿಳಿಸಿದ್ದಾರೆ.
ಅಂದು ಬೆಳಗ್ಗೆ ಗಂಧ ಮೆರವಣಿಗೆಯೊಂದಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ರಾತ್ರಿ 10:30ಕ್ಕೆ ಕವಾಲಿ ಕಾರ್ಯಕ್ರಮ ಜರುಗಲಿದೆ ಈ ದರ್ಗಾ ಉದ್ಘಾಟನ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಬೆಂಡೆಬೆಂಬಳಿ ಗ್ರಾಮದ ದರ್ಗಾ ಕಮಿಟಿಯವರು ಕೋರಿದ್ದಾರೆ

