ಸತ್ಯಕಾಮ ವಾರ್ತೆ ಯಾದಗಿರಿ:
ನಾಳೆ ಜನಾಕ್ರೋಶ ಯಾತ್ರೆ ಯಾದಗಿರಿ ನಗರಕ್ಕೆ ಆಗಮಿಸಲಿದ್ದು ಯಾದಗಿರಿ ಮತಕ್ಷೇತ್ರದಿಂದ ಅತೀ ಹೆಚ್ಚು ಕಾರ್ಯಕರ್ತರು ಈ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ದ್ವನಿಮೊಳಗಿಸಬೇಕೆಂದು ಬಿಜೆಪಿ ಮುಖಂಡ ಚೆನ್ನಾರೆಡ್ದಿಗೌಡ ಬಿಳ್ಹಾರ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪೇಟ್ರೋಲ್, ಡಿಸೇಲ್ ಹಿಡಿದು ಹಾಲು ಮೊಸರು, ಟೋಲ್ ಶುಲ್ಕ, ವಿದ್ಯುತ್ ದರ, ಕಾರು ವಾಣಿಜ್ಯ, ಒಳಗೊಂಡು ಎಲ್ಲದರ ಬೆಲೆಯನ್ನು ಏರಿಸುವಂತಹ ಕಾರ್ಯ ಕಾಂಗ್ರೇಸ್ ಸರ್ಕಾರ ಮಾಡಿದೆ ದಿನನಿತ್ಯ ಬಡವರಿಂದ ಹಿಡಿದು ಎಲ್ಲರಿಗೂ ಅವಶ್ಯವಾಗಿರುವ ಹಾಲಿನ ದರ ಪ್ರತಿ ಲೀಟರ್‌ಗೆ ೪ ರೂ. ಹೆಚ್ಚಳ ಮಾಡಿದ್ದಾರೆ ಇದರಿಂದ ಪ್ರತಿ ತಿಂಗಳಿಗೆ ೧೨೦ ರೂ.ಗೂ ಅಧಿಕ ಹೊರೆ ಬಡವರಿಗೆ ಬಿಳ್ಳಲಿದೆ ಗ್ಯಾರೆಂಟಿ ಯೋಜನೆಗಳಿಂದ ಯಾರಿಗೂ ಉಪಯೋಗವಾಗುತ್ತಿಲ್ಲಾ ಹೆಂಡತಿಗೆ ಕೊಟ್ಟು ಗಂಡನಿAದ ಕಸಿದುಕೊಳ್ಳುವಂತಹ ಕೆಲಸ ಕಾಂಗ್ರೇಸ್ ಸರ್ಕಾರದಿಂದ ನಡೆದಿದೆ ಒಂದೆಡೆ ಮಹಿಳೆಯರಿಗೆ ಬಸ್ ಪ್ರೀ ಎಂದು ಇನ್ನೊಂದೆಡೆ ಬಸ್ ದರ ಏರಿಕೆ ಮಾಡಲಾಗಿದೆ ವಿದ್ಯುತ್ ಪ್ರೀ ಎಂದು ಕೊಟ್ಟು ವಿದ್ಯುತ್ ದರ ಏರಿಸಲಾಗಿದೆ ೧೦೦ ಬಾಂಡ್ ಇಂದು ೫೦೦ ರೂ. ಏರಿಸಲಾಗಿದೆ ಬಡವರು ಮಧ್ಯಮವರ್ಗದವರು ಜೀವನ ನಡೆಸುವದೇ ದುಸ್ಥರವಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರವು ತನ್ನ ಗ್ಯಾರೆಂಟಿ ಯೋಜನೆಗಳ ಉಳಿಸಿಕೊಳ್ಳುವ ನೆಪದಲ್ಲಿ ದಿನಬಳಕೆ ವಸ್ತುಗಳಿಂದ ಹಿಡಿದು ಎಲ್ಲದರ ಮೇಲೆ ತೇರಿಗೆ ಹೆಚ್ಚಿಸಿ ಬಡವರ ಗಾಯದ ಮೇಲೆ ಬರೆ ಎಳೆಯುವಂತಹ ಕಾರ್ಯ ಮಾಡುತ್ತಿದೆ, ಅದರಲ್ಲೂ ರಾಜ್ಯದಲ್ಲಿ ಅಭಿವೃದ್ದಿ ಎಂಬುದು ನಿಂತ ನೀರಾಗಿದೆ ಅಭಿವೃದ್ದಿ ಎಂಬುದು ಶೂನ್ಯವಾಗಿ ಬಿಟ್ಟಿದೆ ೨ ವರ್ಷಗಳಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲಾ ರಾಜ್ಯ ಸರ್ಕಾರವು ಇಂದು ೬೦% ಸರ್ಕಾರವೆಂಬುದು ಸಾಬೀತು ಪಡಿಸಿದೆ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮೊಳಗಿರುವ ರಾಜ್ಯ ಸರ್ಕಾರವು ಎಂದು ತೊಲಗಿ ಹೋಗುತ್ತದೆ ಎಂದು ಜನರು ಹಿಡಿ ಶಾಪ ಹಾಕಲಿಕ್ಕೆ ಹತ್ತಿದ್ದಾರೆ ಇಂತಹ ದುರಾಡಳಿತ ಸರ್ಕಾರದ ವಿರೂದ್ದ ಪ್ರತಿಯೊಬ್ಬರೂ ಪ್ರತಿಭಟಿಸುವದು ಅಗತ್ಯವಾಗಿದೆ ಎಂದರು.
ಹೀಗಾಗಿ ಇದೇ ದಿ.23 ರಂದು ನಗರಕ್ಕೆ ಜನಾಕ್ರೋಶ ಯಾತ್ರೆ ಆಗಮಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
