ಅಂಬೇಡ್ಕರ್ ವೃತ್ತ ಅರ್ಧ ಕಾಮಗಾರಿ, ಪುರಸಭೆ ಮುಖ್ಯಾಧಿಕಾರಿ ವಿರುದ್ಧ ದೂರು
ಸತ್ಯಕಾಮ ವಾರ್ತೆ ಮುದ್ದೇಬಿಹಾಳ:
ಇಲ್ಲಿನ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಸಭಾ ಭವನದಲ್ಲಿ ಸಾರ್ವಜನಿಕರಿಂದ ಕೆಲ ಇಲಾಖೆಗಳ ವಿರುದ್ಧ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಸೋಮವಾರ ಕರ್ನಾಟಕ ಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರು ಅಹವಾಲು ಸ್ವೀಕರಿಸಿದರು.
ಜಿಲ್ಲೆಯಲ್ಲಿಯೇ ಮುದ್ದೇಬಿಹಾಳ ಹಿಂದೂಳಿದ ತಾಲೂಕು ಆಗಿದೆ. ಕೆಲ ಹಳ್ಳಿಗಳಿಗೆ ಸರಿಯಾದ ಬಸ್, ವಿದ್ಯುತ್ ಸೌಕರ್ಯ ಇರಲಿಲ್ಲ. ಆಗ ನಾಲ್ಕೈದು ಕಿಲೋ ಮೀಟರ್ ನಡೆದು ಕೊಂಡು ಶಾಲೆಗೆ ಹೋಗುತ್ತಿದ್ದೇವು. ಈಗ ಎಲ್ಲವೂ ಸೌಕರ್ಯವನ್ನು ಸರ್ಕಾರ ಕೋಟ್ಯಾಂತರ ಹಣವನ್ನು ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ಬಿಡುಗಡೆ ಮಾಡುತ್ತಿದೆ. ಅಧಿಕಾರಿಗಳು ಸರಿಯಾಗಿ ಅನುದಾನವನ್ನು ಯಾವುದರಲ್ಲಿ ಬಳಸಬೇಕು ಎಂಬುವ ಪರಿಕಲ್ಪನೆ ಇರಬೇಕು ಎಂದರು.
ಸ್ವಚ್ಚತೆ, ಆರೋಗ್ಯ, ಶೈಕ್ಷಣಿಕವಾಗಿ ಈ ಭಾಗ ಹಿಂದುಳಿದಿದೆ. ಮನುಷ್ಯ ಅತೀ ಆಸೆಗೆ ಬಿದ್ದು ಚಪಲಕ್ಕೆ ಬಿದ್ದಿದ್ದಾನೆ ಬಡವರಿಗೆ ಬೇಕಾದಂತಹ ಸೌಕರ್ಯ ಆರ್ಥಿಕವಾಗಿ ಮುಂದಿರುವವರಿಗೆ ಸಿಗುತ್ತಿದೆ. ಇದರಿಂದ ಭ್ರಷ್ಟಾಚಾರ ವ್ಯಾಪಕವಾಗಿ ಜಾಸ್ತಿಯಾಗುತ್ತಿದೆ.
ಈ ಭಾಗದ ಹಳ್ಳಿಗಳನ್ನು ಬೇರೆ ಬೇರೆ ಕೂಡ ಹೋಲಿಸಿ ನೋಡಬೇಕು. ಹಳ್ಳಿಗಳಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಲಾಗಿದೆ. ಇದನ್ನು ಸಾರ್ವಜನಿಕರು ಬಳಕೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗಳು, ಸಿಇಓ ಹಾಗೂ ಅಧಿಕಾರಿಗಳು ಪಟ್ಟಣ ಸರಿ ಮಾಡಿದ್ರೆ ಸಾಲದು ಹಳ್ಳಿಗಳಲ್ಲಿ ಚರಂಡಿ, ರಸ್ತೆ, ಆರೋಗ್ಯಕ್ಕೆ ಬೇಕಾದ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದಂತಹ ಯೋಜನೆ ಸಿದ್ಧಪಡಿಸಬೇಕು ಎಂದು ರಾಜ್ಯ ಲೋಕಾಯುಕ್ತರು ಹೇಳಿದರು. ಈ ವೇಳೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸಿಇಓ ಉತ್ತರಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಧಿಕ ಹಣ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತ ಮಟ್ಟಕ್ಕೆ ಕೊಂಡ್ಯೊಯ್ದರೆ ಬಡ ಜನರಿಗೆ ಅನುಕೂಲ ವಾಗುತ್ತದೆ. ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಯಾವುದೇ ಅರ್ಜಿಯ ಮಾಹಿತಿ ಕೇಳಿದರೂ ಕೊಡಲು ಸಿದ್ಧ ಇರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪಿಡಿಓಗಳು ಜಿಲ್ಲಾ ಮಟ್ಟದಲ್ಲಿ ವಾಸಿಸುತ್ತಾರೆ ಎಂದು ದೂರುಗಳು ಬಂದಿವೆ. ಈ ಭಾಗದ ಗ್ರಾ.ಪಂ ಸಮೀಪದಲ್ಲಿಯೇ ಖಾಯಂ ಆಗಿ ಪಿಡಿಓಗಳು ವಾಸಿಸಬೇಕು. ರಸ್ತೆಗಳಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡವನ್ನು ತೆರವುಗೊಳಿಸಬೇಕು. ಕಾನೂನು ಉಲ್ಲಂಘಿಸಿದವರಿಗೆ ಪಿಡಿಓಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ನೀವು ಸಹ ಅಕ್ರಮ ಕಟ್ಟದಲ್ಲಿ ಭಾಗಿದಾರರು ಆದಂತೆ. ಎಲ್ಲರೂ ಕಾನೂನು ಪಾಲಿಸಬೇಕು ಹೊರತು ಉಲ್ಲಂಘಿಸಬಾರದು. ಹಳ್ಳಿಗಳಲ್ಲಿ ಪಿಡಿಓಗಳು ಚರಂಡಿ ನಿರ್ಮಾಣ ಮಾಡಿಕೊಡಲ್ಲ. ಇದರಿಂದ ರೋಗಗಳು ಬರದೇ ಇರುತ್ತಾವಾ? ಎಲ್ಲಾ ಗ್ರಾಮಗಳಲ್ಲಿ ಸುಸಜ್ಜಿತ ಅಭಿವೃದ್ಧಿಯನ್ನು ಮಾಡಲು ಗ್ರಾ.ಪಂ ಮಾಡಲಾಗಿದೆ. ಇದನ್ನು ಈಗ ಪಿಡಿಓಗಳು ಅಧೋಗತಿ ತಂದಿದ್ದಾರೆ.
ಮನೆ, ನೀರು, ಆಸ್ತಿ ತೆರಿಗೆ ಹೀಗೆ ಯಾವ ಅನುದಾನಲ್ಲಿ ತೆರಿಗೆ ಎಷ್ಟು ಬಂದಿದೆ ಎಂಬುದನ್ನು ಸರಿಯಾಗಿ ನಿರ್ವಹಣೆಯ ಹಾಜರಾತಿ ಪುಸ್ತಕ ಮಾಡಬೇಕು. ಇದ್ಯಾವುದನ್ನು ಅಧಿಕಾರಿಗಳು ಪಾಲಿಸದಿದ್ದರೆ ನಿಮ್ಮ ವಿರುದ್ಧ ಕೇಸ್ ದಾಖಲಿಸವುದಲ್ಲದೇ, ನಿಮ್ಮ ವಿರುದ್ದ ಲೋಕಾಯುಕ್ತ ಅಧಿಕಾರಿಗಳು ಹಿಂಬಾಲು ಬೀಳುತ್ತಾರೆ.
ಗ್ರಾಮಗಳಲ್ಲಿ ಕೆಲವು ಪ್ರಾಣಿಗಳು ಸಾವಿಗೀಡಾದರೆ ಮೂರು ನಾಲ್ಕು ದಿನ ಕಳೆದರೂ ಅವುಗಳನ್ನು ಸರಿಯಾಗಿ ವಿನಿಯೋಗಿಸುವುದಿಲ್ಲ. ದೇಶದಲ್ಲಿ ಬಹುತೇಕವಾಗಿ ಹೆಚ್ಚಿನ ಜನಸಂಖ್ಯೆ ಹಳ್ಳಿಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಹಳ್ಳಿಗಳು ಅಭಿವೃದ್ಧಿಗೊಂಡಾಗ ಮಾತ್ರ ದೇಶ ಅಭಿವೃದ್ಧಿ ಯಾದಂತೆ. ಹಳ್ಳಿಗರು ಮುಗ್ದರು, ಸರಿಯಾಗಿ ಅವರಿಗೆ ತಿಳುವಳಿಕೆ ಇರುವುದಿಲ್ಲ. ಸರಿಯಾಗಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಖೀತು ಮಾಡಲಾಯಿತು.
ಹಳ್ಳಿ ಜನರಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ಡಿಡಿಪಿಓ, ಬಿಇಓ ಪಾತ್ರ ಬಹಳವಿದೆ. ಶಾಲೆಗಳಲ್ಲಿ ಸ್ವಚ್ಛತೆಗೆ ಬಹಳ ಮಹತ್ವ ಕೊಡಿ, ತಾಲೂಕಿನಲ್ಲಿ 66 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆ ಇವೆ. ಕಳಪೆ ಗುಣಮಟ್ಟದ ಶಾಲೆಗಳು ನಿರ್ಮಾಣವಾದ ದೂರುಗಳು ಬಂದಿವೆ ಎಂದರು. ಈ ವೇಳೆ ಬಿಇಓ ಬಸವರಾಜ ಸಾವಳಗಿ ಉತ್ತರಿಸಿ 97 ಶಾಲೆಗಳಲ್ಲಿ 225 ಶಾಲೆಗಳು ಕೊಠಡಿಗಳು ಶೀಥಲಗೊಂಡಿವೆ. ಇದಕ್ಕೆ ಈಗಾಗಲೇ ವರದಿ ನೀಡಲಾಗಿದೆ ಎಂದರು. ಆಗ ಲೋಕಾಯುಕ್ತರು ಮಾತನಾಡಿ ಹಾಗಾಗ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ಪ್ರಸ್ತಾಪಿಸಬೇಕು. ಆಗಲೂ ಹಾಗದಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಬಿಡುವುದಿಲ್ಲ ಎಂದರು.
ಪ್ರತಿಯೊಬ್ಬ ಪಿಡಿಓಗಳು ಸಮಯ ಹಾಕಿಕೊಂಡು ಪ್ರತಿದಿನ ಒಂದೊಂದು ಬಡವಾಣೆ ಆಯ್ದುಕೊಂಡು ಸ್ವಚ್ಛತೆ ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ ಎಸ್.ಪಿ ಇದ್ದಾರೆ ಎರಡು ವಾರಕ್ಕೊಮ್ಮೆ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ಉನ್ನತವಾದ ಅಭಿವೃದ್ಧಿ ಮಾಡಿದ ಪಿಡಿಓಗಳನ್ನು ಗುರುತಿಸಿ ಪ್ರಶಂಸಾನ ಪತ್ರ ನೀಡಲಾಗುತ್ತದೆ. ಪಂಚಾಯತಿ ಅಧಿಕಾರಿಗಳು ಟ್ಯಾಕ್ಸ್ ಮೆಂಟೆನೆನ್ಸ್ ಪುಸ್ತಕ ಮಾಡದಿದ್ದರೆ ನೀವು ಈ ಹುದ್ದೆಗೆ ಯೋಗ್ಯರಲ್ಲವೆಂದು ಅತಿ ಶೀಘ್ರದಲ್ಲಿ ನಮ್ಮ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದರು.
ಗ್ರಾ.ಪಂ ಸದಸ್ಯರಿಗೆ, ಅಧ್ಯಕ್ಷರಿಗೆ ಪಿಡಿಓಗಳು ಹೆದರುವ ಅವಶ್ಯಕತೆ ಇಲ್ಲ. ನೀವು ಯಾವುದೇ ಬಿಲ್ ನ್ನು ತಪ್ಪು ಬರಿಯದೇ ಖಂಡಿಸುವ ಗುಣ ಹೊಂದಿರಬೇಕು ಎಂದರು.
ಈ ವೇಳೆ ಇಓ ಎನ್.ಎಸ್ ಮಸಳಿ ಮಾತನಾಡಿ, ಪ್ರತಿಶತ 5೦% ಕ್ಕಿಂತ ಹೆಚ್ಚಿಗೆ ಸಂಗ್ರಹಿಸಲಾಗಿದೆ. ಆರ್ ಓ(ಕುಡಿಯುವ ನೀರಿನ) ಘಟನೆಗಳು ಹಾಳು ಆಗಿದ್ದರಿಂದ ಅದಕ್ಕೆ ಬಳಸಬೇಕು ಯೋಜನೆ ಇದೆ ಎಂದು ಸಿಇಓ ಹೇಳಿದರು.
ಜಲಜೀವನ ಮಿಶನ್ ಅಡಿಯಲ್ಲಿ ಮನೆಗಳಿಗೆ ಕುಡಿಯುವ ನೀರಿನ್ನು ಒದಗಿಸಬೇಕು. ತಾಲೂಕು ಎಇಇ ಹಿರೇಗೌಡ ಅಷ್ಟೇನೂ ನೀವು ಕ್ರೀಯಶೀಲರಿಲ್ಲ. ನೀವು ಆದಷ್ಟು ಬೇಗನೆ ನೀವು ಹಳ್ಳಿಗಳಿಗೆ ಹೋಗಿ ಜಲಮಿಶನ್ ಅಡಿ ನೀರು ಸರಿಯಾಗಿ ಗ್ರಾಮಸ್ಥರಿಗೆ ಹೋಗುತ್ತಿದೆ ಎಂಬುದನ್ನು ಪರೀಶಿಲಿಸಬೇಕು ಎಂದರು.
ಸಾರ್ವಜನಿಕರ ಅಧಿಕಾರಿಗಳ ಹತ್ತಿರ ಸಮಸ್ಯೆ ಹೇಳಿಕೊಂಡು ಬಂದರೆ ಸರಿಯಾದ ಒಂದೆರೆಡು ಮಾತುಗಳನ್ನು ಆಡಬೇಕು. ಅದರಿಂದಲೇ ಕೆಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು. ಸರಿಯಾಗಿ ಅಧಿಕಾರಿಗಳು ಹಣದ ರಜಿಸ್ಟರ್ ಮಾಡಬೇಕು. ಆಗ ನಮ್ಮ ಅಧಿಕಾರಿಗಳು ಬಂದು ದಾಳಿಮಾಡಿದರೆ ನಿಮ್ಮ ಹತ್ತಿರ ಹಣ ಸಿಕ್ಕರೆ ಕೇಸ್ ದಾಖಲಾಗುತ್ತದೆ. ಈ ವೇಳೆ ನನ್ನ ಮಗನಿಗೆ ಫೀಸ್ ನೀಡಬೇಕಿತ್ತು, ಮನೆಯ ದುಡ್ಡು ಅಂದರೆ ಯಾವುದನ್ನು ನಾವು ಕೇಳುವುದಿಲ್ಲ. ಶಾಲೆಗಳಲ್ಲಿ 5 ರಿಂದ 10 ಸಾವಿರ ರೂಗೆ ಶಿಕ್ಷಕರ ನ್ನು ತಂದು ಶಿಕ್ಷಣವನ್ನು ನೀಡಲಾಗುತ್ತಿದೆ. ಅವರಿಗೆ ಸರಿಯಾದ ಶಿಕ್ಷಣ ಹಾಗೂ ತರಬೇತಿ ಇರುವುದಿಲ್ಲ ಅವರು ಏನು ಶಿಕ್ಷಣ ನೀಡುತ್ತಾರೆ. ಇದು ನಿಲ್ಲಬೇಕು ಎಂದು ಲೋಕಾಯುಕ್ತರು ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಎಸ್ ವಸತಿ ನಿಲಯದ ಕೋಣೆಗಳಲ್ಲಿ 20 ಜನ ವಿದ್ಯಾರ್ಥಿಗಳನ್ನು ಹಾಕಲಾಗುತ್ತದೆ. ಇದು ದೌರ್ಬಾಗ್ಯ ಇದರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ.
ಕೃಷಿ ತೊಗರಿ ಬೆಳೆ ನಕಲಿ ಬಂದಿರುವುದಕ್ಕೆ ಏನು ಕ್ರಮ ಕೈಗೊಂಡಿದ್ದಿರಿ ಎಂಬುದಕ್ಕೆ ಹವಾಮಾನ ವೈಪರಿತ್ಯ ಮಂಜು ಬಿದ್ದಿರುವುದರಿಂದ ಇದಕ್ಕೆ ಇಳುವರಿ ಕಡಿಮೆಯಾಗಿದೆ. ಬಿಜೋಪಚಾರ ಮಾಡುವಾಗ ಅಂತರ ಕಾಯ್ದುಕೊಳ್ಳದೇ ಇರುವುದಕ್ಕೆ ಇಳುವರಿ ಕಡಿಮೆಯಾಗಿದೆ ಎಂದು ಧಾರವಾಡ ಹಾಗೂ ರಾಯಚೂರದಿಂದ ಕೃಷಿ ವಿಜ್ಞಾನಿಗಳು ವರದಿ ನೀಡಿದ್ದಾರೆ. ಬಗ್ಗೆ ವರದಿ ಕೂಡ ನೀಡಲಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿ ಸುರೇಶ್ ಭಾವಿಕಟ್ಟಿ ಹೇಳಿದರು. ಹಳ್ಳಿಗಳಲ್ಲಿ ಅಲ್ಲಲ್ಲಿ ರೈತರ ಬೆಳೆಗಳನ್ನು ಪರಿಶೀಲನೆ ಮಾಡಲಾಗಿದೆ. ಬೆಳೆಗಳಿಗೆ ವಿಮಾ ಕಟ್ಟಿದ್ದರೆ ಅವರಿಗೆ ಕಂಡಿತವಾಗಿ ಬೆಳೆ ವಿಮಾವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ತಾಳಿಕೋಟಿ, ಮುದ್ದೇಬಿಹಾಳದಲ್ಲಿ 33 ಹಾಗೂ 12 ಕೆರೆಗಳು ಇವೆ. ಇದರಲ್ಲಿ 13 ಮುದ್ದೇಬಿಹಾಳದಲ್ಲಿ, 3 ತಾಳಿಕೋಟಿ ವ್ಯಾಪ್ತಿಯ ಕೆರೆಗಳು ಒತ್ತುವರೆಯಾಗಿವೆ.ಈ ಕೂಡಲೇ ತೆರವು ಗೊಳಿಸಲು ಕ್ರಮ ಕೈಗಳ್ಳಬೇಕು. ಈಗ ರೈತರು ಭಿತ್ತನೆ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಬೆರಳೆಣಿಕೆಯಷ್ಟು ಇರುವ ಕೆರೆಗಳನ್ನು ಉಳಿಸಬೇಕು. ರೈತರು ಮನೆ ಇನ್ನೀತರ ಅಕ್ರಮಿಸಿರುವುದನ್ನು ಮೊದಲು ಒತ್ತುವರಿ ತೆರವುಗೊಳಿಸಬೇಕು ಎಂದರು.
ಮುದ್ದೇಬಿಹಾಳ 42 ಸಾವಿರ ಜನಸಂಖ್ಯೆ ಇದ್ದು, ರಸ್ತೆಗಳಲ್ಲಿ ಶುಭಾಶಯ ಕೋರುವ ಪ್ಲೇಕ್ಸ್ ಹಾಕಲಾಗಿದೆ ಇವುಗಳನ್ನು ತೆರವುಗೊಳಿಸಬೇಕು. ಇದು ಸುಪ್ರೀಂ ಆದೇಶವಿದೆ. ಮುಂದೆ ಪ್ಲೆಕ್ಸ್ ಗಳು ಕಂಡರೆ ನಿಮ್ಮ ಮೇಲೆ ಕೇಸ್ ದಾಖಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರಗೆ ಸೂಚಿಸಲಾಯಿತು.
ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಒಟ್ಟು 18 ಕಸದ ವಾಹನಗಳು ಇವೆ. ಪ್ರತಿ ದಿನ 12 ಟನ್ ಕಸ ಸಂಗ್ರಹಿಸಲಾಗುತ್ತಿದೆ. ಪ್ರತಿ ದಿನ ಒಂದೊಂದು ವಾಹನಗಳು ನಾಲ್ಕು ಟ್ರಿಪ್ ಆಗುತ್ತಿದ್ದು, ಇದರಿಂದ ಹಣ ಪೋಲಾಗುತ್ತಿದೆ. ಇದನ್ನು ಅರಿತು ಬರುವ ದಿನಗಳಲ್ಲಿ ಟಾಟಾ ಎಸ್ ನಿಂದ ಪಟ್ಟಣದಲ್ಲಿತೇ ಟಿಪ್ಪರ್ ಹಾಕಿ ಈ ಮೂಲಕ ಕಸವನ್ನು ತೆಗೆದುಕೊಂಡು ಹೋಗುವ ಚಿಂತನೆ ಇದೆ ಎಂದರು.
ದೂರುಗಳು
ಪಟ್ಟಣದಲ್ಲಿ ಮನೆಕಟ್ಟಲು ಮುಖ್ಯಾಧಿಕಾರಿ ಲಂಚ ತೆಗೆದುಕೊಂಡಿದ್ದಾರೆ ಎಂದು ಪರಶುರಾಮ ಲೋಕಾ ಯುಕ್ತರಿಗೆ ದೂರು ಬಂದರೆ, ಅದೇ ರೀತಿ ಎಸ್.ಸಿ ಎಸ್.ಪಿ, ಟಿಎಸ್.ಪಿ ಹಣ ದುರುಪಯೋಗ, ಜಲ ಜೀವನ ಮಿಶಿನ್, ಹೊಲದ ದಾರಿಗಳ ಸಮಸ್ಯೆ, ಆಸ್ತಿ ಬೇರೆವರಿಗೆ ವರ್ಗಾವಣೆ ಬಗ್ಗೆ, ಮುದ್ದೇಬಿಹಾಳದ ಅಂಬೇಡ್ಕರ್ ವೃತ್ತ ಅರ್ಧ ಕಾಮಗಾರಿ ಕುರಿತು, ಅನಧಿಕೃತ ಕಟ್ಟಡಕ್ಕೆ ಅನುಮತಿ ನೀಡಿದ ಪುರಸಭೆ ಹಾಗೂ ತಾ.ಪಂ ವಿರುದ್ಧ ದೂರುಗಳು ಕೇಳಿಬಂದವು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಿಷಿ ಆನಂದ, ಲೋಕಾಯುಕ್ತ ಎಸ್.ಪಿ ಟಿ ಮಲ್ಲೇಶ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.
 Total Visits: 110
Total Visits: 110 All time total visits: 31286
All time total visits: 31286
 
			 
                                 
                              
         
         
         
        
