ಸತ್ಯಕಾಮ ವಾರ್ತೆ ಯಾದಗಿರಿ:
ಜಲಜೀವನ ಯೋಜನೆಯ ಕಾಮಗಾರಿಯಲ್ಲಿ ಸುರಪುರ ಎಇಇ ಹಣಮಂತರಾಯ ಪಾಟೀಲ್ ಅವರು ನಕಲಿ ಬಿಲ್ ಸೃಷ್ಟಿಸಿ ಗೋಲ್ ಮಾಲ್ ಮಾಡಿದ್ದಾರೆಂದು ಆರೋಪಿಸಿ ಆರ್‌ಡಬ್ಲೂಎಸ್ ಇಲಾಖೆಯ ಇಇ ಆನಂದ್ ಅವರು ಬುಧವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುರಪುರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಾರದ ಎಇಇ ಹನುಮಂತ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡದೇ ಕಾಮಗಾರಿಯ ಛಾಯಾಚಿತ್ರಗಳು ಕಂಪ್ಯೂಟರ್ ಮಿಕ್ಸಿಂಗ್ ಪೋಟೋ ಸೃಷ್ಠಿಸಿ, ಸರ್ಕಾರದ ಅನುದಾನ ದುರುಪಯೋಗ ಮಾಡಲು ನಕಲಿ ದಾಖಲೆಗಳನ್ನು ತಯಾರಿಸಿರುವದು ಕಂಡು ಬಂದಿದ್ದೂ, ಸಾರ್ವಜನಿಕ ಅಧಿಕಾರಿಯು ದಾಖಲೆಗಳನ್ನು ನಕಲಿಯಾಗಿ ಸೃಷ್ಠಿಸುವುದು ಅಪರಾಧ ಆಗಿರುವದರಿಂದ ಮತ್ತು ಸರ್ಕಾರದ ಅನುದಾನ ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಿರುವದು ಕಂಡು ಬಂದಿರುವ ಹಿನ್ನಲೆ ಎಇಇ ಹಣಮಂತರಾಯ ವಿರುದ್ದ ಬಿ.ಎನ್.ಎಸ್-2023 ಆಕ್ಟ್ ಕಲಂ 336, 340 ನೇದ್ದರಡಿಯಲ್ಲಿ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -

