ಸತ್ಯಕಾಮ ವಾರ್ತೆ ಯಾದಗಿರಿ:
ಮಹಾನ್ ಧರ್ಮನಿರಪೇಕ್ಷ- ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134ನೇ ಸ್ಮರಣ ದಿನ ವನ್ನು ಯಾದಗಿರಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ (ಟೌನ್) ವಸತಿ ನಿಲಯದಲ್ಲಿ ಹಾಗೂ ಯರಗೋಳ ಗ್ರಾಮದ ಬಸ್ ನಿಲ್ದಾಣದ ಬಳಿ ಆಚರಿಸಲಾಯಿತು.
ಆಧುನಿಕ ಶಿಕ್ಷಣಕ್ಕೆ ನಾಂದಿ ಹಾಡಿದ, ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ, ವಿಧವಾ ಪುನರ್ ವಿವಾಹಕ್ಕಾಗಿ ದುಡಿದ ಮಹಾನ್ ಚೇತನ ಈಶ್ವರಚಂದ್ರ ವಿದ್ಯಾಸಾಗರರು ನಮ್ಮೆಲ್ಲರಿಗೂ ಆದರ್ಶವಾಗಬೇಕು. ಸಾರ್ವಜನಿಕ ಶಿಕ್ಷಣ ಉಳಿಸುವ ಹೋರಾಟಕ್ಕೆ ವಿದ್ಯಾಸಾಗರರು ನಮಗೆ ಸ್ಫೂರ್ತಿಯಾಗಬೇಕು ಎಂದು AIDSO ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ ಕೆ ರವರು ಮಾತನಾಡಿದರು.
ಕಾರ್ಯಕ್ರಮದಲ್ಲಿ AIDSO ಸದಸ್ಯರಾದ ದೇವೀಂದ್ರಮ್ಮ, ಲಕ್ಷ್ಮೀಕಾಂತ, ರೆಡ್ದೆಪ್ಪ, ರಂಜಿತಾ, ಶ್ರವಣಕುಮಾರ, ಮೆಹಬೂಬ್, ನಾಗಿಂದ್ರಮ್ಮ ಹಾಗೂ ಊರಿನ ನಾಗರೀಕರಾದ ಭೀಮರೆಡ್ಡಿ, ಯಂಕಾರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.

