ಯಾದಗಿರಿ : ಜೂನ್ 17, (ಕ.ವಾ) : ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಪ್ರೇರೆಪಿಸಿದರು, ಇದರಲ್ಲಿ ವೈದ್ಯ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿರುತ್ತದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ಹೇಳಿದರು.
ಯಾದಗಿರಿ ನಗರದಲ್ಲಿ ಜೂ.17ರ ಮಂಗಳವಾರ ರಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯಲ್ಲಿ ರಕ್ತ ಕೇಂದ್ರ ಆರಂಭವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಪ್ರೇರೆಪಿಸಿದರು, 2025ರ ಜೂನ್ 14 ರಂದು ವಿಶ್ವದ್ಯಾಂತ ರಕ್ತದಾನಿಗಳ ದಿವಸ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ 2025ರ ಜೂನ್ 17 ರಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆಯ ವೈದ್ಯ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಯಾದಗಿರಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್ ಅವರು ಮಾತನಾಡಿ, 17 ರಿಂದ 65 ವರ್ಷ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ 2 ಬಾರಿ ರಕ್ತದಾನ ಮಾಡಬಹುದು, ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿದರೆ ಅವರ ದೇಹದಲ್ಲಿ ಹೊಸ ರಕ್ತ ಉಂಟಾಗಲು ಪ್ರಚೋದನೆಯಾಗುತ್ತದೆ ಯಾವುದೇ ತರಹದ ಆಪತ್ತು ಬರುವುದಿಲ್ಲ ಬದಲಾಗಿ ಹೊಸ ಚೈತನ್ಯ ಮೂಡುತ್ತದೆ. ರಕ್ತದಾನ ಮಾಡುವವರಿಗೆ ಬಿ.ಪಿ ಹಿಮೊಗ್ಲೋಬಿನ್, ಹೆಚ್.ಐ.ವಿ ಹೆಚ್.ಬಿ.ಐ.ಜಿ, ಸಿಫಲೀಸ್ ಇನ್ನೀತರ ಪರೀಕ್ಷೆ ಮಾಡಿದ ನಂತರವೇ 350 ರಿಂದ 450 ಎಂ.ಎಲ್ ರಕ್ತ ಪಡೆಯಲಾಗುತ್ತದೆ, ಅಪಘಾತ ಹೊಂದಿ ರಕ್ತಸ್ರಾವ ಆದವರಿಗೆ ಅನಿಮೀಯಾದಿಂದ ಬಳಲುತ್ತಿರುವ ಬಾಣಂತಿಯರಿಗೆ ದೊಟ್ಟ ಪ್ರಮಾಣದ ಶಾಸ್ತ್ರ ಚಿಕಿತ್ಸೆಗಳಿಗಾಗಿ, ಥಲಸಿಮೀಯಾ ಮತ್ತು ಹೀಮಿಫೆಮಿಯಾ ರೋಗಿಗಳಿಗೆ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದರು.
ಯಿಮ್ಸ್ ವೈದ್ಯಕೀಯ ನಿರ್ದೇಶಕರು ಡಾ.ಸಂದೀಪ.ಹೆಚ್ ಅವರು ಮಾತನಾಡಿ ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿ ರಕ್ತದಾನ ಮಾಡಲು ಮುಂದೆ ಬಂದು ಸಮಾಜದಲ್ಲಿ ಒಂದು ಪ್ರೇರಣೆ ಆಗಬೇಕು ಎಂದು ಹೇಳಿದರು. ಯಾದಗಿರಿಯಲ್ಲಿ ರಕ್ತಕೇಂದ್ರ ಆರಂಭವಾಗಿದ್ದು ತುಂಬಾ ಜನರ ರಕ್ತದಾನದ ಅವಶ್ಯಕತೆ ಇದೆ ಎಂದು ಹೇಳಿದರು.
ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಪಾಟೀಲ್, ಅವರು ಮಾತನಾಡಿದರು, ಕರ್ನಾಟಕದಲ್ಲಿ ಶೇ.1 ರಷ್ಟು ಜನರಿಗೆ ಪ್ರತಿ ವರ್ಷ ರಕ್ತದಾನದ ಅವಶ್ಯಕತೆ ಇದೆ ಆದರೆ 0.5 ಶೇಕಡಾ ಕೂಡ ರಕ್ತದಾನಿಗಳು ತುರ್ತು ಸಂದರ್ಭದಲ್ಲಿ ಲಭ್ಯವಿರುವುದಿಲ್ಲ ಕಾರಣ ರಕ್ತದಾನ ಒಂದು ಮಹಾ ಪುಣ್ಯದ ಕೆಲಸ ಜೀವ ಉಳಿಸುವ ಕಾರ್ಯ. ರಕ್ತವನ್ನು ಕೃತ್ರಿಮವಾಗಿ ತಯಾರಿಸಲು ಸಾದ್ಯವಿಲ್ಲ ಅದು ಕೇವಲ ಮಾನವನ ದೇಹದಲ್ಲಿ ಮಾತ್ರ ಉತ್ಪತ್ತಿಯಾಗುತ್ತದೆ. ಆದ ಕಾರಣ ಇನ್ನೀತರರ ಜೀವದ ಬಗ್ಗೆ ಕಾಳಜಿ ಇರುವವರು ರಕ್ತದಾನ ಮಾಡಬೇಕೆಂದು ಹೇಳಿದರು.
ಯಾದಗಿರಿ ಯಿಮ್ಸ್ ರಕ್ತ ಕೇಂದ್ರ ವೈದ್ಯಕೀಯ ಅಧಿಕಾರಿ ಡಾ.ಸಿದ್ದಲಿಂಗರೆಡ್ಡಿ ಅವರು ಮಾತನಾಡಿ, ರಕ್ತ ಕೇಂದ್ರ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಾದ ಯಿಮ್ಸ್ ನಿರ್ದೇಶಕರು ಡಾ.ಸಂದೀಪ.ಹೆಚ್ ಅವರು ಶ್ರೀ ನಿಂಗಪ್ಪ ಜಡಿ, ಅಭಿಲಾಷ ಮತ್ತು ಸುಪ್ರೀತ ಇವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವತಿಯಿಂದ ರಕ್ತದಾನ ಶಿಬಿರದಲ್ಲಿ 34 ಜನ ರಕ್ತದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಯಾದಗಿರಿ ಯಿಮ್ಸ್ ಪ್ರಾಂಶುಪಾಲರು ಡಾ.ನವಾಜ್ ಉಮರ್, ಯಾದಗಿರಿ ಯಿಮ್ಸ್ ಹಣಕಾಸು ಸಲಹೆಗಾರರು ಶ್ರೀ ಕಾಶಿನಾಥ ಜಿಲ್ಲಾ ಶಾಸ್ತ್ರ ಚಿಕಿತ್ಸಕರು ಡಾ.ರಿಜ್ವಾನಾ ಆಫ್ರೀನ್, ಡಾ.ಮಾನಸಾ ದಾಸ, ಡಾ.ಶಿವಕುಮಾರ, ಡಾ.ಮಲ್ಲಪ್ಪ, ಡಾ.ಪದ್ಮಾನಂದ ಗಾಯಕವಾಡ್, ಡಾ.ಹಣಮಂತರೆಡ್ಡಿ, ಯಿಮ್ಸ್ ಭೋದಕ ಸಿಬ್ಬಂದಿ ಜಿಲ್ಲಾ ಡ್ಕಾಪ್ಕೋಯೋ ಮತ್ತು ಕ್ಷಯರೋಗ ಘಟಕದ ಸಿಬ್ಬಂದಿಗಳು, ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

