ಸತ್ಯಕಾಮ ವಾರ್ತೆ ಯಾದಗಿರಿ:
ಈ ಹಿಂದೆ ಜನತಾ ಪರಿವಾರದಲ್ಲಿದ್ದಾಗ ನಮ್ಮ ನಾಯಕರಾದ ಸದಾಶಿವರಡ್ಡಿ ಕಂದಕೂರ ರವರ ಬಗ್ಗೆ ಚಾಡಿ ಹೇಳಿ ಅವರಿಗೆ ಅಧಿಕಾರಿ ತಪ್ಪಿಸಿದವರು ಯಾರು?, ಕಾಂಗ್ರೆಸ್‌ನಲ್ಲಿದ್ದಾಗ ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿಯವರ ಬಗ್ಗೆ ಹಿರಿಯ ನಾಯಕರಿಗೆ ಕಿವಿ ಊದಿ ಟಿಕೆಟ್ ತಪ್ಪಿಸಿದ್ದು ಯಾರೆಂಬದು ಯಾದಗಿರಿ ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ ರವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಯಾದಗಿರಿ ಶಾಸಕ ಚನ್ನಾರಡ್ಡಿ ತುನ್ನೂರ ರವರು ಕುಮಾರಸ್ವಾಮಿಯವರ ಹೇಳಿಕೆಗೆ ಸಂಬAಧಿಸಿದAತೆ ನೀಡಿದ ಪ್ರತಿಕ್ರಿಯೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇನ್ನೊಬ್ಬರ ಬಗ್ಗೆ ಚಾಡಿ ಹೇಳುವ ಸಂಸ್ಕೃತಿ ನಮ್ಮ ನಾಯಕರದ್ದಲ್ಲ ಎನ್ನುವುದು ಜನರಿಗೆ ಗೊತ್ತಿದೆ, ತಾವುಗಳು ಇನ್ನೊಬ್ಬರ ಬಗ್ಗೆ ಚಾಡಿ ಹೇಳಿ ಪಕ್ಷಗಳಲ್ಲಿ ಗುರುತಿಸಿಕೊಂಡು ಅಧಿಕಾರ ಪಡೆಯುವ ಹಂತಕ್ಕೆ ಬಂದಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರು ಯಾರೋ ಚಾಡಿ ಹೇಳಿದ್ದನ್ನು ಕೇಳಿ ಪ್ರತಿಕ್ರೀಯಿಸಿದ್ದಲ್ಲ, ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ್ದನ್ನು ಗಮನಿಸಿ, ಅಷ್ಟು ವರ್ಷಗಳಿಂದ ಇರದ ಅಭಿವೃದ್ಧಿ ಕಾಳಜಿ ಈಗ ಬಂದಿತೆ ಎಂದು ಹೇಳಿಕೆ ನೀಡಿದ್ದಾರೆ, ಅಷ್ಟೇ ಅಲ್ಲದೇ ಕುಮಾರಸ್ವಾಮಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಚಂಡ್ರಿಕಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾಗ ಇಲ್ಲಿನ ಅಭಿವೃದ್ಧಿಯನ್ನು ಕಣ್ಣಾರೆ ಕಂಡಿದ್ದಾರೆ ಹಾಗಾಗಿ ಖರ್ಗೆಯವರ ಬೆಂಗಳೂರು ಮೈಸೂರು ಹೇಳಿಕೆಗೆ ಪ್ರತಿಕ್ರೀಯಿಸಿದ್ದಾರೆ ಎಂದಿದ್ದಾರೆ.
ನಿಮ್ಮ ನಾಯಕರು ಕಳೆದ ೫೦ ವರ್ಷಗಳಲ್ಲಿ ಗುರುಮಠಕಲ್ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಗೊತ್ತಿದೆ, ಅವರು ಮಾಡಿದ ಅಭಿವೃದ್ಧಿಯಿಂದಲೇ ಇನ್ನೂ ನಮ್ಮ ಭಾಗದ ಜನತೆ ಗುಳೆ ಹೋಗುವುದು ತಪ್ಪುತ್ತಿಲ್ಲ, ನಮ್ಮ ಜನರು ಬದುಕಲು ಗುಳೆ ಹೋಗುವಂತಹ ವಾತಾವರಣ ಮಾಡಿದ್ದು ನಿಮ್ಮ ನಾಯಕರ ಅಭಿವೃದ್ಧಿಯೇ ಎಂದು ವ್ಯಂಗವಾಡಿದ್ದಾರೆ.
ಚಾಡಿ ಹೇಳುವ ಸಂಸ್ಕೃತಿ ಮತ್ತು ಇನ್ನೊಬ್ಬರನ್ನು ಓಲೈಕೆ ಮಾಡುವ ಸಂಸ್ಕೃತಿ ಬಿಟ್ಟು ಜನರ ಅಭಿವೃದ್ಧಿಗೆ ಶ್ರಮಿಸಿ, ತಾವು ಬಾಯಿ ಚಪಲಕ್ಕೆ ಯಾರದ್ದೋ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದನ್ನು ಬಿಡಿ, ೫೦ ವರ್ಷಗಳಲ್ಲಿ ಅಭಿವೃದ್ಧಿ ಎಷ್ಟಾಗಿದೆ ಎನ್ನುವುದು ಜನರಿಗೆ ಗೊತ್ತಿದೆ, ತಾವು ಭ್ರಷ್ಟಾಚಾರದ ಜನಕರಾಗಿದ್ದೀರಿ ನಿಮ್ಮ ಅವಧಿಯಲ್ಲಿ ಒಂದೊAದು ಇಲಾಖೆಯಲ್ಲಿ ನಿಮ್ಮ ಭ್ರಷ್ಟಾಚಾರದ ಮೇನು ಕಾರ್ಡ್ ಅತ್ಯಂತ ಜನಪ್ರೀಯವಾಗಿದ್ದು, ಅದನ್ನು ಮುಚ್ಚಿಕೊಳ್ಳಲು ತಾವು ಆಗಾಗ ಇನ್ನೊಬ್ಬರ ಬಗ್ಗೆ ಹೇಳಿಕೆ ಕೊಟ್ಟು ಜನರಲ್ಲಿ ಪರಿಚಿತರಾಗಲು ಪ್ರಯತ್ನಿಸುವುದನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ.
ಬೇರೆಯವರ ಅಕ್ಕಪಕ್ಕ ಕುಳಿತು ಯಾರನ್ನೋ ಖುಷಿ ಪಡಿಸಲು ಚಾಡಿ ಹೇಳುವುದು ನಿಮ್ಮ ಸಂಸ್ಕೃತಿ ನಮ್ಮ ನಾಯಕರ ಸಂಸ್ಕೃತಿಯಲ್ಲ ಅದನ್ನು ಬಿಟ್ಟು ಯಾದಗಿರಿ ಜನರ ಒಳಿತಿಗಾಗಿ ಕೆಲಸ ಮಾಡಿ ಎಂದು ತಿವಿದಿದ್ದಾರೆ.

